1. ತೋಟಗಾರಿಕೆ

ಬೆಳೆಹಾನಿ: ನೆರೆಯ ರಾಜ್ಯದಲ್ಲಿ ಪ್ರತಿ ಹೇಕ್ಟರ್‌ಗೆ 3,000 ಸಾವಿರದಿಂದ 20,000 ಸಾವಿರದ ವರೆಗೆ ಪರಿಹಾರ!

Hitesh
Hitesh
Crop damage: compensation from 3,000 thousand to 20,000 thousand per hectare in the neighboring state!

ಅಕಾಲಿಕ ಮಳೆ ಮತ್ತು ಅನಾವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡುವುದರಿಂದ ರೈತರು ನಿರಾಳರಾಗುತ್ತರೆ.

ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ: ಅಡಿಕೆಯಲ್ಲಿ ಹಾನಿಕಾರಕ ಅಂಶವಿಲ್ಲ; ಎಂ.ಎಸ್. ರಾಮಯ್ಯ ಇನ್ಸ್‌ಟಿಟ್ಯೂಟ್‌ ವರದಿ

ಅಲ್ಲದೇ ಮುಂದೆ ರೈತರು ತೆಗೆದುಕೊಳ್ಳಬಹುದಾದ ಕೆಟ್ಟ ನಿರ್ಧಾರ ಹಾಗೂ ಸಂಕಷ್ಟಗಳನ್ನೂ ತಪ್ಪಿಸಲು ಇದು ಸಾಧ್ಯವಾಗಲಿದೆ. ನೆರೆಯ ತಮಿಳುನಾಡಿನ ಸರ್ಕಾರವೂ ಇಂತಹದೊಂದು ಕ್ರಮವನ್ನು ಕೈಗೊಂಡಿದೆ. 

ಅಕಾಲಿಕ ಮಳೆಯಿಂದಾಗಿ ಕಾವೇರಿ ಮುಖಜ ಭೂಮಿಯಲ್ಲಿ ಕೊಯ್ಲಿಗೆ ಸಿದ್ಧವಾಗಿದ್ದ ಸಾಂಬಾ ಬೆಳೆಗಳು ಜಲಾವೃತಗೊಂಡು ಅಪಾರ ಹಾನಿಯಾಗಿದೆ.

ಇದನ್ನು ಪರಿಗಣಿಸಿರುವ ತಮಿಳುನಾಡು ಸರ್ಕಾರವು ಭತ್ತದ ಕೊಯ್ಲು ಹಿಂಗಾರಿನಲ್ಲಿ ಬಿತ್ತನೆ ಮಾಡಿದ ಹಾನಿಗೊಳಗಾದ ಎಳೆಯ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 3,000 ರೂಪಾಯಿ ಪರಿಹಾರವಾಗಿ ನೀಡುವುದಾಗಿ ಘೋಷಿಸಿದೆ.

Bbc ಬಿಬಿಸಿಯ ನವದೆಹಲಿ ಕಚೇರಿಯ ಮೇಲೆ IT ದಾಳಿ!  

ತಮಿಳುನಾಡಿನಲ್ಲಿ ಅಕಾಲಿಕ ಮಳೆಯಿಂದಾಗಿ ಕಾವೇರಿ ಮುಖಜ ಭೂಮಿಯಲ್ಲಿ ಕೊಯ್ಲಿಗೆ ಸಿದ್ಧವಾಗಿದ್ದ ಸಾಂಬಾ ಬೆಳೆಗಳು ನೀರಿನಲ್ಲಿ ಮುಳುಗಿ ಅಪಾರ ಹಾನಿಯಾಗಿದೆ.

ಅದರಲ್ಲೂ ತಂಜಾವೂರು, ತಿರುವರೂರು, ನಾಗೈ, ಮೈಲಾಡುತುರೈ ಮತ್ತು ಪುದುಕೊಟ್ಟೈ ಜಿಲ್ಲೆಗಳಲ್ಲೇ ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ನೀರಿನಲ್ಲಿ ಮುಳುಗಿದ್ದು, ಭತ್ತದ ಬೆಳೆಗಳ ತೇವಾಂಶ ಹೆಚ್ಚಾಗಿದೆ.

ಇದರಿಂದ ರೈತರು ತೀವ್ರ ತೊಂದರೆಗೀಡಾಗಿದ್ದಾರೆ. ನಿರಂತರವಾಗಿ ಪ್ರತಿಭಟನೆಗಳೂ ನಡೆಯುತ್ತಿವೆ.

ಈ ವಿಷಯ ತಿಳಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಚಿವರಾದ ಚಕ್ರಪಾಣಿ ಮತ್ತು ಎಂ.ಆರ್.ಕೆ.ಪನ್ನೀರಸೆಲ್ವಂ ಅವರನ್ನು ಡೆಲ್ಟಾ ಜಿಲ್ಲೆಗಳಿಗೆ ಭೇಟಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.   

ಹೊಸ ದಾಖಲೆ: ಬಾಹ್ಯಾಕಾಶಕ್ಕೆ ಹಾರಿಲಿದ್ದಾರೆ ಅರಬ್‌ನ ಮೊದಲ ಮಹಿಳೆ!  

