1. ಸುದ್ದಿಗಳು

ಇ-ಹರಾಜಿನಲ್ಲಿ 3.85 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟ: 901 ಕೋಟಿ ರೂ. ಆದಾಯ!

Hitesh
Hitesh
3.85 lakh MT of wheat sold in e-auction: Rs 901 crore Income!

ಕೇಂದ್ರ ಸರ್ಕಾರವು ಗೋಧಿ ಹರಾಜಿನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ.

ಕಳೆದ ವಾರ ಇ- ಹರಾಜಿನಲ್ಲಿ ಗೋಧಿ ಹರಾಜಿಗೆ ಮುಂದಾಗಿತ್ತು. ಈ ಪ್ರಕ್ರಿಯೆಯು ಎರಡನೇ ವಾರವೂ ಮುಂದುವರಿದಿದ್ದು, ಎರಡನೇ ಇ-ಹರಾಜಿನಲ್ಲಿ 3.85 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಭಾರತೀಯ ಆಹಾರ ನಿಗಮವು 901 ಕೋಟಿ ರೂ.ಗೆ ಮಾರಾಟ ಮಾಡಿದೆ.

ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಿಸಲು ಮಂತ್ರಿ ಮಂಡಳಿಯ ಶಿಫಾರಸಿನ ಆಧಾರದ ಮೇಲೆ ಇ-ಹರಾಜು ಮೂಲಕ ಗೋಧಿಯನ್ನು ಮಾರಾಟ ಮಾಡಲಾಗುತ್ತಿದೆ.

Market Price ತರಕಾರಿ, ಧಾನ್ಯಗಳ ಮಾರುಕಟ್ಟೆ ದರ ಗುರುವಾರ ಎಷ್ಟಿದೆ ಗೊತ್ತೆ ?

ಫೆಬ್ರವರಿ 15, 2023ರಂದು ನಡೆದ ಎರಡನೇ ಇ-ಹರಾಜಿನಲ್ಲಿ  ಭಾರತೀಯ ಆಹಾರ ನಿಗಮವು 3.85 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರೂ.901 ಕೋಟಿಗೆ ಮಾರಾಟ ಮಾಡಿದೆ.

ಈ ಪ್ರಮಾಣದ ಗೋಧಿ ಮಾರಾಟವು ಇಲ್ಲಿಯವರೆಗೆ ಇ ಹರಾಜಿನಲ್ಲಿ ಮಾರಾಟವಾದ ಗೋಧಿ ಪ್ರಮಾಣ ದಾಖಲೆಯಾಗಿದೆ.

ಎರಡನೇ ಇ-ಹರಾಜಿನಲ್ಲಿ  ಭಾರತೀಯ ಆಹಾರ ನಿಗಮವು 3.85 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರೂ.901 ಕೋಟಿಗೆ ಮಾರಾಟ ಮಾಡಿದ್ದು, ಇದರಲ್ಲಿ 1060ಕ್ಕೂ ಹೆಚ್ಚು ಬಿಡ್‌ದಾರರು ಭಾಗವಹಿಸಿದ್ದರು.

ಈ ಹರಾಜಿನಲ್ಲಿ 15.25 ಲಕ್ಷ ಮೆಟ್ರಿಕ್‌ ಟನ್ ಗೋಧಿಯನ್ನು ಮಾರಾಟ ಮಾಡುವುದಾಗಿ ಘೋಷಿಸಲಾಗಿತ್ತು.

50-100 MT, 100-499 MT ಮತ್ತು 500-1000 MT ವ್ಯಾಪ್ತಿಯಲ್ಲಿ ಬಿಡ್‌ದಾರರು ಗೋಧಿಗಾಗಿ ಬಿಡ್‌ ಮಾಡಿದ ಕಾರಣ ಸಣ್ಣ ಮತ್ತು ಮಧ್ಯಮ ಗಿರಣಿ ಮಾಲೀಕರು ಮತ್ತು ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂದು ಇ ಹರಾಜು ವರದಿ ತಿಳಿಸಿದೆ.

 ಕೇವಲ 5 ಬಿಡ್‌ದಾರರು ಗರಿಷ್ಠ 3000 MTಗೆ ಏಕಕಾಲದಲ್ಲಿ ಬಿಡ್ ಮಾಡಿದ್ದಾರೆ.  

