1. ಸುದ್ದಿಗಳು

ರೂಪಾಂತರದ ಹೊಸ ಕೊರೊನಾಗೆ ವಿಶ್ವವೇ ಆತಂಕ, ಮತ್ತೆ ಬ್ರಿಟನ್‌ ತತ್ತರ!

corona virus

ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿದ್ದ ಇಡೀ ಜಗತ್ತಿಗೆ ಮತ್ತೆ ಹೊಸ ಕೊರೋನಾದ ಆತಂಕ ಕಾಡಿದೆ.

ಈಗಾಗಲೇ ಜಗತ್ತಿನಾದ್ಯಂತ ಕೊರೋನಾ ಮರೆತು ಮತ್ತೆ ಸಾಮನ್ಯ ಸ್ಥಿತಿಗೆ ಬಂದಿರು ಜನತೆಗೆ ಬರಸಿಡಿಲಿನಂತೆ ಹೊಸ ಕೊರೋನ ಭಯ ಹುಟ್ಟಿಸಿದೆ. ಅತ್ಯಂತ ವೇಗವಾಗಿ ಸೋಂಕು ಹರಡಬಲ್ಲ ಈ ಕೊರೊನಾ ವೈರಸ್‌ ಬ್ರಿಟನ್‌ನಲ್ಲಿ ಕಂಡು ಬಂದಿದೆ

ಬ್ರಿಟನ್ ನಲ್ಲಿ ಪತ್ತೆಯಾದ ಎಸ್‌ಎಆರ್ಎಸ್-ಕೋವಿ -2 ರೂಪಾಂತರಿತ ಕೊರೋನಾ ವೈರಸ್ ಬಗ್ಗೆ ಯಾವುದೇ ಆತಂಕ ಅಥವಾ ಭೀತಿ ಬೇಡಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಜನತೆಗೆ ಭಯವಂತೂ ಕಾಡತೊಡಗಿದೆ.

ಈ ವೈರಸ್‌ಗಳಲ್ಲಿ ಹರಡುವಿಕೆಯು ಶೇಕಡಾ 70ರಷ್ಟು ಹೆಚ್ಚಾಗಿದೆ. ನೀವು ಸೋಂಕಿತರನ್ನು ಒಂದು ರೀತಿಯಲ್ಲಿ ಸೂಪರ್ ಸ್ಪ್ರೆಡರ್ ಎಂದೂ ಕರೆಯಬಹುದು. ಆದರೆ ಇದು ಸಾವಿನ ಪ್ರಮಾಣ, ಆಸ್ಪತ್ರೆಗೆ ದಾಖಲು ಮತ್ತು ರೋಗದ ತೀವ್ರತೆಯನ್ನು ಹೆಚ್ಚಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಪ್ರವೃತ್ತಿಯು ಕೊಂಚ ಕಳವಳಕ್ಕೆ ಕಾರಣವಾಗಿದೆ.
ಬ್ರಿಟನ್‌ನಲ್ಲಿ ಈಗ ಸೋಂಕಿತರಾಗಿರುವವರ ಪೈಕಿ ಶೇ.60ರಷ್ಟು ಜನರಿಗೆ ಈ ವೈರಾಣು ಕಾರಣವಾಗಿದೆ. ಹಾಗಿದ್ದೂ ಈ ಹೊಸ ವೈರಾಣು ಈ ಹಿಂದಿನ ವೈರಾಣುವಿಗಿಂತ ತುಂಬ ಅಪಾಯಕಾರಿಯಾಗಿದೆ ಅಥವಾ ಹೆಚ್ಚು ಮಾರಣಾಂತಿಕವಾಗಿದೆ ಎಂಬುದಕ್ಕೆ ಇದುವರೆಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎನ್ನುತ್ತಿದ್ದಾರೆ ತಜ್ಞರು

ವಿಮಾನಯಾನ ರದ್ದು:

 ಹೊಸ ಮಾದರಿಯ ರೂಪಾಂತರ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಡಿಸೆಂಬರ್ 31ರ ರವರೆಗೆ ಅಲ್ಲಿಂದ ಬರುವ ಎಲ್ಲ ವಿಮಾನಗಳನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರ ,ಇದೀಗ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ.

ನ.25 ರಿಂದ ಡಿ.8 ವರಗೆ ಭಾರತಕ್ಕೆ ಬಂದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಎಲ್ಲರನ್ನು ಪತ್ತೆಹಚ್ಚಿ ಪರೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಇಂಗ್ಲೆಂಡಿನ ಬಂದವರ ಆರೋಗ್ಯ ತಪಾಸಣೆ ಕುರಿತು ಜಿಲ್ಲಾ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕು ಮತ್ತು ಅವರ ಸಂಪರ್ಕಕ್ಕೆ ಬಂದವರೆಲ್ಲ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವಂತೆ ಸಚಿವಾಲಯ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

;

ವಿಮಾನಯಾನ ಸಂಸ್ಥೆಗಳಿಂದ ಮಾಹಿತಿ:

ದೇಶದ ವಿವಿಧ ರಾಜ್ಯಗಳಿಗೆ ಆಗಮಿಸಿರುವ ಪ್ರಯಾಣಿಕರ ವಿವರಗಳನ್ನು ಆಯಾ ರಾಜ್ಯ ಸರಕಾರಗಳು ವಿಮಾನಯಾನ ಸಂಸ್ಥೆಗಳಿಂದ ಪಡೆದು ಪ್ರಯಾಣಿಕರ ಪತ್ತೆಹಚ್ಚುವ ಜತೆಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.