1. ಸುದ್ದಿಗಳು

ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡಲು ಹೊಸ “Confirmtkt App”! ಇನ್ಮುಂದೆ ಟಿಕೆಟ್ ಬುಕಿಂಗ್ ಬಲು ಸುಲಭ..

Kalmesh T
Kalmesh T
Railway tatkal ticket Booking App

ಪ್ರಯಾಣ ಪ್ರಿಯರಿಗೆ ಭಾರತೀಯ ರೈಲ್ವೆಯಿಂದ ಸಿಹಿ ಸುದ್ದಿ. ಇನ್ಮುಂದೆ ನೀವು ರೈಲ್ವೆ ಪ್ರಯಾಣ ಮಾಡಲು ಪರದಾಡಬೇಕಿಲ್ಲ. ತತ್ಕಾಲ ಟಿಕೆಟ್ ಬುಕ್ಕಿಂಗ್ ಮಾಡಲು ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ ಇಂಡಿಯನ್ ರೈಲ್ವೆ.

ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ “Confirmtkt App”! ಎಂಬ ಹೊಸ Appliaction ಬಿಡುಗಡೆ ಮಾಡಿದೆ.

ಇದನ್ನೂ ಓದಿರಿ: ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಈ ತತ್ಕಾಲ್ ಟಿಕೆಟ್ಗಳನ್ನು ರೈಲು ಹೊರಡುವ 24 ಗಂಟೆಗಳ ಮೊದಲು ಮಾತ್ರ ಬುಕ್ ಮಾಡಬಹುದು. ರೈಲ್ವೆ ಪ್ರಯಾಣಿಕರು ತತ್ಕಾಲ್ ರೈಲು ಟಿಕೆಟ್ ಗಳನ್ನು Confirm Ticket Application ಮೂಲಕ ಬುಕ್ ಮಾಡಬಹುದು. ಯಾವ ರೈಲುಗಳಲ್ಲಿ ತತ್ಕಾಲ್ ರೈಲು ಟಿಕೆಟ್ ಲಭ್ಯವಿದೆ ಎಂಬುದನ್ನು ಮಾತ್ರ ಇದು ತೋರಿಸುತ್ತದೆ.

ಪ್ರಯಾಣಿಕರು ತಮ್ಮ ವೈಯಕ್ತಿಕ ವಿವರಗಳನ್ನು App ಅಥವಾ Website ನಲ್ಲಿ ಮುಂಚಿತವಾಗಿ ನವೀಕರಿಸಬೇಕಾಗುತ್ತದೆ. ಇದು ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಸಮಯವನ್ನು ಉಳಿಸುತ್ತದೆ.

ಅವರಿಗೆ ತತ್ಕಾಲ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. IRCTC ಲಾಗಿನ್ ವಿವರಗಳನ್ನು ನಮೂದಿಸಿದ ನಂತರ ಮತ್ತು ಪಾವತಿ ಮಾಡಿದ ನಂತರ ಇ-ಟಿಕೆಟ್ SMS ಅಥವಾ ಇಮೇಲ್ನಲ್ಲಿ ಬರುತ್ತದೆ.

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!

ತುರ್ತಾಗಿ ಪ್ರಯಾಣಿಸಲು ಬಯಸುವವರಿಗೆ ಮತ್ತು ಕೊನೆಯ ಕ್ಷಣದಲ್ಲಿ ಪ್ರವಾಸವನ್ನು ಯೋಜಿಸುವವರಿಗೆ ತತ್ಕಾಲ್ ರೈಲು ಟಿಕೆಟ್ಗಳು ಉಪಯುಕ್ತವಾಗಿವೆ. ತತ್ಕಾಲ್ ಟಿಕೆಟ್ಗಳು ರೈಲು ಹೊರಡುವ 24 ಗಂಟೆಗಳ ಮೊದಲು ಮಾತ್ರ ಲಭ್ಯವಿರುತ್ತವೆ.

