1. ಸುದ್ದಿಗಳು

ಶೀಘ್ರವೇ 2000 ಕ್ಕೂ ಹೆಚ್ಚು ಕಾನ್ಸಟೇಬಲ್ ಹುದ್ದೆಗಳ ನೇಮಕಾತಿ!

Kalmesh T
Kalmesh T
Recruitment: The recruitment of more than 2000 constables soon!

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನತೆಗೆ ಇಲ್ಲಿದೆ ಸಿಹಿ ಸುದ್ದಿ! ಶೀಘ್ರದಲ್ಲೇ ಕರ್ನಾಟಕ  ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 2000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ನಡೆಯಲಿದೆ ಎಂದು  ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ (Karnataka State Police Department) ಹಲವಾರು ಸಿಬ್ಬಂದಿ ಕೊರತೆ ಇದ್ದು ಇದನ್ನು ಸರಿಪಡಿಸಲು ಸದ್ಯದಲ್ಲೇ 2 ಸಾವಿರಕ್ಕೂ ಹೆಚ್ಚು ಕಾನ್ಸ್‌ಟೇಬಲ್ ನೇಮಕಾತಿಗೆ (constable recruitment) ಅಧಿಸೂಚನೆ ಬಿಡುಗಡೆ ಮಾಡಲಾಗುವುದು ಎಂದು  ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ (Karnataka Praveen sood) ಹೇಳಿದ್ದಾರೆ.

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

ಚುನಾವಣೆ ಇರುವ ಕಾರಣಕ್ಕೆ ಈಗಾಗಲೇ ಕೆಲಸಗಳು ಆರಂಭವಾಗಿದೆ. ರಾಜಕೀಯ ಪಕ್ಷಗಳು ಕೂಡ ಚುನಾವಣೆಯ ತಯಾರಿ ನಡೆಸುತ್ತಿವೆ. ಚುನಾವಣೆ ಸಮಯದಲ್ಲಿ ಹೆಚ್ಚು ಭದ್ರತೆಯ ಅಗತ್ಯವಿದೆ. ಹೀಗಾಗಿ ಇಲಾಖೆ ಕೂಡ ಸಿದ್ದವಾಗಬೇಕಿದೆ. ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಈಗಾಗಲೇ 4,000 ಪೊಲೀಸ್ ಕಾನ್ಸ್‌ಟೇಬಲ್ (Police constable)  ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರತಿಭಟನೆ, ಎಲೆಕ್ಷನ್, ಹಿಜಾಬ್ ವಿವಾದ ಸೇರಿದಂತೆ ಎಲ್ಲಾ ಕಠಿಣ ಸಮಯದಲ್ಲಿ ಕೆಲಸ ಮಾಡಿದ , ಚುನಾವಣೆ ಹಿನ್ನೆಲೆ ಬೇರೆ ಬೇರೆ ರಾಜ್ಯಗಳಿಗೂ ಹೋಗಿ ಬಂದಿರುವ ಕೆಎಸ್​​ಆರ್​​ಪಿ ಸಿಬ್ಬಂದಿ ಸೇರಿದಂತೆ ಎಲ್ಲರ  ಕಾರ್ಯವೈಖರಿಯನ್ನು ಹೊಗಳಿದ ಸೂದ್‌ , ಮುಂದಿನ ವರ್ಷ ಕೂಡ ಇದೇ ರೀತಿ ಸಿದ್ದರಾಗಿ ಎಂದು ಹೇಳಿದರು.  

NDDB ನೇಮಕಾತಿ: ಮಾ. 1,82,200 ಸಂಬಳ!

Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!

