1. ಸುದ್ದಿಗಳು

ಕಳಪೆ ಗುಣಮಟ್ಟದ ಬೀಜ ಪೂರೈಕೆ: ಸೀಡ್ಸ್ ಕಂಪನಿಗೆ ಬಿತ್ತು ಭಾರೀ ದಂಡ!

Maltesh
Maltesh
Poor quality seed supply: Heavy penalty for seeds company!

ಧಾರವಾಡ : ಗದಗ ತಾಲ್ಲೂಕಿನ ಬೆನಹಾಳ ಗ್ರಾಮದ ರೈತನಾದ ಹೂವಪ್ಪ ಜಂಗಣ್ಣವರ ಎಂಬುವವರು 2019-20ನೇ ಸಾಲಿನ ಹಿಂಗಾರಿನಲ್ಲಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲು ನಿರ್ಧರಿಸಿ ರೂ.5,400/- ಕೊಟ್ಟು ಗಂಗಾ ಕಾವೇರಿ ಸೀಡ್ಸ್ ಪ್ರೈ. ಲಿ. ರವರ ಬಳಿ ಬೀಜಗಳನ್ನು ಖರೀದಿಸಿದ್ದರು.

ದೂರುದಾರ ಆ ಬೀಜಗಳನ್ನು ತನ್ನ ಜಮೀನು ಸರಿಯಾಗಿ ಉಳಿಮೆ ಮಾಡಿ ಸುಮಾರು ರೂ.15,400/- ಖರ್ಚು ಮಾಡಿ ಬಿತ್ತಿದ್ದರು. ಮೆಕ್ಕೆಜೋಳದ ಮೊಳಕೆ ಒಡೆಯದೇ ಸರಿಯಾದ ಬೆಳೆ ಮತ್ತು ಫಸಲು ಬಂದಿಲ್ಲ ಅಂತಾ ಎದುರುದಾರ ಕಂಪನಿಯವರ ಮೇಲೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದರು.

ಆ ದೂರಿನಲ್ಲಿ ಗುಣಮಟ್ಟದ ಮೆಕ್ಕೆ ಜೋಳದ ಬೀಜಗಳನ್ನು ಪೂರೈಸದ ಕಾರಣ ಗಂಗಾ ಕಾವೇರಿ ಸೀಡ್ಸ್ ಕಂಪನಿಯವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು 3 ಲಕ್ಷ 75 ಸಾವಿರಗಳ ನಷ್ಟ ಭರ್ತಿ ಪರಿಹಾರ ಕೊಡಿಸಲು ಕೇಳಿದ್ದರು. ಎದುರುದಾರರು ಆಯೊಗದ ಮುಂದೆ ವಕೀಲರ ಮೂಲಕ ಹಾಜರಾಗಿ ತಾವು ಪೂರೈಸಿದ ಮೆಕ್ಕೆ ಜೋಳದ ಬೀಜ ಒಳ್ಳೆಯ ಗುಣಮಟ್ಟದ್ದು ಇರುತ್ತವೆ. ದೂರುದಾರ ತನ್ನ ಜಮೀನನ್ನು ಸರಿಯಾಗಿ ಉಳಿಮೆ ಮಾಡದೇ ಮತ್ತು ನೀರನ್ನು ಹಾಯಿಸದೇ ಇದ್ದುದ್ದರಿಂದ ಅವರ ತಪ್ಪಿನಿಂದ ಮೊಳಕೆ ಒಡೆದಿಲ್ಲ ಹಾಗೂ ಫಸಲು ಬಂದಿಲ್ಲ ಅಂತಾ ಹೇಳಿ ಅದಕ್ಕೆ ರೈತನೇ ಕಾರಣ ಅಂತಾ ಆಕ್ಷೇಪಿಸಿದ್ದರು.

ಬಂಗಾರ ಪ್ರಿಯರೇ ಇಲ್ನೋಡಿ.. ನಾಳೆಯಿಂದ ಈ ರೀತಿಯ ಚಿನ್ನಾಭರಣ ಖರೀದಿಗೆ ಅವಕಾಶವಿಲ್ಲ!

ಸದರಿ ದೂರುಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ  ಈಶಪ್ಪ. ಭೂತೆ ಹಾಗೂ ಸದಸ್ಯರುಗಳಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ   ಅವರು ದೂರುದಾರ ತನ್ನ ಜಮೀನಿನಲ್ಲಿ ಬೋರ ನೀರಿನ ಸೌಲಭ್ಯ ಹೊಂದಿದ್ದು ಅವನು ಜಮೀನನ್ನು ಸರಿಯಾಗಿ ಉಳಿಮೆ ಮಾಡಿ, ಬೀಜ  ಹಾಕಿ  ನೀರು  ಹಾಯಿಸಿದ್ದರೂ ಮೆಕ್ಕೆ ಜೋಳದ ಬೀಜ ಮೊಳಕೆ ಒಡೆಯದೆ ರೈತನಿಗೆ ಹಾನಿಯಾಗಿದೆ  ತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.

ಆ ಬಗ್ಗೆ ಎದುರುದಾರ ಕಂಪನಿಯವರು ಎತ್ತಿದ್ದ ಆಕ್ಷೇಪಣೆಗಳನ್ನು ಆಯೋಗ ತಳ್ಳಿ ಹಾಕಿದೆ. ಅದಕ್ಕಾಗಿ ಎದುರುದಾರ ಗಂಗಾ ಕಾವೇರಿ ಸೀಡ್ಸ್ ಕಂಪನಿಯವರು ದೂರುದಾರನಿಗೆ 1 ಎಕರೆಗೆ 25 ಸಾವಿರ ನಂತೆ ಒಟ್ಟು 75 ಸಾವಿರ ಬೆಳೆ ನಷ್ಟ ಪರಿಹಾರವನ್ನು ಬೀಜ ಖರೀದಿಸಿದ ದಿನಾಂಕ:09/12/2019 ರಿಂದ ಶೇ.8ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರ ರೈತನಿಗೆ ಕೊಡುವಂತೆ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ರೂ.25 ಸಾವಿರ ಪರಿಹಾರ, ರೂ.10,000/- ಪ್ರಕರಣದ ಖರ್ಚು ಹಾಗೂ ರೂ.15,400/- ಬೆಳೆಗೆ ವಿನಿಯೋಗಿಸಿದ ಖರ್ಚು ವೆಚ್ಚ ಕೊಡುವಂತೆ ತೀರ್ಪಿನಲ್ಲಿ ಹೇಳಿದೆ.

ಸರ್ಕಾರದಿಂದ ಬಹುದೊಡ್ಡ ಘೋಷಣೆ: Ration Card ಇದ್ದವರಿಗೆ ಇನ್ಮುಂದೆ 150 kg ಅಕ್ಕಿ ಫ್ರೀ!

Published On: 31 March 2023, 01:39 PM English Summary: Poor quality seed supply: Heavy penalty for seeds company!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.