1. ಸುದ್ದಿಗಳು

ಧೈರ್ಯ ಮೆರೆದ ಐವರು ಮಕ್ಕಳಿಗೆ “ಶೌರ್ಯ” ಪ್ರಶಸ್ತಿಯ ಗರಿ!

Hitesh
Hitesh
"Shaurya" award to five brave children!

ರಾಜ್ಯದ ಐವರು ಮಕ್ಕಳಿಗೆ ಈ ಬಾರಿಯ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  

ಹಾಲು, ಮೊಸರು ದರ ಏರಿಕೆಗೆ ಸಿ.ಎಂ ತಾತ್ಕಾಲಿಕ ತಡೆ!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನ ಬಾಲಭವನದಲ್ಲಿ ಐವರು ಮಕ್ಕಳಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸೋಮವಾರ ನಡೆದ ಮಕ್ಕಳ ದಿನಾಚರಣೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಲ್ವರು ಬಾಲಕಿಯರು ಮತ್ತು ಒಬ್ಬ ಬಾಲಕನನ್ನು ಗೌರವಿಸಲಾಗಿದೆ.

ಎಲ್ಲರಿಗೂ 10 ಸಾವಿರ ರೂಪಾಯಿ ನಗದು ಪ್ರದಾನ ಮಾಡಲಾಗಿದೆ.

ಇದನ್ನೂ ಓದಿರಿ: ತೆಲುಗು ನಟ ಮಹೇಶ್‌ ಬಾಬು ತಂದೆ ಕೃಷ್ಣ ಘಟ್ಟಮನೇನಿ ಇನ್ನಿಲ್ಲ!

ಕಳೆದ ವರ್ಷ ಅಪ್ರತಿಮ ಸಾಹಸ ಮೆರೆದವರಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರಶಸ್ತಿಗೆ ಭಾಜನರಾದ ಮಕ್ಕಳು ಎಲ್ಲರೂ ಗ್ರಾಮೀಣ ಭಾಗದ ಮಕ್ಕಳು ಎನ್ನುವುದು ವಿಶೇಷವಾಗಿದೆ.

ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ಧರೊಬ್ಬರನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದ ಕೊಡಗು ಜಿಲ್ಲೆಯ ನಮ್ರತಾ,

ವಿದ್ಯುತ್‌ ತಂತಿ ಸ್ಪರ್ಶದಿಂದ ಅಪಾಯಕ್ಕೆ ಸಿಲುಕಿದ್ದ ತನ್ನ ಸಹೋದರನನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದ ಶಿವಮೊಗ್ಗ ಜಿ ಲ್ಲೆಯ ಪ್ರಾರ್ಥನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

 ಈ ರಾಜ್ಯದ ಮಕ್ಕಳಿಗೆ ಮನೆ ಬಾಗಿಲಿಗೆ ಬಂದು ಕೊಡ್ತಾರೆ “ಆಧಾರ್‌ ಕಾರ್ಡ್‌”!

ಇನ್ನು ರಸ್ತೆ ಅಪಘಾತದಿಂದ ಜೀಪ್‌ನಲ್ಲಿ ಸಿಲುಕಿಕೊಂಡಿದ್ದ ತನ್ನ ತಂದೆಯನ್ನು ಕಾರವಾರ ಜಿಲ್ಲೆಯ ಕೌಶಲ್ಯ ವೆಂಕಟರಮಣ ರಕ್ಷಿಸಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಕಾವ್ಯಾ ಭಾಸ್ಕರ್‌ಹೆಗಡೆ ಬಾಲಕಿ, ರೈಲು ಹಳಿ ದಾಟುವಾಗ ಅಪಾಯಕ್ಕೆ ಸಿಲುಕಿ ಜೀವಾಪಾಯದಲ್ಲಿದ್ದ ವೃದ್ಧೆಯೊಬ್ಬರನ್ನು ಹಳಿಯಿಂದ ದೂರಕ್ಕೆ ಎಳೆದು ರಕ್ಷಿಸುವ ಮೂಲಕ ಶೌರ್ಯ ಪ್ರದರ್ಶಿಸಿದ್ದರು.   

ಹಳ್ಳಕ್ಕೆ ಬಿದ್ದ ಜೀಪಿನ ಗಾಜನ್ನು ಮೆಟಲ್‌ಬಾಟಲಿಯಿಂದ ಒಡೆದು ನೀರನ್ನು ಹೊರ ಹಾಕಿ ತಂದೆ, ತಾಯಿಯನ್ನು ದಾವಣಗೆರೆ ಜಿಲ್ಲೆಯ ಕೀರ್ತಿ ವಿವೇಕ್‌ಎಂ.ಸಾಹುಕಾರ್‌ಎಂಬ ರಕ್ಷಣೆ ಮಾಡಿದ್ದ.

ಈ ಐವರೂ ಮಕ್ಕಳಿಗೆ ಸೋಮವಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.   

ಜನರಿಗೆ ಕಹಿಸುದ್ದಿ: ಕೆಎಂಎಫ್‌ನಿಂದ “ಬಿಸಿ ತುಪ್ಪ”! 

Published On: 15 November 2022, 11:25 AM English Summary: "Shaurya" award to five brave children!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.