ಪ್ರತಿ ಕ್ವಿಂಟಾಲ್‌ಗೆ ಸರಾಸರಿ 2338.01 ರೂ. ದರದಲ್ಲಿ ಬಿಡ್‌ಗಳು ಇದ್ದುದರಿಂದ, ಭಾರತೀಯ ಆಹಾರ ನಿಗಮವು ಮೊದಲ ಮಾರಾಟದಿಂದ 901 ಕೋಟಿ ರೂಪಾಯಿಯನ್ನು ಗಳಿಸಿದೆ.  

Gold-Silver Price Today ಚಿನ್ನದ ದರದಲ್ಲಿ ಯಥಾಸ್ಥಿತಿ, ಬೆಳ್ಳಿ ಬೆಲೆಯಲ್ಲಿ ಇಳಿಕೆ!

ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಿಸಲು ಮಂತ್ರಿ ಮಂಡಳಿಯ ಶಿಫಾರಸಿನ ಆಧಾರದ ಮೇಲೆ

ಇ-ಹರಾಜು ಮೂಲಕ ಗೋಧಿಯನ್ನು ಮಾರಾಟ ಮಾಡಲಾಗುತ್ತಿದೆ.

ಅಂತಹ ಹರಾಜು ಮಾರಾಟವು ದೇಶದಾದ್ಯಂತ ಮಾರ್ಚ್ 2023 ರ 2 ನೇ ವಾರದವರೆಗೆ ಪ್ರತಿ ಬುಧವಾರ ನಡೆಯಲಿದೆ. 

Petrol Price Today ದೇಶದಲ್ಲಿ ಪೆಟ್ರೋಲ್‌, ಡಿಸೇಲ್‌ ದರದಲ್ಲಿ ಇಳಿಕೆ! 

Freight

ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

ಸರಕು ಸಾಗಣೆ ಗಳಿಕೆಯಲ್ಲಿ ಹೊಸ ದಾಖಲೆಯನ್ನು ಸಾಧಿಸಿರುವ ದಕ್ಷಿಣ ಮಧ್ಯ ರೈಲ್ವೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.  

ಈ ಕುರಿತು ಟ್ವೀಟ್‌ ಮಾಡಿರುವ ಅವರು ದಕ್ಷಿಣ ಮಧ್ಯ ರೈಲ್ವೆ ಆರಂಭದಿಂದಲೂ ಅತ್ಯಧಿಕ ಸರಕು ಗಳಿಕೆಯನ್ನು ಹುಟ್ಟುಹಾಕುವಲ್ಲಿ ಹೊಸ ದಾಖಲೆಯನ್ನು ಸಾಧಿಸುತ್ತಿದೆ ಎಂದಿದ್ದಾರೆ.

ದಕ್ಷಿಣ ಮಧ್ಯ ರೈಲ್ವೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ, ಟ್ವೀಟ್ ಮಾಡಿದ್ದಾರೆ.

ಈ ಹೊಸ ದಾಖಲೆಯು ಹೊಸ ಮೈಲಿಗಲ್ಲಿಗೆ ಕಾರಣವಾಗಲಿದೆ. ಒಳ್ಳೆಯ ಪ್ರವೃತ್ತಿ,  ಆರ್ಥಿಕ ಬೆಳವಣಿಗೆಗೂ ಉತ್ತಮ ಮುನ್ನುಡಿ.

ದಕ್ಷಿಣ ಮಧ್ಯ ರೈಲ್ವೆ ಇನ್ನಷ್ಟು ಪ್ರಗತಿಯನ್ನು ಸಾಧಿಸಲಿ ಎಂದು ಹೇಳಿದ್ದಾರೆ.  

ರೈತರಿಗೆ ಸಿಹಿಸುದ್ದಿ: ದೇಶದ ಪಂಚಾಯ್ತಿಗಳಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘ; ಕೇಂದ್ರ ಸರ್ಕಾರ ಸಮ್ಮತಿ 

Published On: 16 February 2023, 12:41 PM English Summary: 3.85 lakh MT of wheat sold in e-auction: Rs 901 crore Income!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.