1. ಸುದ್ದಿಗಳು

ಹೊಲದಲ್ಲಿ ನಟಿಯರ Photos ! ದೃಷ್ಟಿಯಾಗದಿರಲೆಂದು ರೈತನ Idea!

Kalmesh T
Kalmesh T
Photos of actresses in the yard! Farmer's Idea!

ಕೃಷಿಯಲ್ಲಿ ದಿನ ನಿತ್ಯ ಹತ್ತಾರು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅವು ವಿಜ್ಞಾನಿಗಳಿಂದಾಗಲಿ, ಸಂಶೋಧಕರಿಂದ ಆಗಲಿ ನಿತ್ಯ ಹತ್ತಾರು ತರದ ಪ್ರಯೋಗ ನಡೆಯುತ್ತಲೇ ಇರುತ್ತವೆ.

ಆದರೆ, ಇಂಥ ವೈಜ್ಞಾನಿಕ ಪ್ರಯೋಗಗಳ ನಡುವೆ ಭಾವನಾತ್ಮಕ ಅಂಶವು ಮುಖ್ಯವಾಗುತ್ತದೆ. ಅಂಥ ಪ್ರಯೋಗಗಳು ಅತಿ ಹೆಚ್ಚು ನಡೆಯುವುದು ಜನ ಸಾಮಾನ್ಯರಿಂದ. ಅದರಲ್ಲೂ ರೈತರಿಂದ. ಏಕೆಂದರೆ ರೈತ ತನ್ನೊಂದಿಗಿನ ಪ್ರತಿಯೊಂದು ಜೀವ, ವಸ್ತುವಿನೊಡನೆಯೂ ಒಂದಿಲ್ಲೊಂದು ರೀತಿಯ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿರುತ್ತಾನೆ.

ಇದನ್ನು ಓದಿರಿ: 

IBPS ನೇಮಕಾತಿ: ವಾರ್ಷಿಕ 25,00,000 ಸಂಬಳ! 2022-ಪರೀಕ್ಷೆಯಿಲ್ಲದೆ ಸರ್ಕಾರಿ ಉದ್ಯೋಗ

ಹಾಗೆಯೇ ಇಲ್ಲೊಬ್ಬ ರೈತ ತನ್ನ ಹೊಲದ ಬೆಳೆಗಳನ್ನು ಮುದ್ದು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾನೆ. ಈಗ ಈ ವಿಷಯಕ್ಕೂ ಈ ಲೇಖನಕ್ಕೂ ಏನಪ್ಪ ಸಂಬಂಧ ಅಂತೀರಾ? ಹಾಗಿದ್ರೆ ನಾವು ಹೇಳಲಿದ್ದೇವೆ ಒಂದು ಕುತೂಹಲಕರ ವಿಷಯ.

ಹೌದು! ಇಲ್ಲೊಬ್ಬ ಯುವ ರೈತ ತನ್ನ ಹೊಲದಲ್ಲಿ ಪಪ್ಪಾಯ ಬೆಳೆಯನ್ನು ಬೆಳೆದು,  ಅದರಲ್ಲಿ ಅಂತರ ಬೆಳೆಯಾಗಿ ಚೆಂಡು, ದಾಳಿಂಬೆ, ಹೂವು, ತರಕಾರಿ ಹಾಕಿದ್ದಾರೆ. ತಾನು ಬೆಳೆದ ಬೆಳೆಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಹೊಲದ ನಡುವೆ ಅಲ್ಲಲ್ಲಿ ಸಿನಿಮಾ ನಟಿಯರ ಫೋಟೊಗಳನ್ನು ಬ್ಯಾನರ್‌ ಮಾಡಿಸಿ ಹಾಕಿದ್ದಾರೆ.

ಮುಂದಿನ 5 ದಿನ ಬಿಸಿಲಿನ ತೀವೃತೆಯಲ್ಲಿ ಏರಿಕೆ! ಯಾವ ರಾಜ್ಯಗಳಲ್ಲಿ ಹೆಚ್ಚಾಗಲಿದೆ ಬಿಸಿಲು?

ಈ ವಿಷಯ ತಿಳಿಯುತ್ತಿದ್ದಂತೆಯೇ ಊರಿನ ಜನರೆಲ್ಲ ಅಚ್ಚರಿಯಿಂದ ಬಂದು ನೋಡಿಕೊಂಡು ಹೋಗುತ್ತಿದ್ದಾರೆ.  ಇದು ಅಕ್ಕಪಕ್ಕದ ಊರಿನವರಿಗೂ ಅಚ್ಚರಿ ಮೂಡಿಸಿದ್ದಲ್ಲದೇ ಸದ್ಯ ಎಲ್ಲೆಡೆ ಸುದ್ದಿಯಾಗುತ್ತಿದೆ.

ನಿಜಾಮಾಬಾದ್‌ ಜಿಲ್ಲೆಯ ನವಿಪೇಟ ಮಂಡಲದ ಕಮಲಾಪುರ ಗ್ರಾಮದ ರೈತ ಶ್ರೀನಿವಾಸ್‌ ರೆಡ್ಡಿ ಕಳೆದ 9 ವರ್ಷಗಳಿಂದ ಕೃಷಿಯನ್ನು ಮಾಡುತ್ತಿದ್ದಾರೆ. ಹೀಗೆ ನಟಿಯರ ಪೋಟೊ ಹಾಕುವುದಕ್ಕೆ ಕಾರಣ ಕೇಳಿದ್ದಕ್ಕೆ ಶ್ರೀನಿವಾಸ್‌ ಅವರು , ʼಹೀಗೆ ಮಾಡುವ ಮೂಲಕ ನಾನು ನಮ್ಮ ಹೊಲದ ಬೆಳೆಗಳನ್ನು ಜನರ ಕೆಟ್ಟ ದೃಷ್ಟಿಯಿಂದ ಹಾಗೂ ಪಕ್ಷಿಗಳ ಹಾವಳಿಯಿಂದ ಕಾಪಾಡುತ್ತಿದ್ದೇನೆʼ ಎಂದು ಹೇಳಿದ್ದಾರೆ.

Gold Coffee ಕುಡಿದ Golden Girl! 3190 ಬೆಲೆಯುಳ್ಳ “24K ಚಿನ್ನದ ಕಾಫಿ”ಯ ವಿಶೇಷತೆ ಗೊತ್ತೆ?

ಹಾಗೆಯೇ ನಟಿಯರ ಫೋಟೊ ಆಯ್ಕೆಯಲ್ಲೂ ತಮ್ಮ ಇಷ್ಟದ ನಟಿಯರ ಪೋಟೊಗಳನ್ನು ಹೊಲದಲ್ಲಿ ಹಾಕಿದ್ದಾರೆ. ಸಮಂತಾ, ಪೂಜಾ ಹೆಗಡೆ, ರಶ್ಮೀಕಾ ಮಂದಣ್ಣ, ಕಾಜೋಲ್‌ ಮುಂತಾದವರ ಫೋಟೊಗಳನ್ನು ಹಾಕಿದ್ದಾರೆ. ಹಾಗೆಯೇ ಊರಿನ ಜನರೆಲ್ಲ ಶ್ರೀನಿವಾಸ್‌ ರೆಡ್ಡಿ ಹೊಲಕ್ಕೆ ನಟಿಯರ ಕಾವಲಿದೆ ಎಂದು ತಮಾಷೆ ಮಾಡುತ್ತಿದ್ದಾರಂತೆ.

Agriculture super app! ರೈತರಿಗೆ Super App!

Published On: 29 March 2022, 04:16 PM English Summary: Photos of actresses in the yard! Farmer's Idea!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.