1. ಸುದ್ದಿಗಳು

ಜಗತ್ತಿನ ಜನಸಂಖ್ಯೆ 800 ಕೋಟಿ; ಮುಂದಿನ ವರ್ಷ ಜನಸಂಖ್ಯೆಯಲ್ಲಿ ನಾವೇ ಫಸ್ಟ್‌!

Hitesh
Hitesh
The population of the world is 800 crores; Next year we will be the first in population!

ನವೆಂಬರ್‌ 15 ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಮಂಗಳವಾರ ವಿಶ್ವಸಂಸ್ಥೆ(United Nations) ಬಿಡುಗಡೆ ಮಾಡಿರುವ ಅಂಕಿ- ಅಂಶದ ಪ್ರಕಾರ, ಈ ಪ್ರಸಕ್ತ ವಿಶ್ವದ ಜನಸಂಖ್ಯೆ ಇದೀಗ 800 ಕೋಟಿ ದಾಟಿದೆ!

ಬೆಂಗಳೂರು ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡು ದಿನ ಮಳೆ!

ವಿಶ್ವ ಜನಸಂಖ್ಯಾ ದಿನದಂದು(World Population Day) ವಿಶ್ವಸಂಸ್ಥೆ(United Nations)ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ವಿಶ್ವದ ಜನಸಂಖ್ಯೆಯು ನ.15, 2022ಕ್ಕೆ 8 ಶತಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ.  

 ಇನ್ನು ಜಾಗತಿಕ ಜನಸಂಖ್ಯೆಯು 2030ರ ವೇಳೆಗೆ 8.5 ಶತಕೋಟಿ, 2050 ರಲ್ಲಿ 9.7 ಶತಕೋಟಿ ಮತ್ತು 2080 ರಲ್ಲಿ ಸುಮಾರು 10.4 ಶತಕೋಟಿ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

2100ರವರೆಗೆ ಅದೇ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎನ್ನಲಾಗಿದೆ!

ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ ವಿಸ್ತೃತ ವರದಿಯಲ್ಲಿ ಇನ್ನೂ ಹಲವು ಅಂಶಗಳು ಇವೆ. ವಾರ್ಷಿಕ ವಿಶ್ವ ಜನಸಂಖ್ಯೆಯ ಪ್ರಾಸ್ಪೆಕ್ಟ್ ವರದಿಯ ಪ್ರಕಾರ, ಜಾಗತಿಕ ಜನಸಂಖ್ಯೆಯು 1950 ರಲ್ಲಿ 2.5 ಶತಕೋಟಿ ಇತ್ತು.

ಅದಕ್ಕಿಂತ ಮೂರು ಪಟ್ಟು ಇದೀಗ ಹೆಚ್ಚಳವಾಗಿದೆ.   

1960ರ ದಶಕದಲ್ಲಿ ವಿಶ್ವ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿತ್ತು. ಆ ಬೆಳವಣಿಗೆ ಇತ್ತೀಚಿನ ದಶಕಗಳಲ್ಲಿ ಇಳಿಕೆ ಆಗಿದೆ.  

ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ 1962 ರಿಂದ 1965ರ ವರೆಗೆ ಗರಿಷ್ಠ ಶೇ. 2.1 ಇತ್ತು.

ಅದು 2020 ರಲ್ಲಿ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ. 2050ರ ವೇಳೆಗೆ ಸುಮಾರು ಶೇ. 0.5ಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ. 

ಧೈರ್ಯ ಮೆರೆದ ಐವರು ಮಕ್ಕಳಿಗೆ “ಶೌರ್ಯ” ಪ್ರಶಸ್ತಿಯ ಗರಿ!

ಎಲ್ಲೆಲ್ಲಿ ಜನಸಂಖ್ಯೆ ಹೆಚ್ಚಳ!

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ- ಅಂಶದ ಪ್ರಕಾರ 2022ರಲ್ಲಿ ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಎಂದು ಗುರುತಿಸಲಾಗಿದ್ದು, ಇಲ್ಲಿ 2.3 ಶತಕೋಟಿ ಜನರಿದ್ದಾರೆ.

ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ 2.1 ಶತಕೋಟಿ ಜನರಿದ್ದಾರೆ. ಚೀನಾ ಮತ್ತು ಭಾರತ, ತಲಾ 1.4 ಶತಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ!  

ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌! 

ವಿಶ್ವ ಜನಸಂಖ್ಯೆಯಲ್ಲಿ ಭಾರತ ಮುಂಚೂಣಿ!

ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತವು ಮುಂದಿನ ವರ್ಷ ಜನಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಲಿದ್ದು, ಜಗತ್ತಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವಾಗಲಿದೆ!

