1. ಸುದ್ದಿಗಳು

weather in Karnataka ಕರ್ನಾಟಕದಲ್ಲಿ ಇನ್ನೆರಡು ದಿನ ಹೇಗಿದೆ ನೋಡಿ ವೆದರ್‌

Hitesh
Hitesh
ಮುಂದಿನ 2 ದಿನ ರಾಜ್ಯದಲ್ಲಿ ಹೇಗಿರುತ್ತೆ ನೋಡಿ ಹವಾಮಾನ

ರಾಜ್ಯದಾದ್ಯಂತ ಬಹುತೇಕ ಒಣ ವಾತಾವರಣ ಇದೆ. ಮಳೆಯ ಮುನ್ಸೂಚನೆ ಇಲ್ಲ.

ಇನ್ನು ಎರಡು ದಿನ ರಾಜ್ಯದಲ್ಲಿ ಹವಾಮಾನ ಹೇಗಿರಲಿದೆ ಎನ್ನುವ ಮುನ್ಸೂಚನೆ ಇಲ್ಲಿದೆ.

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಒಣಹವೆ ಮುಂದುವರಿದಿದೆ.

ಮಂಗಳವಾರ ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ

12 ಡಿಗ್ರಿ ಸೆಲ್ಸಿಯಸ್‌ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ.

ಮುಂದಿನ 24 ಗಂಟೆಯ ಅವಧಿಯಲ್ಲಿ ರಾಜ್ಯದ ಹವಾಮಾನ

ರಾಜ್ಯದಲ್ಲಿ ಮುಂದಿನ 24 ಗಂಟೆಯ ಅವಧಿಯಲ್ಲಿ ರಾಜ್ಯದಾದ್ಯಂತ ಒಣಹವೆ ಮುಂದುವರಿಯಲಿದೆ.

ಇನ್ನು ಮುಂದಿನ 48 ಗಂಟೆಯ ಅವಧಿಯಲ್ಲೂ ರಾಜ್ಯದಾದ್ಯಂತ ಒಣಹವೆ ಮುಂದುವರಿಯುವ ಸಾಧ್ಯತೆ

ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ರಾಜ್ಯದಲ್ಲೂ ಮೈಕೊರೆವ ಚಳಿ: ಉತ್ತರ ಕರ್ನಾಟಕದ ವಿವಿಧೆಡೆ ಹಾಗೂ ಒಳನಾಡಿನಲ್ಲಿ ಚಳಿ ವಾತಾವರಣ ಇದೆ.

ರಾಜ್ಯದಲ್ಲಿ ಇನ್ನೂ ಎರಡರಿಂದ ಮೂರು ದಿನಗಳ ಕಾಲ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ

ಬೆಂಗಳೂರಿನಲ್ಲಿ ಗುರುವಾರ ಹಾಗೂ ಶುಕ್ರವಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು,

ಕೆಲವು ಕಡೆ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ

ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. 

ಇನ್ನು ಈ ಅವಧಿಯಲ್ಲಿ ಗರಿಷ್ಠ ಉಷ್ಣಾಂಶವು 30 ಮತ್ತು ಕನಿಷ್ಠ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ

ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 48 ಗಂಟೆಯ ಅವಧಿ: ಮುಂದಿನ 48 ಗಂಟೆಯ ಅವಧಿಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ.

ಅಲ್ಲದೇ ಬೆಳಗಿನ ಜಾವದಲ್ಲಿ ದಟ್ಟ ಮಂಜು ಅಲ್ಲಲ್ಲಿ ಆವರಿಸುವ ಸಾಧ್ಯತೆ ಇದೆ.

ಉಳಿದಂತೆ ಗರಿಷ್ಠ ಉಷ್ಣಾಂಶವು 30 ಮತ್ತು ಕನಿಷ್ಠ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದಿದೆ ವರದಿ.

ಉತ್ತರ ಭಾರತದಲ್ಲಿ ಮೈಕೊರೆಯ ತಂಡಿ

ಉತ್ತರ ಭಾರತದಲ್ಲಿ ಕಳೆದ ಒಂದು ವಾರದಿಂದ ಮೈಕೊರೆಯುವ ಚಳಿ ವಾತಾವರಣ ಇದೆ.

ಕಡಿಮೆ ತಾಪಮಾನವು 3ರಿಂದ 6 ಡಿಗ್ರಿ ಸೆಲ್ಸಿಯಸ್‌ ಇದೆ. 

ಉತ್ತರ ಭಾರತದ ರಾಜ್ಯಗಳಾದ ಉತ್ತರಖಂಡ್‌, ಪಂಜಾಬ್‌, ಹರಿಯಾಣ, ಚತ್ತೀಸ್ಗಢ್‌ 

ಹಾಗೂ ದೆಹಲಿ ಭಾಗದಲ್ಲಿ ಭಾರೀ ಚಳಿ ವಾತಾವರಣ ಇದೆ.

ಇನ್ನು ಉತ್ತರ ಪ್ರದೇಶ, ರಾಜಸ್ಥಾನದ ಕೆಲವು ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ 7ರಿಂದ 10 ಡಿಗ್ರಿ ಸೆಲ್ಸಿಯಸ್‌ ಇದೆ.

ಇನ್ನೈದು ದಿನ ಚಳಿ

ಇನ್ನೈದು ದಿನಗಳ ಕಾಲ ಉತ್ತರ ಭಾರತದಲ್ಲಿ ಚಳಿ ವಾತಾವರಣ ಮುಂದುವರಿಯಲಿದೆ ಎಂದು

ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. ದೆಹಲಿ ಹಾಗೂ ಉತ್ತರ ಭಾರತದ ಪ್ರದೇಶದಲ್ಲಿ

ಬೆಳಗಿನ ಜಾವ ದಟ್ಟ ಮಂಜು ಆವರಿಸಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

ಚಳಿಯ ಹವಾಮಾನ

ಮುಂದಿನ 4ರಿಂದ ಐದು ದಿನಗಳ ಕಾಲ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಭಾರೀ ಚಳಿ ವಾತಾವರಣ ಇರಲಿದ್ದು,

ಕೆಲವು ರಾಜ್ಯಗಳಲ್ಲಿ ಆರೆಂಜ್‌ ಹಾಗೂ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ದೆಹಲಿಯಲ್ಲಿ ಕಳೆದ ಎರಡು ದಿನಗಳ ಹಿಂದೆ

ಸಾಮಾನ್ಯ ಮಳೆಯಾಗಿದ್ದು, ಚಳಿ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಇನ್ನೂ ಒಂದು ವಾರಗಳ ಕಾಲ

ಚಳಿ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. 

Published On: 25 January 2024, 02:37 PM English Summary: Check the weather in Karnataka for the next two days

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.