1. ಸುದ್ದಿಗಳು

Karnataka Election 2023 ಬಿಜೆಪಿಗೆ ಹಿರಿಯ ನಾಯಕರ ಗುಡ್‌ ಬೈ: ಫಲಿತಾಂಶದ ಮೇಲೆ ಪರಿಣಾಮ ?!

Hitesh
Hitesh
Karnataka Election 2023 Senior Leaders' Goodbye to BJP: Impact on Results?!

ರಾಜ್ಯ ರಾಜಕೀಯದಲ್ಲಿ ಇದೇ ಮೊದಲ ಬಾರಿ ಎನ್ನುವಂತೆ ನಡೆಯುತ್ತಿರುವ ಕೆಲವು ಬದಲಾವಣೆಗಳು ಚುನಾವಣೆಯ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ರಾಜ್ಯ ಸಾರ್ವತ್ರಿಕ ಚುನಾವಣೆ 2023ಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈ ಬಾರಿ ಬಿಜೆಪಿ ಹೊಸ ಪ್ರಯೋಗವನ್ನು ಮಾಡಿದ್ದು,

ರಾಜ್ಯದಲ್ಲಿ ಹಲವು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಹೊಸ ಬೆಳವಣಿಗೆ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ.

52 ಹೊಸ ಮುಖ; 8ಜನ ಮಹಿಳೆಯರು: ಈ ಬಾರಿ ಬಿಜೆಪಿ 52 ಜನ ಹೊಸ ಮುಖಗಳಿಗೆ ಟಿಕೆಟ್‌ ನೀಡಿದೆ. ಇನ್ನು 8 ಜನ ಮಹಿಳೆಯರು ಸಹ ಇದರಲ್ಲಿ ಇದ್ದಾರೆ.

ಭಾರೀ ಆಡಳಿತ ವಿರೋಧ ಇದ್ದಂತಹ ಗುಜರಾತ್‌ನಲ್ಲಿ ಬಿಜೆಪಿಯ ಅಧಿಕಾರಕ್ಕೆ ಮರುಳುವುದಕ್ಕೆ ಹೊಸ ಮುಖಗಳ ಆಯ್ಕೆ ಬಹುವಾಗಿ ನೆರವಾಗಿತ್ತು.

ಇದೇ ಪ್ರಯೋಗವನ್ನು ಇಲ್ಲಿಯೂ ಮಾಡಲಾಗಿದೆ ಎನ್ನುವುದು ವರದಿ ಆಗಿದೆ.

ಆದರೆ, ಕರ್ನಾಟಕ ಮತ್ತು ಗುಜರಾತ್‌ನ ರಾಜಕೀಯ ಬೆಳವಣಿಗೆಗಳು ಹಾಗೂ ಸ್ಥಳೀಯ ಮಟ್ಟದ ಪ್ರಭಾವಗಳು

ತೀರ ಭಿನ್ನವಾಗಿರುವುದನ್ನು ಗಮನಿಸಬಹುದು. ಗುಜರಾತ್‌ನಲ್ಲಿ ಸಕ್ಸಸ್‌ ಆಗಿರುವ ಬಿಜೆಪಿಯ ಹೊಸ

ಮುಖಗಳ ಆಯ್ಕೆ ಸೂತ್ರವೂ ಕರ್ನಾಟಕದಲ್ಲಿ ಸಕ್ಸಸ್‌ ಆಗದೆ ಇರುವ ಸಾಧ್ಯತೆಯೂ ಬಹಳಷ್ಟಿದೆ.

ಕರ್ನಾಟಕದಲ್ಲಿ ಒಟ್ಟಾರೆ ಪಕ್ಷವನ್ನು ನೋಡುವುದು ಇದೆ.

ಈ ಬಾರಿ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ.

ಅದೇ ಸಂದರ್ಭದಲ್ಲಿ ಪ್ರಮುಖ ನಾಯಕರನ್ನು ಕೈಬಿಟ್ಟಿರುವ ಬೆಳವಣಿಗೆ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಉಳಿದಿರುವ ಕೆಲವೇ ದಿನಗಳಲ್ಲಿ ಬಿಜೆಪಿ ಇದನ್ನೆಲ್ಲ ಹೇಗೆ ನಿಭಾಯಿಸಲಿದೆ ಎನ್ನುವುದು ಈಗ ಇರುವ ಪ್ರಶ್ನೆ.

