1. ಸುದ್ದಿಗಳು

Jagdish Shettar ಜಗದೀಶ್‌ ಶೆಟ್ಟರ್‌ ಜೊತೆ ಗುರುತಿಸಿಕೊಳ್ಳದಂತೆ ಬಿಜೆಪಿ ನಾಯಕರಿಗೆ ಖಡಕ್‌ ಸೂಚನೆ?!

Hitesh
Hitesh
Jagdish Shettar

ದಶಕಗಳ ಕಾಲ ಬಿಜೆಪಿಯಲ್ಲಿ ಗುರುತಿಸಿಕೊಂಡು ಬಿಜೆಪಿಯ ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ಬೆಳೆಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.

ಕಳೆದ ನಾಲ್ಕು ದಶಕಗಳ ಕಾಲದಿಂದ ಜಗದೀಶ ಶೆಟ್ಟರ್‌ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.

ಅಷ್ಟೇ ಅಲ್ಲ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದ್ದರು. ಆದರೆ, ಇದೀಗ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.  

ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾದ ಬೆನ್ನಲ್ಲೇ ಅವರ ಬೆಂಬಲಿಗರು  ಹಾಗೂ ಹುಬ್ಬಳ್ಳಿ- ಧಾರವಾಡ

ಮಹಾನಗರ ಪಾಲಿಕೆ ಸದಸ್ಯರಿಗೆ ಶೆಟ್ಟರ್‌ ಅವರೊಂದಿಗೆ ಗುರುತಿಸಿಕೊಳ್ಳಬಾರದು. ಬೆಂಬಲ ನೀಡಬಾರದು ಎಂದು ತಾಕೀತು ಮಾಡಲಾಗಿದೆ.   

ದಶಕಗಳ ಕಾಲ ಬಿಜೆಪಿಯಲ್ಲೇ ಶ್ರಮಿಸಿದ ಶೆಟ್ಟರ್‌ ಹಲವರ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಆದರೆ, ಆ ಅಭಿಮಾನದ ಮೇಲೆ ಯಾರಾದರೂ ಬೆಂಬಲ ನೀಡಿದರೆ,

ಅವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೂ ಇದೆ. ಹೀಗಾಗಿ, ಬೆಂಬಲಿಗರು ಹಾಗೂ ಪಾಲಿಕೆಯ ಸದಸ್ಯರು ಅವರಿಗೆ ಬೆಂಬಲವನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ.   

ಜಗದೀಶ ಶೆಟ್ಟರ್‌ ಅವರು ಪ್ರತಿನಿಧಿಸುವ ಹುಬ್ಬಳ್ಳಿ–ಧಾರವಾಡ ಕೇಂದ್ರ ಕ್ಷೇತ್ರದ ವ್ಯಾಪ್ತಿಯಲ್ಲಿ 16 ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ.  

ಬೆಂಬಲಿಗರ ರಾಜೀನಾಮೆ

ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಹಲವು ಬಿಜೆಪಿಯ ವಾರ್ಡ್‌ ಮಟ್ಟದ

ಸದಸ್ಯರು ಹಾಗೂ ವಿವಿಧ ಹುದ್ದೆಗಳಲ್ಲಿ ಇರುವವರು ರಾಜೀನಾಮೆ ನೀಡಲು ಮುಂದಾಗಿದ್ದರು.

ಆದರೆ, ಇದಕ್ಕೆ ಪಕ್ಷದ ವರಿಷ್ಠರು ಆಸ್ಪದ ನೀಡಿಲ್ಲ ಎನ್ನಲಾಗಿದೆ. ಕೆಲವರು ರಾಜೀನಾಮನೆ ನೀಡಲು ಮುಂದಾದ ಸಂದರ್ಭದಲ್ಲಿ ಅವರ

ರಾಜೀನಾಮೆಯನ್ನು ಪಡೆಯದೆ ಹಾಗೂ ಈ ರೀತಿ ರಾಜೀನಾಮೆ ನೀಡಲು ಮುಂದಾಗಬೇಡಿ ಎಂದು ತಿಳಿಹೇಳಲಾಗಿದೆ.

ಇನ್ನೂ ಕೆಲವರಿಗೆ ಒತ್ತಡ ತಂತ್ರವನ್ನು ಅನುಸರಿಸಲಾಗಿದೆ.

ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಜಗದೀಶ ಶೆಟ್ಟರ್‌ ಅವರ ಕಟ್ಟಾ ಬೆಂಬಲಿಗರಾದ ಸಾಬೂನು ಮತ್ತು ಮಾರ್ಜಕ ಮಂಡಳಿ ಮಾಜಿ

ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ್‌ ಹಾಗೂ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. 

Jagdish Shettar A stern warning to BJP leaders not to identify with Jagdish Shettar?!

ಪಕ್ಷ ಮುಖ್ಯ ಎನ್ನುವ ಸಂದೇಶ

ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು, ಯಾರೂ ಈ ನಿರ್ಧಾರವನ್ನು ತೆಗೆದುಕೊಳ್ಳಬಾರದು.

ಪಕ್ಷದಿಂದ ಯಾರೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಅವರನ್ನು ಗೆಲ್ಲಿಸಲು ಶ್ರಮಿಸಬೇಕು.

ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಜೆಪಿಯ ಮುಖಂಡರಿಗೆ ನಿರ್ದೇಶನ ನೀಡಿದ್ದಾರೆ.

ಕೆಲವರು ಅಲ್ಲಲ್ಲಿ ಈ ಬೆಳವಣಿಗೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಹಲವರು ಒತ್ತಾಯ ಮಾಡಿದ್ದರೂ ಅದು ಫಲ ನೀಡಿಲ್ಲ ಎನ್ನಲಾಗಿದೆ.

ಜಗದೀಶ ಶೆಟ್ಟರ್‌ ಅಸಮಾಧಾನ

ಜಗದೀಶ ಶೆಟ್ಟರ್‌ ಅವರು ಈ ಎಲ್ಲ ಬೆಳವಣಿಗೆಗಳ ನಂತರ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಪಕ್ಷ ನಡೆಸಿಕೊಂಡಿರುವ ವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ ಆದರೆ, ನನ್ನನ್ನು ಘನತೆಯಿಂದ ನಡೆಸಿಕೊಳ್ಳಲಿಲ್ಲ.

ಉದ್ದೇಶ ಪೂರ್ವಕವಾಗಿ ಹಾಗೂ ಕೆಲವರ ಹಿತಾಸಕ್ತಿಗಾಗಿ ಕೆಲವರಿಗಷ್ಟೇ ಆಯ್ಕೆ ಮಾಡಲಾಗುತ್ತಿದೆ.

ದಶಕಗಳ ಕಾಲ ಬಿಜೆಪಿ ಕಟ್ಟಲು ಶ್ರಮಿಸಿದ ನನ್ನಂತಹ ನಿಷ್ಠಾವಂತ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

Today Weather Update ರಾಜ್ಯದಲ್ಲಿ ಮುಂದುವರಿದ ಒಣಹವೆ; ಅಲ್ಲಲ್ಲಿ ಮಳೆ

Published On: 19 April 2023, 11:29 AM English Summary: Jagdish Shettar A stern warning to BJP leaders not to identify with Jagdish Shettar?!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.