1. ಸುದ್ದಿಗಳು

ರೈತರೇ ಇಲ್ನೋಡಿ: ಈ ಎಡವಟ್ಟು ಮಾಡಿಕೊಂಡ್ರೆ PM ಕಿಸಾನ್‌ 12ನೇ ಕಂತಿಗೆ ಅನರ್ಹ ಆಗೋದು ಪಕ್ಕಾ..!

Maltesh
Maltesh
PM kisan

PM kisan 11th Installment: ಕಳೆದ ತಿಂಗಳ ಮೇ 31 ರಂದು ಪಿಎಂ ಕಿಸಾನ್ ನಿಧಿಯ 11 ನೇ ಕಂತು ಬಂದ ನಂತರ, ಈಗ ಜನರು 12 ನೇ ಕಂತುಗಾಗಿ ಕಾಯಲು ಪ್ರಾರಂಭಿಸಿದ್ದಾರೆ. ಹೀಗಾಗಿ ಸರ್ಕಾರವು ಕೂಡ ಇದೇ  ಜುಲೈ 31 ರೊಳಗೆ  ರೈತರು ತಮ್ಮ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಪ್ರಧಾನಮಂತ್ರಿ ಸಮ್ಮಾನ್ ಕಿಸಾನ್ ನಿಧಿಯ (PM Kisan) 11ನೇ ಕಂತಿನ ಹಣ ಮೇ 31ರಂದು ರೈತರ ಖಾತೆಗೆ ಬಂದಿದೆ. ಈ ಬಾರಿ 10.63 ಕೋಟಿ ರೈತರ ಖಾತೆಗಳಿಗೆ ಸರ್ಕಾರದಿಂದ ಹಣ ವರ್ಗಾವಣೆಯಾಗಿದೆ. ಪಿಎಂ ಕಿಸಾನ್ ನಿಧಿಯ 12 ನೇ ಕಂತು ಆಗಸ್ಟ್ ಮತ್ತು ನವೆಂಬರ್ ನಡುವೆ ರೈತರ ಖಾತೆಗೆ ಬರಲಿದೆ. ಆದರೆ ಈ ಕಂತು ಬರುವ ಮೊದಲು, ನೀವು ಇ-ಕೆವೈಸಿ ಹೊಂದಿರುವುದು ಅವಶ್ಯಕ.

80 ಪ್ರತಿಶತ ರೈತರು ಇ-ಕೆವೈಸಿ ಮಾಡಿದ್ದಾರೆ

ವರದಿಯ ಪ್ರಕಾರ, ಮೇ 31 ರವರೆಗೆ ಸುಮಾರು 80 ಪ್ರತಿಶತ ರೈತರು ಇ-ಕೆವೈಸಿ ಮಾಡಿದ್ದಾರೆ. ಈಗ ಸರ್ಕಾರ ಪೂರ್ಣಗೊಳಿಸಲು ಕೊನೆಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಈಗಲಾದರೂ ರೈತರ ಇ-ಕೆವೈಸಿ ಪೂರ್ಣಗೊಳ್ಳದಿದ್ದರೆ 12ನೇ ಕಂತಿನ 2000 ರೂ. ಇ-ಕೆವೈಸಿ ಮಾಡಿದ ಖಾತೆದಾರರ ಖಾತೆಗೆ ಮಾತ್ರ 12ನೇ ಕಂತು ಬರುತ್ತದೆ.

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

ನೀವು ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಮನೆಯಲ್ಲಿ ಕುಳಿತು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಇ- ಕೆವೈಸಿ ಮಾಡಬಹುದು ಈ ಹಣವನ್ನು ಮೂರು ಕಂತುಗಳಲ್ಲಿ 2 ಸಾವಿರ ನೀಡಲಾಗುತ್ತದೆ. 2022-23 ರ ಹಣಕಾಸು ವರ್ಷದ ಎರಡನೇ ಮತ್ತು 12 ನೇ ಕಂತುಗಳನ್ನು ಆಗಸ್ಟ್ ಮತ್ತು ನವೆಂಬರ್ ನಡುವೆ ಖಾತೆಗಳಿಗೆ ಕಳುಹಿಸಲಾಗುತ್ತದೆ.