ಸಚಿವರ ಪರಿಶೀಲನೆ

ನೀರಿನಲ್ಲಿ ಮುಳುಗಿ ಹಾನಿಗೀಡಾದ ಗದ್ದೆಗಳಿಗೆ ಭೇಟಿ ನೀಡಿದರು. ಪ್ರತಿ ಜಿಲ್ಲೆಗೆ ತೆರಳಿ ಭತ್ತದ ತೇವಾಂಶದ ಬಗ್ಗೆ ರೈತರನ್ನು ಸಚಿವರು ವಿಚಾರಿಸಿದ್ದಾರೆ.  

ಈ ಹಿನ್ನೆಲೆಯಲ್ಲಿ ಸಚಿವರಾದ ಚಕ್ರಪಾಣಿ, ಎಂಆರ್‌ಕೆ ಪನ್ನೀರಸೆಲ್ವಂ ಮತ್ತು ಸಹಕಾರಿ ಆಹಾರ ಮತ್ತು ಗ್ರಾಹಕ ರಕ್ಷಣಾ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಧಾಕೃಷ್ಣನ್ ಮತ್ತು ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ಕಚೇರಿಗೆ ಭೇಟಿ ನೀಡಿದರು.

ಸ್ಟಾಲಿನ್ ಅವರನ್ನು ಭೇಟಿ ಮಾಡಿ ಬೆಳೆ ಹಾನಿಯ ವಿವರವನ್ನು ವರದಿಯಾಗಿ ಸಲ್ಲಿಸಿದರು.

ChatGPT ಕೋಟ್ಯಾಂತರ ಜನರ ಉದ್ಯೋಗಕ್ಕೆ ಕುತ್ತಾಗಲಿದೆಯೇ ChatGPT, BARD ಎಂಬ ಆವಿಷ್ಕಾರಗಳು ?!

mk stalin

ಪರಿಹಾರದ ಸೂಚನೆ

ಸಚಿವರ ಅಭಿಪ್ರಾಯಗಳು ಮತ್ತು ವರದಿಗಳ ಆಧಾರದ ಮೇಲೆ ಮುಖ್ಯಮಂತ್ರಿಗಳು ಸಂತ್ರಸ್ತ ರೈತರ ಕಲ್ಯಾಣಕ್ಕಾಗಿ ಪರಿಹಾರ ನೀಡಲು ಆದೇಶಿಸಿದ್ದಾರೆ. 

ಮುಖ್ಯಮಂತ್ರಿ ಅವರು ನೀಡಿರುವ ನಿರ್ದೇಶನದಂತೆ ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಯ್ಲಿಗೆ ಸಿದ್ಧವಾಗಿರುವ ಭತ್ತಕ್ಕೆ ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ, ಶೇ.33 ಮತ್ತು ಅದಕ್ಕಿಂತ ಹೆಚ್ಚಿನ ಇಳುವರಿ ನಷ್ಟವಿರುವ ತಳಿಗಳಿಗೆ ಪ್ರತಿ ಹೆಕ್ಟೇರ್‌ಗೆ ರೂ.20 ಸಾವಿರ ಪರಿಹಾರವನ್ನು ನೀಡಲಾಗುತ್ತದೆ.

ಭತ್ತದ ಕಟಾವಿನ ಹಿಂಗಾರು ಬಿತ್ತನೆಯಲ್ಲಿ ಹಾನಿಗೊಳಗಾದ ಎಳೆಯ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 3,000 ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುವುದು.

ಭತ್ತದ ಗದ್ದೆಗಳಿಗೆ ಉಳು ಸಿಂಪಡಿಸಿದ ನಂತರ ಅತಿವೃಷ್ಟಿಯಿಂದ ಹಾನಿಗೀಡಾದ ಉಳು ರೈತರಿಗೆ ಉಳು ಮರು ಬೇಸಾಯ ಮಾಡಲು ಪ್ರತಿ ಹೆಕ್ಟೇರ್‌ಗೆ 8 ಕೆಜಿ ಉಳುಬೀಜವನ್ನು ಶೇಕಡಾ 50 ರಷ್ಟು ಸಹಾಯಧನದಲ್ಲಿ ನೀಡಲಾಗುವುದು.

ಅತಿವೃಷ್ಟಿಯಿಂದ ಹಾನಿಗೊಳಗಾದ ಡೆಲ್ಟಾ ಜಿಲ್ಲೆಯ ರೈತರಿಗೆ ಭತ್ತದ ಕೊಯ್ಲು ಮಾಡಲು ಕೃಷಿ ಇಂಜಿನಿಯರಿಂಗ್ ವಿಭಾಗವು ಭತ್ತದ ಕಟಾವು ಯಂತ್ರದ ಬಾಡಿಗೆಗೆ 50 ಪ್ರತಿಶತ ಸಬ್ಸಿಡಿಯನ್ನು ನೀಡುತ್ತದೆ. 

ತಮಿಳುನಾಡಿನ ಸರ್ಕಾರದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ಏರೋ ಇಂಡಿಯಾ ಹೊಸ ದಾಖಲೆ: ಪ್ರಧಾನಿ ನರೇಂದ್ರ ಮೋದಿ ಏನಂದ್ರು ಗೊತ್ತಾ ? 

Published On: 15 February 2023, 11:24 AM English Summary: Crop damage: compensation from 3,000 thousand to 20,000 thousand per hectare in the neighboring state!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.