1. ಯಶೋಗಾಥೆ

ಚಿಕ್ಕ ಮಕ್ಕಳೆ, ಅಂಕಲ್ ಗಳೇ, ಆಂಟಿಗಳೇ, ಅಜ್ಜರೆ, ಮತ್ತು ಅಜ್ಜಿಯರೇ ಕೇಳಿ ಕೇಳಿ! ಒಬ್ಬ ಸಾಹಸ ಹುಡುಗನ ಸಾಹಸ ಯುಕ್ತ ಕಥೆ ಕೇಳಿ ಕ್ಷಮಿಸಿ ಓದಿರಿ!

Ashok Jotawar
Ashok Jotawar
Srikant Bolla

ಒಂದು ಹೊಸ ಕಥೆ ನಿಮ್ಮ ಮುಂದೆ ಇವತ್ತು ಹೇಳಲಿದ್ದೇನೆ, ಅದು ಏನಪ್ಪಾ ಅಂದರೆ- ಕೇಳಿ

ಒಂದು ಊರು. ಆ ಊರಲ್ಲಿ ಒಂದು ಮನೆ. ಆ ಮನೆಯಲ್ಲಿ ಕೃಷಿಕ ವಾತಾವರಣ. ಹಿಂತಾ ಮನೆಯಲ್ಲಿ ಒಬ್ಬ ಹುಡುಗನ ಜನನ ವಾಗುತ್ತೆ. ಆದರೆ ಹುಡುಗನ ಹಣೆಬರಹ ಯಾಕೋ ಸರಿ ಇಲ್ಲ ಅನಿಸುತ್ತೇನೋ? ಗೊತ್ತಿಲ್ಲ. ಏಕೆಂದರೆ ಹುಟ್ಟಿದ ಹಸು ಗುಸು ಕುರುಡ! ಆಗ ಊರಿನ ಪ್ರತಿಯೊಬ್ಬ ವ್ಯಕ್ತಿನೂ ಆ ಹಸುಗೂಸ್ಸನ್ನು ಯಾವುದಾದರು ಅನಾಥಾಲಯಕ್ಕೋ ಅಥವಾ ಮಗುವನ್ನು ಕೊಂದುಬಿಡಿ, ಎಂದು ಮಗುವಿನ ತಂದೆ ತಾಯಿಗೆ ಹೇಳಿದರು. ನಮ್ಮ ದೇಶದ  ಜನರಿಗೆ ಬೇರೆಯವರ ಮನೆಯ ವಿಚಾರದಲ್ಲಿ ಮೂಗುತೂರಿಸುವುದು  ಅಂದರೆ ತುಂಬಾ ಖುಷಿ. ಇರ್ಲಿ ಬಿಡಿ, ಆದರೆ ಆ ಮಗುವಿನ ತಂದೆ ತಾಯಿ ಹೆದರದೆ ತಮ್ಮ ಮಗುವನ್ನು ಬೆಳಸುತ್ತ ಅದರ ಲಾಲನೆ  ಪಾಲನೆ ಯನ್ನು ತುಂಬಾ ಚನ್ನಾಗಿ ಮಾಡುತ್ತ ಬಂದರು.

ಮಗು ತನ್ನ 10 ನೇ ತರಗತಿಗೆ ಬಂದಾಗ  ಶಾಲೆಯಲ್ಲಿ ಎಲ್ಲರು ಈ  ಹುಡುಗನ್ನನ್ನು ತುಂಬಾ ತಿರಸ್ಕಾರದಿಂದ ನೋಡಲು ಪ್ರಾರಂಭಿಸಿದರು. ಆದರೂ ಈ ಹುಡುಗ ಚನ್ನಾಗಿ ನಂಬರ್ ತಗೆದುಕೊಂಡು ಒಳ್ಳೆ ಪರ್ಸಂಟೇಜ್ ನಿಂದ ಪಾಸಾದ. ಮುಂದೆ PUC ಹೋದಾಗ ಈ ಹುಡುಗನಿಗೆ ವಿಜ್ಞಾನ  ಓದುವ ಅಸೆ ಮತ್ತೆ ಕಾಲೇಜು ನವರೊಂದಿಗೆ ಜಗಳ. ಆದರೂ 6  ತಿಂಗಳ ನಂತರ ಹುಡುಗನಿಗೆ ಕ್ಲಾಸ್ಸಿನಲ್ಲಿ ಕುಳಿತು ಕೊಳ್ಳಲು ಅನುಮತಿ ನೀಡಲಾಯಿತು. ಮತ್ತು ಈ ಹುಡುಗ  PUC ಯಲ್ಲಿ 98 % ಗಳಷ್ಟು ಅಂಕಗಳನ್ನು ತಗೆದುಕೊಂಡು IIT ಯ ತಯಾರಿಯಲ್ಲಿ ತೊಡಗಿಸಿಕೊಂಡ ಮತ್ತು IIT ಯಲ್ಲಿ ತನ್ನ ಒಂದು ದೈಹಿಕ ಹೀನತೆಯಿಂದ IIT ಗೆ ಆಯ್ಕೆ ಯಾಗಲಿಲ್ಲ. ಆದರೆ JEE ಎಂಜಿನಿಯರಿಂಗ್ ಕ್ಷೇತ್ರದ ಅತಿ ದೊಡ್ಡ ಕಠಿಣ ವಾದ ಪರೀಕ್ಷೆಯಲ್ಲಿ ಉತ್ತೀರ್ಣನಾದ.

