ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿ ದರ ಖರೀದಿ ಪ್ರಿಯರಿಗೆ ಹತ್ತಿರವಾಗಿಯೇ ಇದೆ.
90% ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣ ಖರೀದಿಗೆ ಅರ್ಜಿ ಆಹ್ವಾನ
ಈ ವಾರದ ಪ್ರಾರಂಭದಲ್ಲಿ ಹಾಗೂ ಕಳೆದ ವಾರದ ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿತ್ತು. ಇದರಿಂದ ಚಿನ್ನ ಪ್ರಿಯರು ಖುಷಿಯಾಗಿದ್ದರು.
ಇದೀಗ ಕಳೆದ ಮೂರು ದಿನಗಳಿಂದ ಚಿನ್ನದ ದರದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡು ಬಂದಿಲ್ಲ.
ಚಿನ್ನದ ದರ ಯಥಾಸ್ಥಿತಿ ಮುಂದುವರಿದಿದ್ದು, ಬೆಳ್ಳಿದರದಲ್ಲಿ ಇನ್ನಷ್ಟು ಇಳಿಕೆ ಕಂಡುಬಂದಿದೆ.
ರೈತರಿಗೆ ಸಿಹಿಸುದ್ದಿ: ದೇಶದ ಪಂಚಾಯ್ತಿಗಳಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘ; ಕೇಂದ್ರ ಸರ್ಕಾರ ಸಮ್ಮತಿ
ಕಳೆದ ಎರಡು ದಿನಗಳಿಂದಲೂ ಚಿನ್ನದ ಬೆಲೆ ಸತತ ಅಲ್ಪವಾಗಿ ಕುಸಿದಿತ್ತು. ನಿನ್ನೆಗೆ ಹೋಲಿಸಿದರೆ ಗುರುವಾರವೂ ಸಹ ಚಿನ್ನ ಪ್ರಿಯರಿಗೆ ಅಥವಾ ಹೂಡಿಕೆದಾರರಿಗೆ ಉತ್ತಮ ವಾತಾವರಣವೇ ಇದೆ.
ಆದರೆ, ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬುಧವಾರದ ಬೆಲೆಯನ್ನೇ ಚಿನ್ನ ಇಂದಿಗೂ ಕಾಪಾಡಿಕೊಂಡಿದೆ.
ಇದರ ಹೊರತಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿರುವುದಿಲ್ಲ.
ಗುರುವಾರ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯು 5,240 ರೂ. ಆಗಿದ್ದು, ಪ್ರತಿ ಹತ್ತು ಗ್ರಾಂಗೆ 52,400 ರೂ. ತಲುಪಿದೆ.
ಇನ್ನೊಂದೆಡೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ 57,160 ರೂ. ಆಗಿದೆ.
ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) 52,450 ರೂ. ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಅನುಕ್ರಮವಾಗಿ
ಬಂಗಾರದ ಬೆಲೆ 53,150, ರೂ. 52,400, ರೂ. 52,400 ಆಗಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,550 ರೂ. ಆಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ವಿವರ ಈ ರೀತಿ ಇದೆ.
ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - 5,240 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 5,716 ರೂ. ಆಗಿದೆ.
ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - 41,920 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 45,728 ರೂ. ಆಗಿದೆ.
ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - 52,400 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 57,160 ರೂ. ಆಗಿದೆ.
ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - 5,24,000 ರೂ.
ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 5,71,600 ರೂ. ತಲುಪಿದೆ.
ಇನ್ನು ಬೆಳ್ಳಿಯ ದರದಲ್ಲೂ ಗಣನೀಯ ಪ್ರಮಾಣದಲ್ಲಿ ಇಳಿತ ಕಂಡುಬಂದಿದೆ. ಗುರುವಾರ ಬೆಳ್ಳಿ ದರದಲ್ಲಿ ಕುಸಿತ ಕಂಡುಬರುತ್ತಿದೆ.
ಬೆಳೆಹಾನಿ: ನೆರೆಯ ರಾಜ್ಯದಲ್ಲಿ ಪ್ರತಿ ಹೇಕ್ಟರ್‌ಗೆ 3,000 ಸಾವಿರದಿಂದ 20,000 ಸಾವಿರದ ವರೆಗೆ ಪರಿಹಾರ!
ಬೆಳ್ಳಿ ಚಿನ್ನದಷ್ಟು ಅಪರೂಪದ ಲೋಹವಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಬೆಲೆ ಇಳಿಕೆ ಕಂಡಿದ್ದು, ಹೂಡಿಕೆ ಪ್ರಮಾಣವೂ ಹೆಚ್ಚಳವಾಗಿದೆ.
ಸಮಯದಿಂದ ಬೆಳ್ಳಿಯೂ ಉತ್ತಮ ಹೂಡಿಕೆಯ ಸಾಧನವಾಗಿ ಗುರುತಿಸಲ್ಪಡುತ್ತಿದೆ. ಬೆಳ್ಳಿಗೂ ವಿಶ್ವದೆಲ್ಲೆಡೆ ಸಾಕಷ್ಟು ಬೇಡಿಕೆ ಇದೆ ಎಂದು ಹೇಳಬಹುದು.
ಗುರುವಾರ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ 69,950 ರೂಪಾಯಿ ತಲುಪಿದೆ.
ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ಅಧಿಕೃತ ಆಭರಣ ಮಳಿಗೆಗಳು ಮತ್ತು ಬ್ಯಾಂಕುಗಳಿಂದ ಕೊಳ್ಳಬಹುದಾಗಿದೆ.
ಬೆಂಗಳೂರು ನಗರದಲ್ಲಿ ಗುರುವಾರ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಅನುಕ್ರಮವಾಗಿ 720, ರೂ. 7,200 ಹಾಗೂ 72,000 ಸಾವಿರ ರೂಪಾಯಿಗೆ ತಲುಪಿದೆ.
ಇನ್ನುಳಿದಂತೆ ದೇಶದ ಪ್ರಮುಖ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 72,000 ರೂ.
ಆಗಿದ್ದರೆ, ದೆಹಲಿಯಲ್ಲಿ 69,950 ರೂ. ಮುಂಬೈನಲ್ಲಿ 69,950 ರೂ. ಹಾಗೂ ಕೊಲ್ಕತ್ತದಲ್ಲಿ 69,950 ರೂಪಾಯಿ ಆಗಿದೆ.
Share your comments