1. ಸುದ್ದಿಗಳು

ಮುದ್ರಾ ಯೋಜನೆಯಡಿ ಸಾಲ ಪಡೆಯಲು ಇಲ್ಲಿದೆ ಮಾಹಿತಿ

ಏನಾದರೊಂದು ಉದ್ಯಮ ಮಾಡಿ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕೆನ್ನುವವರಿಗೆ ಇಲ್ಲಿದೆ ಸಂತಸದ ಸುದ್ದಿ.  ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಉದ್ಯಮ ಆರಂಭಿಸುವರಿಗೆ ಸಾಲ ಸೌಲಭ್ಯ ಸಿಗುತ್ತದೆ.

ಹೌದು ಮುದ್ರಾಯೋಜನೆಯಡಿಯಲ್ಲಿ ಸಾಲ 10 ಲಕ್ಷ ರೂಪಾಯಿಯವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ಈ ಯೋಜನೆಯಲ್ಲಿ ಸುಮಾರು 50,000ರಿಂದ 15 ಲಕ್ಷದವರೆಗೆ ನೀವು ಸಾಲ ಪಡೆದುಕೊಳ್ಳಬಹುದು. ಯಾವುದೇ ಅಡೆತಡೆಯಿಲ್ಲದೆ  ಸಾಲ ಸಿಗುತ್ತದೆ. ಅಂದರೆ ಯಾವುದೇ ಹೊಲ ಅಥವಾ ಮನೆಗಳನ್ನು ಅಡಮಾನ ಇಡುವ ಅಗತ್ಯವಿಲ್ಲ.

ಹಲವಾರು ಜನ ವಿದ್ಯಾಭ್ಯಾಸವನ್ನು ಮುಗಿಸಿರುತ್ತಾರೆ ಆದರೆ ದುಡ್ಡು ಇರದ ಕಾರಣ ತಾವು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಅಂತವರಿಗೆ ಅಂತಾನೆ ಯೋಜನೆಯನ್ನು ತೆಗೆಯಲಾಗಿದೆ, ಕಡಿಮೆ ಬಡ್ಡಿದರದಲ್ಲಿ ಇದನ್ನು ಎಲ್ಲರಿಗೂ ನೀಡಲಾಗುತ್ತದೆ. ಇದರ ಸಹಾಯದಿಂದ ತಾವು ಒಂದು ಸಣ್ಣ ಪ್ರಮಾಣದ ಬಿಜಿನೆಸ್ ಸನ್ನು ಮಾಡಿಕೊಳ್ಳಬಹುದು.

ಮುದ್ರಾ ಯೋಜನೆಯಲ್ಲಿ ಮೂರು ರೀತಿಯ ಸಾಲ ಸಿಗುತ್ತದೆ

ಶಿಶು ಸಾಲ: ಶಿಶು ಸಾಲ ಯೋಜನೆಯ ಅಡಿ 50,000 ರೂ. ಸಾಲ ನೀಡಲಾಗುತ್ತದೆ.
ಕಿಶೋರ್ ಸಾಲ: ಕಿಶೋರ್ ಸಾಲದ ಯೋಜನೆಯ ಅಡಿ 50,000 ರಿಂದ 5 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ತರುಣ್ ಸಾಲ: ತರುಣ್ ಸಾಲ ಯೋಜನೆಯಡಿ 5 ಲಕ್ಷದಿಂದ 10 ಲಕ್ಷ ವರೆಗಿನ ಸಾಲವನ್ನು ನೀಡಲಾಗುತ್ತದೆ. ಇದರಲ್ಲಿ ಮೂರು ರೀತಿಯ ಸಾಲ ಗಳಿರುತ್ತವೆ.

PMMY ಸಾಲ ಹೇಗೆ ಪಡೆಯಬೇಕು?

ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಸಾಲಕ್ಕಾಗಿ, ನೀವು ಸರ್ಕಾರ ಅಥವಾ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸುತ್ತಿದ್ದರೆ, ನಂತರ ನೀವು ಮಾಲೀಕತ್ವ ಅಥವಾ ಬಾಡಿಗೆ ದಾಖಲೆಗಳು, ಕೆಲಸಕ್ಕೆ ಸಂಬಂಧಿಸಿದ ಮಾಹಿತಿ, ಆಧಾರ್, ಪ್ಯಾನ್ ಸಂಖ್ಯೆ ಮತ್ತು ಇತರ ಹಲವು ದಾಖಲೆಗಳನ್ನು ಒದಗಿಸಬೇಕು. ಮುದ್ರಾ ಯೋಜನೆಯ ವೆಬ್‌ಸೈಟ್‌ನಲ್ಲಿ ಸಾಲ ನೀಡುವ  ಎಲ್ಲ ಬ್ಯಾಂಕುಗಳ ವಿವರಗಳನ್ನು ನೀಡಲಾಗಿದ್ದು,  ಫಾರ್ಮ್ ಅನ್ನು ನೀವು ಆನ್‌ಲೈನ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

ನೀವು ಯಾವ ಬಿಸಿನೆಸ್ ಮಾಡಬೇಕೆಂದರೂ ಅದರದ ಒಂದು ಪತ್ರವನ್ನು ಬರೆದುಕೊಂಡು ಹೋಗಬೇಕು. ಅಥವಾ ಬಿಲ್ ರೆಸಿಪ್ಟ್ ತೆಗೆದುಕೊಂಡು ಹೋಗಬೇಕು. ಒಂದು ಅಧಿಕೃತ ಬ್ಯಾಂಕಿನಲ್ಲಿ ಈ  ಯೋಜನೆ ಅಡಿಯಲ್ಲಿ ನಿಮಗೆ ಸಾಲವನ್ನು ನೀಡಲಾಗುತ್ತದೆ.

ಅಗತ್ಯ ದಾಖಲೆಗಳು:

ಗುರುತಿನ ಪ್ರಮಾಣಪತ್ರ
ನಿವಾಸದ ಪುರಾವೆ
ಯಂತ್ರೋಪಕರಣಗಳು ಇತ್ಯಾದಿ ಮಾಹಿತಿ
ಪಾಸ್ಪೋರ್ಟ್ ಗಾತ್ರದ ಫೋಟೋ
ವ್ಯಾಪಾರ ಪ್ರಮಾಣಪತ್ರ
ವ್ಯವಹಾರ ವಿಳಾಸದ ಪುರಾವೆ

ಸಾಲದ ಅರ್ಜಿಯನ್ನು https://www.mudra.org.in/ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್ ಮಾಡಿ.
ಶಿಶು ಸಾಲದ ಅರ್ಜಿ ಭಿನ್ನವಾಗಿರುತ್ತದೆ. ಆದರೆ ತರುಣ್ ಮತ್ತು ಕಿಶೋರ್ ಸಾಲಕ್ಕೆ ಫಾರ್ಮ್ ಒಂದೇ ಆಗಿರುತ್ತದೆ.
ಸಾಲದ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. ಸರಿಯಾದ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು, ವಿಳಾಸ ಇತ್ಯಾದಿಗಳ ಮಾಹಿತಿಯನ್ನು ಒದಗಿಸಿ.

ನೀವು ಎಲ್ಲಿ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತೀರಿ ಎಂಬುದರ ಕುರಿತು ಮಾಹಿತಿ ನೀಡಲು ಮರೆಯದಿರಿ.

ಲೇಖಕರು: ಮುತ್ತಣ್ಣ  ಬ್ಯಾಗೆಳ್ಳಿ

Published On: 22 December 2020, 03:23 PM English Summary: how to apply for mudra loan

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.