ಪಿಎಸ್​​ಐ ನೇಮಕಾತಿ ಅಕ್ರಮ ವಿಚಾರವಾಗಿ  ಪ್ರತಿಕ್ರಿಯೆ ನೀಡಿದ ಅವರು, ಮೊದಲ ಬಾರಿ 545 ಪಿಎಸ್ಐ ನೇಮಕಾತಿ ಅಕ್ರಮ ಎನ್ನಲಾದ ಪ್ರಕರಣ ಸಂಬಂಧ ಮಾಹಿತಿ ಬಂದ ಬಳಿಕ ಒಂದು ತಿಂಗಳು ವಿಚಾರಣೆ ನಡೆಸಲಾಗಿತ್ತು. ವಿಚಾರ ಗಮನಕ್ಕೆ ಬಂದ ನಂತರ ಸಾಕ್ಷಿ ಸಿಕ್ಕ ತಕ್ಷಣ ಎಫ್ಐಅರ್ ದಾಖಲಿಸಲಾಗಿತ್ತು‌. ಯಾರು ಆಯ್ಕೆಯಾಗಿದ್ದಾರೆ, ಯಾರು ಆಯ್ಕೆಯಾಗಿಲ್ಲ ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಇನ್ನು ಎಪ್ರಿಲ್ 17 ರಂದು ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಸಿದ್ದ ಪ್ರವೀಣ್ ಸೂದ್, 545 ಪಿಎಸ್‌ಐ ಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ದಿನಾಂಕ 03-10-2021ರಂದು ರಾಜ್ಯಾದ್ಯಂತ 92 ಕೇಂದ್ರಗಳಲ್ಲಿ ನಡೆಸಲಾಯಿತು. ಈ ಪರೀಕ್ಷೆಗೆ 54,104 ಅಭ್ಯರ್ಥಿಗಳು ಹಾಜರಾಗಿದ್ದರು. ಫಲಿತಾಂಶ ಪ್ರಕಟಣೆಯ ನಂತರ ಕೆಲವು ವ್ಯತ್ಯಾಸಗಳು ವರದಿಯಾದ ಮೇರೆಗೆ ಆಂತರಿಕ ವಿಚಾರಣೆ ನಡೆಸಲಾಯಿತು. ದಿನಾಂಕ 07-04-2022ರಂದು ಕೆಲವು ದುಷ್ಕೃತ್ಯಗಳ ಬಗ್ಗೆ ಪುರಾವೆಗಳು ಕಂಡು ಬಂದಿದ್ದರಿಂದ, ಗೃಹ ಸಚಿವರು ಸ್ವತಹ ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಮತ್ತು ಅಪಾದಿತ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಅದೇಶಿಸಿದರು. ಅದರಂತೆ 09-04-2022ರಂದು ಎಫ್‌ಐಆರ್ ದಾಖಲಿಸಲಾಯಿತು ಎಂದು ಹೇಳಿದ್ದರು.

ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ: 42,000 ಸಂಬಳ !

ಧಾರವಾಡ IIT ನೇಮಕಾತಿ..ಇಂಟರ್ನ್‌ ಹುದ್ದೆಗೆ ಅರ್ಜಿ ಆಹ್ವಾನ

ತನಿಖೆಯನ್ನು ನಿಷ್ಪಕ್ಷಪಾತವಾಗಿ ಮತ್ತು ಸಮಗ್ರವಾಗಿ ಶೀಘ್ರ ಗತಿಯಲ್ಲಿ ಪೂರ್ಣಗೊಳಿಸಲು ಗೃಹ ಸಚಿವರು ಸಿಐಡಿಗೆ ಆದೇಶಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತ್ರ, ಅಂತಿಮ ವರದಿ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.

ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಮೇಲ್ವಿಚಾರಕರು ಮತ್ತು ಸಹಾಯಕ ಸಿಬ್ಬಂದಿ ಭಾಗಿಯಾಗಿದ್ದಲ್ಲಿ, ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕರಣೆ ಮೂಲಕ ಎಚ್ಚರಿಕೆ ನೀಡಿದ್ದರು.

IndBank : ಪದವಿಧರರಿಗೆ ಇಂಡ್‌ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ

UIDAI ನೇಮಕಾತಿ 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಉದ್ಯೋಗ

Published On: 23 April 2022, 02:34 PM English Summary: The recruitment of more than 2000 constables soon!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.