ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ( Karnataka Legislative Assembly ) ವೃಂದದಲ್ಲಿನ ವಿವಿಧ ವೃಂದಗಳ 43 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ವರದಿಗಾರರು – 02
ಕಿರಿಯ ಸಹಾಯಕರು – 10
ಬೆರಳಚ್ಚುಗಾರರು – 01
ದಲಾಯತ್ – 26
MNCFC ಇಂಟರ್ನ್‌ಶಿಪ್: ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಅಡಿಯಲ್ಲಿ ತರಬೇತಿ ಅವಕಾಶ
ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ
ವೇತನ ಶ್ರೇಣಿ
ವರದಿಗಾರರು – ರೂ.37,900 ರಿಂದ 70,850
ಕಂಪ್ಯೂಟರ್ ಆಪರೇಟರ್ – ರೂ.30,350 ರಿಂದ 58,250
ಕಿರಿಯ ಸಹಾಯಕರು – ರೂ.21,400 ರಿಂದ 42,000
ಬೆರಳಚ್ಚುಗಾರರು – ರೂ.21,400 ರಿಂದ 42,000
ದಲಾಯತ್ – 17,000 ರಿಂದ 28,950
KPSC Recruitment: ಸಹಾಯಕ ಟೌನ್ ಪ್ಲಾನರ್ ಅರ್ಜಿ ಆಹ್ವಾನ.. 62,600 ರೂ ವೇತನ
Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!
ವಿದ್ಯಾರ್ಹತೆ
ಕನ್ನಡ ವರದಿಗಾರರಿಗೆ ಯಾವುದೇ ಅಂಗೀಕೃತ ವಿವಿಯಿಂದ ಪದವಿ, ಪ್ರವೀಣ ದರ್ಜೆಯ ಕನ್ನಡ ಶೀಘ್ರಲಿಪಿಗಾರ, ಕನ್ನಡ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕಂಪ್ಯೂಟರ್ ಆಪರೇಟರ್ – ಯಾವುದೇ ವಿವಿಯಿಂದ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಬ್ಯಾಚಲರ್ಸ್ ಪದವಿ ಅಥವಾ ಬಿಎಸ್ಸಿ ಕಂಪ್ಯೂಟರ್ ಸೈನ್ಸ್
ಕಿರಿಯ ಸಹಾಯಕರು – ಪದವಿ ಜೊತೆಗೆ ಗಣಕಯತಂತ್ರ ಸಾಮಾನ್ಯ ಜ್ಞಾನ ಹೊಂದಿರಬೇಕು.
ಬೆರಳಚ್ಚುಗಾರರು – ಎಸ್ಎಸ್ ಎಲ್ ಸಿ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಗಣಕ ಯಂತ್ರದ ಕನಿಷ್ಠ 1 ವರ್ಷ ತರಬೇತಿ
ದಲಾಯತ್ – 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ – ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗೆ 38 ವರ್ಷ, ಪರಿಶಿಷ್ಟ ಜಾರಿ, ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ
ಅರ್ಜಿ ಶುಲ್ಕ
ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಸಾಮಾನ್ಯ ವರ್ಗದ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕ್ರಾಸ್ ಮಾಡಿದ ರೂ.500ರ ಇಂಡಿಯನ್ ಪೋಸ್ಟಲ್ ಆರ್ಡರ್ ಅನ್ನು, 27 ಮೇ 2022 ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು -560001ಗೆ ಪಾವತಿಸಬೇಕು.
Share your comments