ಬಿಜೆಪಿಯ ಲೆಕ್ಕಾಚಾರವೇನು: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಇದೀಗ ಅಧಿಕೃತವಾಗಿ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಾರೆ.

ಕಳೆದ ಒಂದುವಾರದ ಹಗ್ಗಜಿಗ್ಗಾಟಕ್ಕೆ ಇದೀಗ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

ಶನಿವಾರ ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿರುವ ಅವರು ಬಿಜೆಪಿ ತೊರೆಯುವ ಅವರ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಬಿಜೆಪಿಯೊಂದಿಗೆ ನಾನು 30 ವರ್ಷ ಒಡನಾಟ ಇರಿಸಿಕೊಂಡಿದ್ದೆ. ಆದರೆ, ನನ್ನ ಮನೆಯವರಿಗೆ ಟಿಕೆಟ್‌ ಕೊಡ್ತೀವಿ ನನಗೆ ಕೊಡುವುದಿಲ್ಲ ಎನ್ನುತ್ತಿದ್ದಾರೆ

ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಈ ಅಂಶವನ್ನು ಗಮನಿಸುವುದೇ ಆದರೆ, ಬಿಜೆಪಿ ಈಗಾಗಲೇ ಹಲವು ವರ್ಷ ಇರುವವರನ್ನು ಬದಲಾಯಿಸಿ,

ಹೊಸ ಮುಖಗಳಿಗಾಗಿ ಶೋಧ ನಡೆಸಿರುವುದು ಖಚಿತವಾದಂತಿದೆ.

ಯಾವ ಪ್ರಮುಖ ಬಿಟ್ಟರು: ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿರುವ ಇಬ್ಬರು ಪ್ರಮುಖ ಬಿಜೆಪಿ ನಾಯಕರು ಇದೀಗ ಬಿಜೆಪಿಯನ್ನು ಬಿಟ್ಟಂತಾಗಿದೆ.

ಅದರಲ್ಲಿ ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರ ಅವರು ಪ್ರಮುಖರು.

ಇವರಿಬ್ಬರಲ್ಲದೇ ಹಲವು ವಿಧಾನಪರಿಷತ್‌ ನಾಯಕರೂ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. 

ಇದನ್ನೂ ಓದಿರಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ-2023: ಬ್ಯಾಂಕ್ ಖಾತೆಗಳ ಮೇಲೆ ನಿಗಾ!

ಉತ್ತರ ಕರ್ನಾಟಕದಲ್ಲಿ ಪರಿಣಾಮ: ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿರುವ  ಪ್ರಮುಖರಾದ ಲಕ್ಷ್ಮಣ ಸವದಿ

ಹಾಗೂ ಜಗದೀಶ ಶೆಟ್ಟರ ಅವರು ಬಿಜೆಪಿ ತೊರೆದಿರುವುದು ಈ ಭಾಗದಲ್ಲಿ ಪ್ರಭಾವ ಬೀರುವ ಸಾಧ್ಯತೆ ನಿಶ್ಚಳವಾಗಿದೆ.

ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯಲ್ಲಿ ಜಗದೀಶ ಶೆಟ್ಟರ ಪ್ರಭಾವ ಹೊಂದಿದ್ದರೆ,

ಬೆಳಗಾವಿ ಭಾಗದಲ್ಲಿ ಲಕ್ಷ್ಮಣ ಸವದಿ ಪ್ರಭಾವ ಹೊಂದಿದ್ದಾರೆ.

ಅಲ್ಲದೇ ಇಬ್ಬರೂ ನಾಯಕರು ಬಿಜೆಪಿ ನಡೆಸಿಕೊಂಡು ರೀತಿಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಜಗದೀಶ ಶೆಟ್ಟರ ಅವರು, ಹಿರಿಯರನ್ನು ಸೌಜನ್ಯದಿಂದ ಬಿಜೆಪಿ ನಡೆಸಿಕೊಂಡಿಲ್ಲ ಎಂದಿದ್ದಾರೆ.

ಈ ಎಲ್ಲ ಅಂಶಗಳು ಫಲಿತಾಂಶದ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.  

Karnataka Election ಕರ್ನಾಟಕ ಚುನಾವಣೆ ದಿನಾಂಕ ಘೋಷಣೆ, ಮೇ 10ಕ್ಕೆ ಕರ್ನಾಟಕ ಚುನಾವಣೆ!

Published On: 16 April 2023, 11:37 AM English Summary: Karnataka Election 2023 Senior Leaders' Goodbye to BJP: Impact on Results?!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.