ದೇಶದಲ್ಲಿ ವಾಹನ ಸವಾರರಿಗೆ ಸಿಹಿಸುದ್ದಿಯೊಂದು ಬಂದಿದೆ. ಅದೇ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಆಗಿರುವುದು.
ರೈತರಿಗೆ ಸಿಹಿಸುದ್ದಿ: ದೇಶದ ಪಂಚಾಯ್ತಿಗಳಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘ; ಕೇಂದ್ರ ಸರ್ಕಾರ ಸಮ್ಮತಿ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತ ಕಂಡುಬಂದಿದ್ದು, WTI ಕಚ್ಚಾ ತೈಲ ಬೆಲೆ ಮತ್ತು ಬ್ರೆಂಟ್ ಕಚ್ಚಾ ತೈಲ ಎರಡೂ ಇಳಿಕೆಯಾಗುತ್ತಿವೆ.
ಇದರಿಂದ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಇಳಿಕೆ ಆಗುತ್ತಿದೆ.
WTI ಕಚ್ಚಾ ತೈಲದಲ್ಲಿ ಶೇಕಡಾ 0.09 ರಷ್ಟು ಕುಸಿತದ ನಂತರ, ಪ್ರತಿ ಬ್ಯಾರೆಲ್‌ಗೆ $ 78.52 ರೂಪಾಯಿ ಮೊತ್ತದಲ್ಲಿ ಮಾರಾಟವಾಗುತ್ತಿದೆ.
ಇದೇ ಸಮಯದಲ್ಲಿ, ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.16 ರಷ್ಟು ಕುಸಿತವನ್ನು ದಾಖಲಿಸಿದೆ.
ಇದು ಪ್ರತಿ ಬ್ಯಾರೆಲ್‌ಗೆ $ 85.25ಕ್ಕೆ ವಹಿವಾಟು ನಡೆಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಳಿಕೆ ಕಾಣಿಸಿಕೊಂಡ ನಂತರದಲ್ಲಿ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿದೆ.
ಸರ್ಕಾರಿ ತೈಲ ಕಂಪನಿಗಳು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಪ್ರಕಟಿಸಿವೆ. ಇದರ ಅನ್ವಯ ದೇಶದ ಕೆಲವು ರಾಜ್ಯಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ.
ಜೈಪುರ, ಭುವನೇಶ್ವರ ಇಂಧನ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಅದೇ ತಿರುವನಂತಪುರದಲ್ಲಿ ಕೊಂಚ ತಗ್ಗಿದೆ.
ಯುಪಿಯ ಲಕ್ನೋದಲ್ಲಿ, ಪೆಟ್ರೋಲ್ 24 ಪೈಸೆ ಕಡಿಮೆ ಮತ್ತು ಡೀಸೆಲ್ 23 ಪೈಸೆ ಅಗ್ಗವಾಗಿ 96.33 ರೂ ಮತ್ತು ಡೀಸೆಲ್ ಲೀಟರ್‌ಗೆ 89.53 ರೂ. ತಲುಪಿದೆ.
ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ: ಅಡಿಕೆಯಲ್ಲಿ ಹಾನಿಕಾರಕ ಅಂಶವಿಲ್ಲ; ಎಂ.ಎಸ್. ರಾಮಯ್ಯ ಇನ್ಸ್‌ಟಿಟ್ಯೂಟ್ ವರದಿ
ಇನ್ನು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.72 ಮತ್ತು ಡೀಸೆಲ್ 89.62 ರೂ ಡೀಸೆಲ್ ದರವು ತಲುಪಿದೆ.
ಅಲ್ಲದೇ ಜೈಪುರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 54 ಪೈಸೆ ಏರಿಕೆಯಾಗಿದ್ದರೆ, 108.62 ರೂಪಾಯಿ ಡೀಸೆಲ್ 49 ಪೈಸೆ ಹೆಚ್ಚಾಗಿ 93.85 ರೂಪಾಯಿ ಆಗಿದೆ.
ತಿರುವನಂತಪುರದಲ್ಲಿ ಪೆಟ್ರೋಲ್ ಲೀಟರ್‌ಗೆ 29 ಪೈಸೆ ಇಳಿಕೆಯಾಗಿ 107.71 ರೂ. ಮತ್ತು ಡೀಸೆಲ್ 27 ಪೈಸೆ ಕುಸಿದಿದ್ದು, 96.52 ರೂಪಾಯಿ ತಲುಪಿದೆ.
ಪಾಟ್ನಾದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು 21-21 ಪೈಸೆ ಅಗ್ಗವಾಗಿ 107.24 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 94.04 ರೂ.ಗೆ ಮಾರಾಟವಾಗುತ್ತಿದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪರಿಷ್ಕರಣೆ ಆಗುತ್ತಿದೆ.
ಬೆಳೆಹಾನಿ: ನೆರೆಯ ರಾಜ್ಯದಲ್ಲಿ ಪ್ರತಿ ಹೇಕ್ಟರ್‌ಗೆ 3,000 ಸಾವಿರದಿಂದ 20,000 ಸಾವಿರದ ವರೆಗೆ ಪರಿಹಾರ!
ಭಾರತದ ಪ್ರಮುಖ ನಗರಗಳಲ್ಲಿ ಪ್ರಸ್ತುತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ
ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಈ ರೀತಿ ಇದೆ
ಹೊಸದಿಲ್ಲಿ : ಪೆಟ್ರೋಲ್: ₹96.72 , ಡೀಸೆಲ್: ₹ 89.62
ಕೋಲ್ಕತ : ಪೆಟ್ರೋಲ್ : ₹106.03 , ಡೀಸೆಲ್ : ₹92.76
ಮುಂಬಯಿ : ಪೆಟ್ರೋಲ್ : ₹106.31 , ಡೀಸೆಲ್ : ₹93.46
ಚೆನ್ನೈ : ಪೆಟ್ರೋಲ್ : ₹102.73, ಡೀಸೆಲ್: ₹94.33
ಬೆಂಗಳೂರು : ಪೆಟ್ರೋಲ್: ₹101.94 , ಡೀಸೆಲ್: ₹87.89
ಲಖನೌ : ಪೆಟ್ರೋಲ್: ₹96.57 , ಡೀಸೆಲ್: ₹87.89
ನೋಯ್ಡಾ : ಪೆಟ್ರೋಲ್: ₹97.00, ಡೀಸೆಲ್: ₹90.14
ಗುರುಗ್ರಾಮ : ಪೆಟ್ರೋಲ್: ₹97.77 , ಡೀಸೆಲ್: ₹89.65
Share your comments