ನಂತರ ಆ ಹುಡುಗ MIT ಅಮೇರಿಕಾ ದ ಟೆಕ್ನಾಲಾಜಿ ಶಾಲೆ ಯಲ್ಲಿ ಆಯ್ಕೆಯಾದ ಮತ್ತು ಭಾರತದ ಮೊಟ್ಟಮೊದಲ ಅಂಧ ಅಂತಾರಾಷ್ಟ್ರೀಯ ವಿಧ್ಯಾರ್ಥಿ ಯಾದ.

ನಂತರ ಆ ಹುಡುಗನಿಗೆ ಅಲ್ಲಿಯೇ ತುಂಬಾ ಕೆಲಸ ಇದ್ದರು ತನ್ನ ಹುಟ್ಟು ದೇಶವಾದ ಭಾರತಕ್ಕೆ ಬಂದು ಇಲ್ಲಿಯೇ ತನ್ನ ಆಸೆಯನ್ನು  ಪೂರೈಸಕೊಳ್ಳಬೇಕು ಎಂದು ಕೆಲಸ ಹುಡುಕಾಡುವಾಗ ಒಬ್ಬ ದೊಡ್ಡ ಉದ್ಯಮಿ ಈ  ಹುಡುಗನ ವಿದ್ವತ್ತು ನೋಡಿ ಅವನಿಗೆ ಕಲಿಯಲು ನಂತರ ಅವನ ಒಂದು ಕೆಲಸಕ್ಕೆ ಹೂಡಿಕೆಯು ಮಾಡಿದರು. ಅವರು ಯಾರು ಅಂದರೆ 'ರತನ್ ಟಾಟಾ'.

;

ಇಲ್ಲಿಯವರೆಗೂ ಎಲ್ಲರು ಕಥೆ ಓದಿದಿರಿ. ನಿಮ್ಮಲ್ಲಿ ಆ ಒಬ್ಬ ಹುಡುಗ ಯಾರು ಅಂತ ತಿಳಿದುಕೊಳ್ಳಲು ಅಸೆ ಮೂಡಿರಬೇಕು ಅಂದು ಅನಿಸುತ್ತೆ. ಆ ಹುಡುಗನ ಹೆಸರು ಶ್ರೀಕಾಂತ್ ಬೊಲ್ಲ. ಇವರು ಆಂಧ್ರಪ್ರದೇಶ ನವರು ಮತ್ತು ಇವರು 1992 ರಲ್ಲಿ ಸೀತಾರಾಂಪುರಮ್ ಎಂಬ ಗ್ರಾಮ ದಲ್ಲಿ ಜನಿಸಿದರು. ಮತ್ತು ಇವತ್ತು  ಇವರ ಒಂದು ಕಂಪನಿ ಸುಮಾರು 100 ರೂ.ರಿಂದ 200 ರೂ.ಕೋಟಿ ಯಷ್ಟು ವರ್ಷಕ್ಕೆ ಹುಟ್ಟಿಸುತ್ತೆ ಮತ್ತು ಇವರು ನೂರಾರು ಜನರಿಗೆ ಅನ್ನನೀಡೋ ಪ್ರಭುವಾಗಿದ್ದರೆ.

ಇನ್ನಷ್ಟು ಓದಿರಿ:

ಕೇಳಿ ಕೇಳಿ ಕೇಳಿ! ಫ್ರೀ ನಲ್ಲಿ ಸಿಗಲಿದೆ ಬೆಳಕು? 2021 ರಲ್ಲಿ ಶುರುವಾಗಿದೆ ಸರ್ಕಾರದ ವತಿಯಿಂದ ಫ್ರೀ ಯಾಗಿ ಬಲ್ಬ್ ಕೊಡುವ ಪ್ರಕ್ರಿಯೆ.

ಎಚ್ಚರ ಜನರೇ ಎಚ್ಚರ! ಓಮೈಕ್ರೋನ್ ನಿಂದ ಉಳಿಯಲು ದಾರಿ ಏನು?

ಯುವಕರಿಗೆ ಸಿಹಿಸುದ್ದಿ! ಭಾರತ ಸೇನೆಯನ್ನು ಸೇರಲು ಆಸೆ ಇಟ್ಟವರಿಗೆ ಸಿಹಿ ಸುದ್ಧಿ!

Share your comments

Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2022 Krishi Jagran Media Group. All Rights Reserved.