1. ಸುದ್ದಿಗಳು

ಗುಡ್‌ನ್ಯೂಸ್‌: ಹಳೆಯ ಬಸ್‌ ಪಾಸ್‌ ತೋರಿಸಿ ಪ್ರಯಾಣಿಸಲು ಗ್ರೀನ್‌ಸಿಗ್ನಲ್‌ ನೀಡಿದ KSRTC

Maltesh
Maltesh
BUS

ರಾಜ್ಯಾದ್ಯಂತ ಇದೇ ಮೇ ತಿಂಗಳು ಮೇ 16 ರಿಂದ ಶಾಲಾ ಕಾಲೇಜುಗಳು ಆರಂಭವಾಗುತ್ತಿವೆ. ಈ ಹಿನ್ನೆಲೆ ಕರ್ನಾಟಕ  ರಾಜ್ಯ ರಸ್ತೆ ಸಾರಿಗೆ ನಿಗಮ ನಿಯಮಿತ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದೆ. ಹೌದು ವಿದ್ಯಾರ್ಥಿಗಳ ಸುಗಮ ಸಂಚಾರ ಕ್ಲಪಿಸುವ ನಿಟ್ಟಿನಲ್ಲಿ KSRTC ವಿದ್ಯಾರ್ಥಿಗಳಿಗೆ ಹಳೆಯ ಬಸ್‌ ಪಾಸ್‌ಗಳನ್ನು ತೋರಿಸಿ ಸಂಚಾರ ಮಾಡಬಹುದಾಗಿ ತಿಳಿಸಿದೆ.

India Post Payments bank: ದೇಶಾದ್ಯಂತ ಖಾಲಿ ಹುದ್ದೆಗಳ ನೇಮಕಾತಿ! ಮೇ 20 ಕೊನ ದಿನ..

Bottle Gourd Home Gardening! ಮನೆಯಲ್ಲಿಯೇ ಬೆಳೆಯಿರಿ!

ಈ ಕುರಿತು ಮಾಹಿತಿ ನೀಡಿದ KSRTC ಹಿಂದಿನ ಶೈಕ್ಷಣಿಕ ವರ್ಷದ ಬಸ್‌ ಪಾಸ್‌ ಮಾನ್ಯತೆ ಜೂನ್‌ 30ರವೆಗೆ ಇದ್ದು, ಸದ್ಯ ವಿದ್ಯಾರ್ಥಿಗಳು ಅದೇ ಪಾಸ್‌ ಅನ್ನು ತೋರಿಸಿ ಈ ದಿನಾಂಕದವರೆಗೆ ಓಡಾಡಬಹುದು ಎಂದು  ನಿಗಮ ತಿಳಿಸಿದೆ. ಅದರ ಜೊತೆ  ಅಲ್ಲದೇ ಹೊಸ ವಿದ್ಯಾರ್ಥಿ ಬಸ್‌ ಪಾಸ್‌ ಪಡೆಯಲು ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!

ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಹಾಗೂ ಅವರಿಗೆ ಒಂದು ವೇಳೆ 2020-21ನೇ ಸಾಲಿನ ಬಸ್‌ ಪಾಸ್‌ ಬಳಕೆ ಕುರಿತು ಸಂಶಯವಿದ್ದಲ್ಲಿ, ಬಗೆಹರಿಸುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಈ ಮಾಹಿತಿ ನೀಡಿದೆ.

ಹೊಸ ಬಸ್ ಪಾಸುಗಳ ವಿತರಣಾ ದಿನಾಂಕವನ್ನು ಶೀಘ್ರವೇ ತಿಳಿಸಲಾಗುತ್ತದೆ. ಆ ನಂತ್ರ ವಿದ್ಯಾರ್ಥಿಗಳು ನಿಯಮಾನುಸಾರ ಉಚಿತ, ರಿಯಾಯಿತಿ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ವಿಭಾಗಗಳ ವ್ಯಾಪ್ತಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

ಮೇ 10ರಂದು SSLC  ಫಲಿತಾಂಶ

SSLC ಫಲಿತಾಂಶ 2022 ಅನ್ನು ಮೇ 19 ರಂದು ಪ್ರಕಟಿಸಲಾಗುವುದು ಎಂದು  ಶಿಕ್ಷಣ ಇಲಾಖೆ ತಿಳಿಸಿದೆ. ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ನಡೆದಿದ್ದು, ಮತ್ತು ಏಪ್ರಿಲ್ 12 ರಂದು ಕೀ ಆನ್ಸರ್‌ಗಳನ್ನು ಬಿಡುಗಡೆ ಮಾಡಲಾಗಿದೆ. 10 ನೇ ತರಗತಿ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು sslc.karnataka.gov.in ಮತ್ತು karresults.nic.in ವೆಬ್‌ಸೈಟ್‌ಗಳ ಮೂಲಕ ಫಲಿತಾಂಶ ಪರಿಶೀಲಿಸಬಹುದು.

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‌ಇಇಬಿ)  ರಾಜ್ಯ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುತ್ತದೆ. ರಾಜ್ಯದ 15,387 ಶಾಲೆಗಳಿಂದ ಒಟ್ಟು 8,73,846 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈ ವರ್ಷ ನೋಂದಣಿ ಮಾಡಿಕೊಂಡಿದ್ದರು. ಒಟ್ಟು 4,52,732 ಪುರುಷರು, 4,21,110 ಮಹಿಳೆಯರು ಮತ್ತು 4 ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳು. ಮೊದಲ ಪರೀಕ್ಷೆಯಲ್ಲಿ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು, ಇದು ಕಳೆದ ಐದು ಅವಧಿಗಳಲ್ಲಿ ಅತ್ಯಧಿಕವಾಗಿದೆ.

Published On: 15 May 2022, 10:53 AM English Summary: Students now travel in KSRTC Busses With Old Passes

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.