ಕೋವಿಡ್ 19 ನಿರ್ಬಂಧಗಳು ಸಡಿಲವಾದ ಬಳಿಕ, ತಂಪು ಪಾನೀಯ ಹಾಗೂ ಐಸ್ ಕ್ರೀಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳವಾಗಿದ್ದು, ಹೀಗಾಗಿ ಸಕ್ಕರೆ ಬಳಕೆಯೂ ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ಮಾಹಿತಿ ನೀಡಿದ್ದಾರೆ.
ಕೋವಿಡ್ ನಿರ್ಬಂದ ಸಡಿಲಿಕೆ, ಕೋವಿಡ್ ಭಯದಿಂದ ಮುಕ್ತರಾದ ಜನ.. ಈ ಎಲ್ಲಾ ಅಂಶಗಳು ಭಾರತದ ಸಕ್ಕರೆ ಮಾರುಕಟ್ಟೆ ಪುಟಿದೇಳುವಂತೆ ಮಾಡಿದೆ. ಕೊರೊನಾದಿಂದಾಗಿ ಬಿದ್ದಿದ್ದ ಸಕ್ಕರೆ ಮಾರುಕಟ್ಟೆ ಇದೀಗ, ಪುಟಿದೇಳುತ್ತಿದ್ದು ದೇಶದ ಒಟ್ಟಾರೆ ಸಕ್ಕರೆ ಬಳಕೆ ದಾಖಲೆಯ ಪ್ರಮಾಣ ಮುಟ್ಟಿದೆ.
PM ಕಿಸಾನ್ ರೈತರಿಗೆ ಬಿಗ್ ನ್ಯೂಸ್: OTP ಮೂಲಕ ಆಧಾರ್ ಕಾರ್ಡ್ e-KYC ರದ್ದು..
Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ
2021-22ರ ಮಾರುಕಟ್ಟೆ ವರ್ಷ ಸೆಪ್ಟೆಂಬರ್ 30 ಕ್ಕೆ ಅಂತ್ಯವಾಗಲಿದ್ದು, ಸಕ್ಕರೆಗೆ ಈಗ ಇರುವ ಬೇಡಿಕೆ ನೋಡಿದರೆ ವರ್ಷಾಂತ್ಯಕ್ಕೆ ಒಟ್ಟು ಬೇಡಿಕೆ ಶೇ. 3 ರಷ್ಟು ಏರಿಕೆಯಾಗಲಿದೆ. ಆ ವೇಳೆಗೆ ಒಟ್ಟು 27.2 ಮಿಲಿಯನ್ ಟನ್ ಸಕ್ಕರೆ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ.
ISMA ಪ್ರಕಾರ, 2021/22 ಮಾರುಕಟ್ಟೆ ವರ್ಷದಲ್ಲಿ 7.2 ಮಿಲಿಯನ್ ಟನ್ ಸಕ್ಕರೆಯನ್ನು ವಿದೇಶಕ್ಕೆ ಕಳುಹಿಸಲು ಭಾರತೀಯ ಗಿರಣಿಗಳು ಈಗಾಗಲೇ ಒಪ್ಪಂದಗಳಿಗೆ ಸಹಿ ಹಾಕಿವೆ, ರಫ್ತುಗಳನ್ನು ದಾಖಲೆಯ ಎತ್ತರದಲ್ಲಿ ಇರಿಸಿದೆ. ಪರಿಣಾಮವಾಗಿ, ಸಿಹಿಕಾರಕಗಳ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕರಲ್ಲಿ ಸಂಗ್ರಹಣೆಗಳು ಕಡಿಮೆಯಾಗಬಹುದು, ಸ್ಥಳೀಯ ವೆಚ್ಚವನ್ನು ಹೆಚ್ಚಿಸಬಹುದು.
ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.
ಗುಡ್ ನ್ಯೂಸ್: ಹೈನುಗಾರರಿಗೆ ಕ್ರೆಡಿಟ್ ಕಾರ್ಡ್! ದೇಶದಲ್ಲೆ ಮೊದಲು
ಹೆಚ್ಚಿನ ದೇಶೀಯ ಬೆಲೆಗಳು ಗಿರಣಿಗಳು ಕಡಿಮೆ ಸಕ್ಕರೆಯನ್ನು ರಫ್ತು ಮಾಡಲು ಮತ್ತು ಹೊಸ ರಫ್ತುಗಳ ಮೇಲೆ ಸರ್ಕಾರದ ಮಿತಿಗಳಿಗೆ ಕಾರಣವಾಗಬಹುದು, ಆದ್ದರಿಂದ ವಿಶ್ವ ಬೆಲೆಗಳನ್ನು ಹೆಚ್ಚಿಸಬಹುದು.
"ಬೇಸಿಗೆಯು ಪ್ರಾರಂಭವಾಗುತ್ತಿದ್ದಂತೆ, ಪಾನೀಯ ತಯಾರಕರಿಂದ ಬೇಡಿಕೆ ಹೆಚ್ಚಾಗಿದೆ. ಹಿಂದಿನ ವರ್ಷದಂತೆ ಈ ವರ್ಷ COVID ಇಲ್ಲ. ಎಂದು" ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ನಾಯ್ಕನವರೆ ಹೇಳಿದರು.
ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ?
ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಬೇಡಿಕೆ ಹೆಚ್ಚಳವಾಗಿದ್ದರಿಂದ ಕಬ್ಬು ಕಾರ್ಖಾನೆ ಮಾಲಿಕರ ಮುಖದಲ್ಲಿ ಮಂದಹಾಸ ಬಿರಿದಿದೆ.
ಸಕ್ಕರೆಗೆ ಜಾಗತಿಕ ಬೇಡಿಕೆ ಕೂಡ ಹೆಚ್ಚಳವಾಗಿದ್ದು, ಬೆಲೆ ಏರಿಕೆಯಾಗಿದ್ದರಿಂದ ಸಕ್ಕರೆ ಕಾರ್ಖಾನೆಗಳು ಭಾರೀ ಪ್ರಮಾಣದಲ್ಲಿ ರಫ್ತು ಮಾಡಲು ಮುಂದಾಗಿದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ. ಹೀಗಾಗಿ ತಾತ್ಕಾಲಿಕವಾಗಿ ಸಕ್ಕರೆ ರಫ್ತು ನಿಷೇಧ ಮಾಡುವ ಆಲೋಚನೆಯೂ ಸರ್ಕಾರದ ಮುಂದೆ ಇದೆ ಎಂದು ಗೊತ್ತಾಗಿದೆ.
Share your comments