ಪಿಎಂ ಕಿಸಾನ್‌ ಪೋಸ್ಟ್ ಆಫೀಸ್‌ ದಿಟ್ಟ ಹೆಜ್ಜೆ

ಕೇಂದ್ರ ಸರ್ಕಾರದ ವತಿಯಿಂದ ರೈತರ ಮನೆಗಳಿಗೆ ಕಿಸಾನ್ ನಿಧಿಯ ಮೊತ್ತವನ್ನು ರವಾನಿಸುವ ಜವಾಬ್ದಾರಿಯನ್ನು ಅಂಚೆ ಇಲಾಖೆಗೆ ವಹಿಸಲಾಗಿದೆ. ಇದಕ್ಕಾಗಿ ಸರ್ಕಾರ ಅಂಚೆ ಇಲಾಖೆಗೆ ವಿಶೇಷ ಅಧಿಕಾರ ನೀಡಿದೆ. ಇಲ್ಲಿಯವರೆಗೆ ರೈತರು ಬ್ಯಾಂಕ್ ಹೊರತುಪಡಿಸಿ ಅಂಚೆ ಕಚೇರಿಗೆ ಭೇಟಿ ನೀಡಿ ಹಣವನ್ನು ಹಿಂಪಡೆಯಬಹುದು.

ಅಂಚೆ ಇಲಾಖೆ ಅಧಿಕಾರಿಗಳಿಗೂ ಆದೇಶ ನೀಡಲಾಗಿದೆ. ಇದಕ್ಕಾಗಿ ಜೂನ್ 13ರವರೆಗೆ ವಿಶೇಷ ಅಭಿಯಾನ ನಡೆಸಲಾಗುವುದು. ಇದಕ್ಕಾಗಿ ರೈತರಿಂದ ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಇಲ್ಲ ಎನ್ನಲಾಗುತ್ತಿದೆ.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಉತ್ತಮ ಕೃಷಿ ಮತ್ತು ಆದಾಯಕ್ಕಾಗಿ ಹೂಕೋಸು ಕೃಷಿ! ಇಲ್ಲಿದೆ ಹೂಕೋಸು ಬೆಳೆಯ ಸಮಗ್ರ ಮಾಹಿತಿ…

PM Kisan 11th Installment ಹಣ ಬಂದಿಲ್ಲ ಅಂದ್ರೆ ಏನು ಮಾಡ್ಬೇಕು ಗೊತ್ತೆ..?

PM Kisan 11ನೇ ಕಂತಿನ ಹಣ ನಿಮ್ಮ ಖಾತೆಗೆ ಬರದೇ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 011-24300606ಗೆ ಕರೆ ಮಾಡಿ ಕಾರಣ ತಿಳಿಯಬಹುದು.

ಜೊತೆಗೆ ನೀವು ಈ ಸಂಖ್ಯೆಗಳಿಗೆ ಸಹ ಕರೆ ಮಾಡಬಹುದು:-

PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266

ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:155261

PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011-23381092, 23382401

ಪಿಎಂ ಕಿಸಾನ್‌ನ ಹೊಸ ಸಹಾಯವಾಣಿ: 011-24300606

PM ಕಿಸಾನ್ ಮತ್ತೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109

ಇ-ಮೇಲ್ ಐಡಿ: pmkisan-ict@gov.in

saffron farming ; ʼಕೇಸರಿʼ ಕಾಸ್ಟ್ಲಿ ಯಾಕೆ..? ಅದರ ಕೃಷಿ ಪ್ರಕ್ರಿಯೆ ಹೇಗೆ..?

ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌

Published On: 15 June 2022, 03:15 PM English Summary: PM kisan Next Installment Update

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.