ಎಸಿ ರೈಲುಗಳಲ್ಲಿ ತತ್ಕಾಲ್ ಟಿಕೆಟ್ಗಳ ಬುಕಿಂಗ್ ಹಿಂದಿನ ದಿನ ಬೆಳಿಗ್ಗೆ 10 ಗಂಟೆಗೆ ಮತ್ತು ನಾನ್ ಎಸಿ ರೈಲುಗಳಲ್ಲಿ ತತ್ಕಾಲ್ ಟಿಕೆಟ್ಗಳ ಬುಕಿಂಗ್ 11 ಗಂಟೆಗೆ ಪ್ರಾರಂಭವಾಗಲಿದೆ.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ

ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ? 

ಪ್ರಯಾಣಿಕರು ಮೊದಲು  www.confirmtkt.com ವೆಬ್ಸೈಟ್ ಅಥವಾ ಅಪ್ಲಿಕೇಶನ್ ಅನ್ನು ತೆರೆಯಬೇಕು. ನೀವು ಎಲ್ಲಿಂದ ಪ್ರಯಾಣಿಸಲು ಬಯಸುತ್ತೀರಿ ಎಂಬುದರ ವಿವರಗಳನ್ನು ನೀವು ನಮೂದಿಸಬೇಕು.

ನೀವು ಪ್ರಯಾಣಿಸಲು ಬಯಸುವ ದಿನಾಂಕವನ್ನು ಆಯ್ಕೆ ಮಾಡಬೇಕು. ರೈಲುಗಳ ಪಟ್ಟಿಯಿಂದ ನೀವು ಬುಕ್ ಮಾಡಲು ಬಯಸುವ ರೈಲನ್ನು ಆಯ್ಕೆ ಮಾಡಬೇಕಾಗುತ್ತದೆ.

ಸ್ಲೀಪರ್, ಥರ್ಡ್ ಎಸಿಯಂತಹ ಕ್ಲಾಸ್ ಆಯ್ಕೆ ಮಾಡಿಕೊಳ್ಳಬೇಕು. ಅದರ ನಂತರ ಬೋರ್ಡಿಂಗ್ ಪಾಯಿಂಟ್ ಆಯ್ಕೆ ಮಾಡಬೇಕು. ಪ್ರಯಾಣಿಕರ ವಿವರಗಳು, ಬರ್ತ್ ಆದ್ಯತೆಯನ್ನು ಆಯ್ಕೆ ಮಾಡಬೇಕು. ಸಂಪರ್ಕ ವಿವರಗಳು, ಇಮೇಲ್ ಐಡಿ ನಮೂದಿಸಬೇಕು.

ಇತರ ಆದ್ಯತೆಗಳನ್ನು ಆಯ್ಕೆ ಮಾಡಬೇಕು. ಪಾವತಿ ಮೋಡ್ ಅನ್ನು ಆಯ್ಕೆ ಮಾಡಬೇಕು. IRCTC ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಬುಕಿಂಗ್ ಅನ್ನು ಪೂರ್ಣಗೊಳಿಸಿ.

ತತ್ಕಾಲ್ ಟಿಕೆಟ್ ಬುಕ್ ಮಾಡುವ ಮೊದಲು ಅಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಮೊದಲೇ ಭರ್ತಿ ಮಾಡಿಕೊಳ್ಳಬೇಕು. ಇದರಿಂದ ನಿಮಗೆ ಸುಲಭವಾಗಿ ಟಿಕೆಟ್ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಬಹುದು.

India Post Payments bank: ದೇಶಾದ್ಯಂತ ಖಾಲಿ ಹುದ್ದೆಗಳ ನೇಮಕಾತಿ! ಮೇ 20 ಕೊನ ದಿನ..

Bottle Gourd Home Gardening! ಮನೆಯಲ್ಲಿಯೇ ಬೆಳೆಯಿರಿ!

Published On: 15 May 2022, 10:02 AM English Summary: Railway tatkal ticket Booking App

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.