1. ತೋಟಗಾರಿಕೆ

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ

Kalmesh T
Kalmesh T
Honey Bee

“ಮೇ 20 -ವಿಶ್ವ ಜೇನುನೊಣ ದಿನ”ದ ನಿಮಿತ್ತವಾಗಿ ವಿದ್ಯಾರ್ಥಿನಿ ಮಾನಿಕ ಎನ್. ಸೂಕಿ ಅವರು ಜೇನು, ಜೇನಿನ ವಿಧ, ಜೇನಿನ ಹಲವಾರು ಉಪಯೋಗ, ಮತ್ತು ಕೆ.ಜಿ ಜೇನು ತುಪ್ಪಕ್ಕೆ 6 ಲಕ್ಷ ಮತ್ತು 8.8 ಲಕ್ಷದ ಬೆಲೆ ಇರುವ ವಿಶೇಷ ಜೇಣಿನ ಕುರಿತು ಮತ್ತದರ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ ಓದಿ.

ಇದನ್ನೂ ಓದಿರಿ: ಜೇನುಸಾಕಣೆ: ಕಡಿಮೆ ವೆಚ್ಚ ಹೆಚ್ಚು ಗಳಿಕೆ!

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

ಜೇನುಹುಳುಗಳು ಹೂಗಳ ಮಕರಂದವನ್ನು ಹೀರಿ ಜೇನುತುಪ್ಪವನ್ನು ತಯಾರಿಸುತ್ತವೆ. ಈ ಜೇನುತುಪ್ಪ ಹುಳುಗಳಿಗೆ ಹಾರಾಟಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವುದಲ್ಲದೆ ಜೇನುಗೂಡನ್ನು ಚಳಿಗಾಲದಲ್ಲಿ ಬೆಚ್ಚಗಿರಿಸುತ್ತದೆ. ಅದೃಷ್ಟವಶಾತ್, ಜೇನುನೊಣಗಳು ಅಗತ್ಯಕ್ಕಿಂತಲೂ ಹೆಚ್ಚು ಜೇನನ್ನು ತಯಾರಿಸುವುದರಿಂದ, ಜೇನು ಸಾಕಣೆದಾರರು ಹೆಚ್ಚುವರಿ ಜೇನನ್ನು ಹಿಂಡಿ ಶೇಖರಿಸುತ್ತಾರೆ.

ಜೇನುನೊಣಗಳು ಪ್ರಕೃತಿಯಿಂದ ನೈಸರ್ಗಿಕವಾಗಿ ಹೂಗಳ ಮಕರಂದವನ್ನು ಜೇನು ಗೂಡಿನೊಳಗೆ ಸಂಗ್ರಹಿಸುವ ಮೂಲಕ ಜೇನು ತಯಾರಿಸುವ ಪ್ರಕ್ರಿಯೆ ಶುರು ಮಾಡುತ್ತವೆ. ಸಂಗ್ರಹಿಸಿದ ಮಕರಂದ ಗೂಡಿನೊಳಗೆ ಸರಳ ಸಕ್ಕರೆಗಳಾಗಿ (Simple Sugars) ವಿಭಜನೆಯಾಗುತ್ತದೆ. 

ಜೇನಿನ ಕುಟುಂಬ ಮತ್ತದರ ರಚನೆ:

