1. ಸುದ್ದಿಗಳು

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

Kalmesh T
Kalmesh T
Good News : Credit card for dairy farmers! First in the country

ಸಹಕಾರ ರಂಗದ ಕುರಿತು ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಸಹಕಾರ ವಿಶ್ವವಿದ್ಯಾಲಯ (Sahakara University) ಸ್ಥಾಪಿಸುವುದಾಗಿ ಘೋಷಿಸಿರುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ(Amit Shah), ಸಹಕಾರ ಕ್ಷೇತ್ರದ ಪಾರದರ್ಶಕ ನಿರ್ವಹಣೆಗೆ ನೀತಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ. ಇದೇ ವೇಳೆ, ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌(Credit Card) ವಿತರಿಸಲು ಉದ್ದೇಶಿಸಿದ್ದು, ಆ ಯೋಜನೆ ಕರ್ನಾಟಕದಿಂದಲೇ (Karnataka) ಪ್ರಾಯೋಗಿಕವಾಗಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಸಹಕಾರ ಇಲಾಖೆ ಆಯೋಜಿಸಿದ್ದ ಸಹಕಾರ ಮೇಳದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ನ ಲಾಂಛನ ಬಿಡುಗಡೆ ಮತ್ತು ಸೌಹಾರ್ದ ಸಹಕಾರಿ ಸೌಧವನ್ನು ವರ್ಚುವಲ್‌ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಇದನ್ನು ಓದಿರಿ; Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ಎಚ್ಚರಿಕೆ: ಕರ್ನಾಟಕದಲ್ಲಿ ಭಾರೀ ಮಳೆ! ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ

ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ ಮೂಲಕ ಎಲ್ಲಾ ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಕೇಂದ್ರದ ಯೋಜನೆಯಾಗಿದ್ದು, ಪ್ರಾಯೋಗಿಕವಾಗಿ ಕರ್ನಾಟಕದಿಂದಲೇ ಆರಂಭವಾಗಲಿ. ಇದಕ್ಕೆ ಬೇಕಾದ ಎಲ್ಲ ಸಹಕಾರ-ಸಹಾಯವನ್ನು ಕೇಂದ್ರ ಸರ್ಕಾರ(Central Government) ನೀಡಲಿದೆ ಎಂದು ಆಶ್ವಾಸನೆ ನೀಡಿದರು.

ಆರ್ಥಿಕ ಸಂಕಷ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಿದ್ದು, ಕಾನೂನು ತರಲು ಮುಂದಾಗಿದೆ. ಈ ಸಂಬಂಧ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ನಂತರ ಎಲ್ಲಾ ರಾಜ್ಯಗಳಿಗೂ ಅದನ್ನು ಕಳುಹಿಸಿಕೊಡಲಾಗುವುದು. ಕಾನೂನು ಅಳವಡಿಕೆ ಮಾಡಿಕೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಶಾ ತಿಳಿಸಿದರು.

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.

ಸಹಕಾರ ಆಂದೋಲನವು ಕರ್ನಾಟಕ ರಾಜ್ಯದಿಂದ ಆರಂಭಗೊಂಡಿದೆ. ಅಮೂಲ್‌ ಸಂಸ್ಥೆ, ಲಿಜ್ಜತ್‌ ಪಾಪಡ್‌ ಹೆಸರಲ್ಲಿ ಮಹಿಳೆಯರು(Women) ತಯಾರಿಸಿದ ಹಪ್ಪಳ ರಫ್ತು, ಕ್ರಿಬ್ಕೊದಂತಹ ಸಹಕಾರ ಸಂಸ್ಥೆಗಳು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿವೆ. ಇವೆಲ್ಲವು ಆಂದೋಲನದ ಫಲಶೃತಿಯಾಗಿದೆ.

ಇದರೊಂದಿಗೆ ಕರ್ನಾಟಕದ ನಂದಿನಿ ಬ್ರ್ಯಾಂಡ್‌ ಸಹ ಸಹಕಾರ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಬಹು ಸಾಮರ್ಥ್ಯ ಇರುವ ಸಹಕಾರಿ ಕ್ಷೇತ್ರವು ಗ್ರಾಮೀಣ ಅಭಿವೃದ್ಧಿಯ ಜತೆಗೆ ದೇಶದ ಆರ್ಥಿಕತೆಗೆ ಹೊಸ ದಿಕ್ಕು ನೀಡಿದೆ. ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಕಷ್ಟುಅವಕಾಶಗಳು ಇವೆ. ಜತೆ ಜತೆಗೆ ಸವಾಲುಗಳೂ ಇವೆ. ಆ ಸವಾಲುಗಳನ್ನು ಮೆಟ್ಟಿನಿಲ್ಲದಿದ್ದರೆ ಸಹಕಾರ ಆಂದೋಲನ ಕಷ್ಟಕರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಗ್ರಾಮೀಣ ವಿಕಾಸದಲ್ಲಿ ಸಹಕಾರ ಕ್ಷೇತ್ರದ ಅನಿವಾರ್ಯತೆ ಸೃಷ್ಟಿಯಾಗಬೇಕು. ಸಹಕಾರಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕು. ಚುನಾವಣೆ, ಮುಂಬಡ್ತಿ, ನೇಮಕಾತಿ, ಖರೀದಿ ಪ್ರಕ್ರಿಯೆಗಳು ಪಾರದರ್ಶಕವಾಗಬೇಕು. ಇದಕ್ಕಾಗಿ ಜೆಮ್‌ (ಗವರ್ನಮೆಂಟ್‌ ಇ-ಮಾರ್ಕೆಟ್‌ಪ್ಲೇಸ್‌) ಎಂಬ ಹೊಸ ಸಾಫ್ಟ್‌ವೇರ್‌ ರೂಪಿಸಲಾಗಿದೆ.

ಇದರಿಂದ ಭ್ರಷ್ಟಾಚಾರ ಶೂನ್ಯಕ್ಕಿಳಿಯಲಿದೆ. ಅಲ್ಲದೇ, ಪ್ಯಾಕ್ಸ್‌, ಡಿಸಿಸಿ, ರಾಜ್ಯ ಸಹಕಾರ ಬ್ಯಾಂಕ್‌ ಮತ್ತು ನಬಾರ್ಡ್‌ಗಳನ್ನು ಡಿಜಿಟಲೀಕರಣಗೊಳಿಸಿ ಎಲ್ಲದಕ್ಕೂ ಒಂದೇ ಸಾಫ್ಟ್‌ವೇರ್‌ ಮಾಡಲಾಗುವುದು. ಇದು ಎಲ್ಲಾ ರಾಜ್ಯ ಭಾಷೆಯಲ್ಲಿಯೂ ಲಭ್ಯವಾಗಲಿದೆ ಎಂದು ತಿಳಿಸಿದರು.

PF ಖಾತೆದಾರರಿಗೆ Good News! ಈಗ 75% ಮೊತ್ತ ಹಿಂಪಡೆಯಬಹುದು

KEA-2022; ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ FDA ಹಾಗೂ SDA ನೇಮಕಾತಿ ಶುರು.. ಇಲ್ಲಿದೆ ಪೂರ್ಣ ಮಾಹಿತಿ

Published On: 02 April 2022, 11:18 AM English Summary: Good News : Credit card for dairy farmers! First in the country

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.