1. ಸುದ್ದಿಗಳು

ಹಾಲು, ಮೊಸರು ದರ ಏರಿಕೆಗೆ ಸಿ.ಎಂ ತಾತ್ಕಾಲಿಕ ತಡೆ!

Hitesh
Hitesh
basavaraj bommai

ರಾಜ್ಯದಲ್ಲಿ ಇಂದಿನಿಂದ ಜಾರಿಯಾಗಬೇಕಿದ್ದ ಹಾಲು ಮತ್ತು ಮೊಸರಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾತ್ಕಾಲಿಕ ತಡೆ ನೀಡಿದ್ದಾರೆ.   

ಇದನ್ನೂ ಓದಿರಿ: ತೆಲುಗು ನಟ ಮಹೇಶ್‌ ಬಾಬು ತಂದೆ ಕೃಷ್ಣ ಘಟ್ಟಮನೇನಿ ಇನ್ನಿಲ್ಲ!

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(ಕೆಎಂಎಫ್)ವು ನಂದಿನಿ ಹಾಲು ಮತ್ತು ಮೊಸರಿನ ದರವನ್ನು 3 ರೂಪಾಯಿ ಹೆಚ್ಚಳ ಮಾಡುವುದಾಗಿ ಪ್ರಕಟಿಸಿತ್ತು.

ಅಲ್ಲದೇ ಪರಿಷ್ಕೃತ ದರವು ಮಂಗಳವಾರದಿಂದಲೇ ಜಾರಿಗೆ ಬರಲಿದೆ ಎಂದೂ ಹೇಳಲಾಗಿತ್ತು.

ಕೆಎಂಎಫ್‌ ಹಾಲು ಮತ್ತು ಮೊಸರಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ.  

ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ನವೆಂಬರ್‌ 20ರಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಂದಿನಿ ಹಾಲು, ಮೊಸರಿನ ದರ ಹೆಚ್ಚಳ! 

ಹಾಲಿನ ದರ ಏರಿಕೆ ಮಾಡುವ ವಿಚಾರವಾಗಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ.  

ಕಳೆದ ಎರಡು ತಿಂಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಹೆಚ್ಚಳದ ಬಗ್ಗೆ ನಿರಂತರವಾಗಿ ಚರ್ಚೆ ನಡೆಯುತ್ತಲೇ ಇದೆ.

ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್‌ ಸಹ ನಿರಂತರವಾಗಿ ಒತ್ತಾಯ ಮಾಡುತ್ತಲೇ ಇದೆ.

ಈ ರಾಜ್ಯದ ಮಕ್ಕಳಿಗೆ ಮನೆ ಬಾಗಿಲಿಗೆ ಬಂದು ಕೊಡ್ತಾರೆ “ಆಧಾರ್‌ ಕಾರ್ಡ್‌”!

ಈ ನಡುವೆ ಕೆಎಂಎಫ್‌ ತುಪ್ಪದ ದರದಲ್ಲೂ ನಿರಂತರವಾಗಿ ದರ ಹೆಚ್ಚಳವನ್ನು ಮಾಡಿದೆ. ರೈತರಿಗೆ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  

ಕೆಎಂಎಫ್‌ ಬೆಲೆ ಏರಿಕೆ ನಿರ್ಧಾರವನ್ನು ಸಿ.ಎಂ ತಡೆಹಿಡಿದ ಬೆನ್ನಲ್ಲೇ ಬೆಲೆ ಏರಿಕೆ ನಿರ್ಧಾರವನ್ನು ತಡೆ ಹಿಡಿದಿರುವುದಾಗಿ ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.  

ಕೆಎಂಎಫ್‌ ಹಾಲಿನ ದರವನ್ನು ಹೆಚ್ಚಳ ಮಾಡುವುದಾಗಿ ಸೋಮವಾರ ಕೆಎಂಎಫ್‌ ತಿಳಿಸಿತ್ತು.

ನಂದಿನಿ ಹಾಲಿನ ದರ   ರೂ,ಏರಿಕೆ ಮಾಡಿತ್ತು. ಸೋಮವಾರ ಮಧ್ಯರಾತ್ರಿಯಿಂದಲೇ ನಂದಿನಿ ಹಾಲಿನ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಮಂಗಳವಾರ ಬೆಳಗ್ಗೆಯಿಂದ ಲೀಟರ್ ಹಾಲಿನ ಮೇಲೆ 3 ರೂ. ಏರಿಕೆಯಾಗಲಿದೆ.

ನಂದಿನಿ ಹಾಲು ಮಾತ್ರವಲ್ಲದೇ, ಮೊಸರು ದರ ಕೂಡ ತಲಾ 3 ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್‌ ಪರಿಷ್ಕರಣೆ ಮಾಡಿತ್ತು. 

ಈ ಆದೇಶವನ್ನು ಸದ್ಯ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.  

ಜನರಿಗೆ ಕಹಿಸುದ್ದಿ: ಕೆಎಂಎಫ್‌ನಿಂದ “ಬಿಸಿ ತುಪ್ಪ”!

Published On: 15 November 2022, 10:40 AM English Summary: CM temporarily halts increase in milk and curd prices!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.