ಜೇನು ನೊಣಗಳು ಸಾಮಾಜಿಕ ನೊಣಗಳು. ಇವು ಸದಾ ಗುಂಪುಗುಂಪಾಗಿ ಬದುಕುತ್ತವೆ. ಕಾಲೋನಿಗಳಲ್ಲಿ ವಾಸಿಸುವ  ಈ ವಿಭಿನ್ನ ನೊಣಗಳಿಗೆ ಒಬ್ಬಳೇ ರಾಣಿ! ನೂರಾರು ಡ್ರೋನ್ ಗಳು ಮತ್ತು ಹಲವಾರು ಕೆಲಸಗಾರ ನೊಣಗಳು.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಕೆಲಸಗಾರ ಜೇನುನೊಣಗಳು ಅಂದರೆ ವರ್ಕರ್ ಬೀಸ್, ಇವು ಹೆಣ್ಣು ಜೇನುನೊಣಗಳು ಆದರೆ ಸಂತಾನೋತ್ಪತ್ತಿ ಮಾಡುವುದಿಲ್ಲ. ರಾಣಿ ಜೇನಿನ ಮತ್ತು ಅವಳ ಮೊಟ್ಟೆಗಳನ್ನು ನೋಡಿಕೊಳ್ಳುವುದು, ಹನಿಕೋಂಬ್ ನಿರ್ಮಿಸುವುದು, ಜೇನುತುಪ್ಪವನ್ನು ಕಾಪಾಡುವುದು , ಜೇನುಗೂಡನ್ನು ಸ್ವಚ್ಛವಾಗಿರಿಸುವುದು ಮತ್ತು ಇತರ ಚಟುವಟಿಕೆಗಳ ಜವಾಬ್ದಾರರಾಗಿರುತ್ತವೆ.

ರಾಣಿ ಜೇನುನೊಣವು ಲೈಂಗಿಕವಾಗಿ ಅಭಿವೃದ್ಧಿಹೊಂದಿದ ಏಕೈಕ ಹೆಣ್ಣು ಮತ್ತು ಅದರ ಪ್ರಾಥಮಿಕ ಕಾರ್ಯವೆಂದರೆ ಡ್ರೋನ್‌ಗಳನ್ನು ಅಂದರೆ Unfertilized Eggs ಮತ್ತು ಕೆಲಸಗಾರ ಅಂದರೆ Fertilized Eggs ಗಳನ್ನು ಇಡುವುದು.

Fertilize ಆದ ಮೊಟ್ಟೆಗಳು ಡ್ರೋನ್‌ಗಳಾಗಿ (ಗಂಡು ನೊಣಗಳು) ರಾಣಿ ಜೇನುನೊಣವನ್ನು ಸಂಭೋಗಿಸಿ, ಸಂಭೋಗದ ನಂತರ ಸತ್ತು ಹೋಗುತ್ತದೆ. ಇವುಗಳು ಜೇನನ್ನು ಶೇಖರಿಸುವ ಕೆಲಸವನ್ನು ವಹಿಸಿಕೊಂಡಿರುತ್ತವೆ.

ಉತ್ತಮ ಕೃಷಿ ಮತ್ತು ಆದಾಯಕ್ಕಾಗಿ ಹೂಕೋಸು ಕೃಷಿ! ಇಲ್ಲಿದೆ ಹೂಕೋಸು ಬೆಳೆಯ ಸಮಗ್ರ ಮಾಹಿತಿ…

Honey Family

ಪ್ರಪಂಚದ ದುಬಾರಿ ಜೇನು:

ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಿಳಿಸಿದಂತೆ ಅತಿ ದುಬಾರಿ ಜೇನುತುಪ್ಪವೆಂದರೆ ಟರ್ಕಿಯ Centauri ಜೇನುತುಪ್ಪ. ಇದು ಸಮುದ್ರ ಮಟ್ಟದಿಂದ 2500 ಮೀಟರ್ ಎತ್ತರದ ಯಾವುದೇ ಮಾನವನ ಸ್ಪರ್ಶವಿಲ್ಲದ ಗುಹೆಯೊಂದರಿಂದ ಉತ್ಖನನ ಮಾಡಲಾಗಿದೆ. ಈ ಜೇನನ್ನು "ಸ್ವರ್ಗೀಯ ಅಮೃತ" ಎಂದು ಕರೆಯುತ್ತಾರೆ.

ಇದರ ಬೆಲೆ ಒಂದು ಕೆಜಿಗೆ ರೂ 8.8 ಲಕ್ಷ ರೂಪಾಯಿಗಳಾಗಿದೆ. ಈ ಜೇನುತುಪ್ಪದ ಮಕರಂದವು ಬೇರೆ ಹೂಗಳ ಮಕರಂದ ಕ್ಕಿಂತ ವಿಭಿನ್ನವಾಗಿದೆ. ಇದು ಗಾಢವಾದ ಬಣ್ಣವನ್ನು ಹೊಂದಿದ್ದು ವಿವಿಧ ಔಷಧೀಯ ಗುಣಗಳಿಂದ ತುಂಬಿದೆ. ಅಲ್ಲದೆ ಜೇನುತುಪ್ಪವು ವರ್ಷಕ್ಕೆ ಒಂದು ಬಾರಿ ಮಾತ್ರ ಕೊಯ್ಲು ಮಾಡಲಾಗುತ್ತದೆ.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