 ಈ ಬೆಳವಣಿಗೆ ಮಾನವ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲು ಎಂದೇ ವ್ಯಾಖ್ಯಾನಿಸಲಾಗಿದೆ.   ಇನ್ನು ವಿಶ್ವದ ಜನಸಂಖ್ಯೆ (World Population) ನವೆಂಬರ್‌ 15ರ ಬೆಳಿಗ್ಗೆ 800 ಕೋಟಿಗೆ ತಲುಪಿದ್ದು,

ಭೂಮಿಯ (Earth) ಮೇಲೆ ಮಾನವನ (Human) ಉಗಮದ ನಂತರ ಜನಸಂಖ್ಯೆ 100 ಕೋಟಿ ಗಡಿ ಮುಟ್ಟಲು ಸುಮಾರು 1803 ವರ್ಷದಷ್ಟು(ಕ್ರಿ.ಶ. 1803) ಸುದೀರ್ಘ ಅವಧಿ ಬೇಕಾಯಿತು ಎಂದು ಅಂದಾಜಿಸಲಾಗಿತ್ತು.  

ಹಾಲು, ಮೊಸರು ದರ ಏರಿಕೆಗೆ ಸಿ.ಎಂ ತಾತ್ಕಾಲಿಕ ತಡೆ! 

The population of the world is 800 crores; Next year we will be the first in population!

124 ವರ್ಷಗಳ ನಂತರ 1927ರಲ್ಲಿ ಜನಸಂಖ್ಯೆ 200 ಕೋಟಿ ಗಡಿ ಮೀರಿತ್ತು. ಮುಂದಿನ 33 ವರ್ಷಗಳಲ್ಲಿ ಎಂದರೆ 1960ರಲ್ಲಿ 300 ಕೋಟಿ ಹಾಗೂ ನಂತರದ 15 ವರ್ಷಗಳಲ್ಲಿ 400 ಕೋಟಿ ಜನಸಂಖ್ಯೆ ಗಡಿ ತಲುಪಿತು.

1975ರ ಬಳಿಕ ಜನಸಂಖ್ಯೆಯ ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಜನಸಂಖ್ಯೆಯಲ್ಲಿ 100 ಕೋಟಿಯಷ್ಟು ಏರಿಕೆ ಹೆಚ್ಚಳವಾಗಿರುವುದು ವರದಿ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯಾ ಬೆಳವಣಿಗೆ ದರದಲ್ಲಿ (Population Growth Rate)ಇಳಿಕೆ ಆಗಿದೆ.

ಇದನ್ನೂ ಓದಿರಿ: ತೆಲುಗು ನಟ ಮಹೇಶ್‌ ಬಾಬು ತಂದೆ ಕೃಷ್ಣ ಘಟ್ಟಮನೇನಿ ಇನ್ನಿಲ್ಲ!

The population of the world is 800 crores; Next year we will be the first in population!
The population of the world is 800 crores; Next year we will be the first in population!

 ಹೆಚ್ಚು ಜನಸಂಖ್ಯೆ ಇರುವ ದೇಶಗಳು!

 145 ಕೋಟಿ ಜನಸಂಖ್ಯೆಯೊಂದಿಗೆ ಚೀನಾ (China) ಮೊದಲ ಸ್ಥಾನದಲ್ಲಿದೆ. 141.2 ಕೋಟಿ ಜನಸಂಖ್ಯೆಯೊಂದಿಗೆ ಭಾರತ (India) 2ನೇ ಸ್ಥಾನದಲ್ಲಿದೆ.

ಮೂರು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ (United States of America) (33.50 ಕೋಟಿ), ಇಂಡೋನೇಷ್ಯಾ (Indonesia) (28 ಕೋಟಿ)

ಮತ್ತು ಪಾಕಿಸ್ತಾನ (Pakistan) (23.15 ಕೋಟಿ) ದೇಶಗಳಿವೆ.

ಅಂಕಿ ಅಂಶಗಳ ಪ್ರಕಾರ ಭಾರತವು ಮುಂದಿನ ವರ್ಷ ಚೀನಾವನ್ನೂ ಹಿಂದಿಕ್ಕಲಿದ್ದು, ಪ್ರಥಮ ಸ್ಥಾನಕ್ಕೆ ಜಿಗಿಯುವ ಸಾಧ್ಯತೆ ಇದೆ.

 ಈ ರಾಜ್ಯದ ಮಕ್ಕಳಿಗೆ ಮನೆ ಬಾಗಿಲಿಗೆ ಬಂದು ಕೊಡ್ತಾರೆ “ಆಧಾರ್‌ ಕಾರ್ಡ್‌”! 

Published On: 15 November 2022, 02:47 PM English Summary: The population of the world is 800 crores; Next year we will be the first in population!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.