Worlds Costly Honey

ನ್ಯೂಜಿಲ್ಯಾಂಡ್ ಮನುಕ ಜೇನು:

ಈ ಅಪರೂಪದ ಜೇನುತುಪ್ಪವು ಒಂದು ವರ್ಷಕ್ಕೆ ಕೇವಲ ಸಾವಿರ ಜಾಡಿಗಳಷ್ಟು ಮಾತ್ರ ದೊರೆಯುತ್ತದೆ. ಬೆಣ್ಣೆಯಂತಿರುವ ಜೇನು ಅತ್ಯಂತ ಸಿಹಿಯಾದ ಜೇನಾಗಿದೆ.

ಇದು ನ್ಯೂಜಿಲ್ಯಾಂಡ್‌ನ ಉತ್ತರಭಾಗದಲ್ಲಿ ಬಿಡುವ ಮನುಕ ಹೂಗಳಿಂದ ಮಕರಂದ ಹೀರಿ ಜೇನುನೊಣಗಳು ಈ ಜೇನನ್ನು ತಯಾರಿಸುತ್ತವೆ. ಇದು ಒಂದು ಕೆಜಿಗೆ ₹6 ಲಕ್ಷ ರೂಪಾಯಿಗಳಾಗಿದೆ.            

ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌

ನ್ಯೂಜಿಲೆಂಡ್‌ ಮನುಕ

ಜೇನು ಸಾಕಾಣಿಕೆಯಲ್ಲಿ ಗಮನಿಸಬೇಕಾದ ಅಂಶಗಳು:

ಜೇನುಸಾಕಣೆದಾರರು ಪ್ರತಿ 7-10 ದಿನಗಳಿಗೊಮ್ಮೆ ಜೇನುಗೂಡುಗಳನ್ನು ಪರಿಶೀಲಿಸಬೇಕು. ಅವುಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ, ಮೊದಲ ವರ್ಷದಲ್ಲೇ ಹೆಚ್ಚು ಜೇನುತುಪ್ಪದ ಇಳುವರಿಯನ್ನು ನಿರೀಕ್ಷಿಸಬೇಡಿ. ಮೊದಲ ವರ್ಷದ ಸಾಕಾಣಿಕೆಯಲ್ಲಿ ಪಡೆದ ಜ್ಞಾನದಿಂದ ಮುಂದಿನ ವರ್ಷಕ್ಕೂ ಅನ್ವಯಿಸಿಕೊಳ್ಳಿ. ಖಂಡಿತ ಹೆಚ್ಚು ಇಳುವರಿಯನ್ನು ಕಾಣಬಹುದು.

ಮೊದಲ ಕೆಲವು ದಿನಗಳವರೆಗೆ ಜೇನು ನೊಣಗಳಿಗೆ ಸಕ್ಕರೆಯ ನೀರು ಅಥವಾ ಕಬ್ಬಿನ ಹಾಲನ್ನು ನೀಡಬೇಕು. ಅವುಗಳಿಗೆ ಹಾರಲು ಸ್ನಾಯುಗಳಿಗೆ ಶಕ್ತಿಯನ್ನು ಒದಗಿಸುತ್ತದೆ ಜೇನು ಸಂಗ್ರಹಿಸಲು ಶುರುಮಾಡುತ್ತವೆ.

Indoor Fish Farming: ಒಳಾಂಗಣ ಮೀನು ಸಾಕಾಣಿಕೆ ಮಾಡಿ 3 ಪಟ್ಟು ಲಾಭ ಗಳಿಸಿ

ಲೇಖಕರು : ಮಾನಿಕ ಎನ್. ಸೂಕಿ

ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ,

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು, ತುಮಕೂರು.

ಮೊ: 91644 08180

Published On: 19 May 2022, 04:24 PM English Summary: World Bee Day- May 20

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.