1. ಸುದ್ದಿಗಳು

Jds ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷ “ಜೆಡಿಎಸ್‌” ಎಡವಿದ್ದೆಲ್ಲಿ?

Hitesh
Hitesh

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಜೆಡಿಎಸ್‌ಗೆ ತನ್ನದೇ ಆದ ಮಹತ್ವ ಇದೆ. ಆದರೆ, ಈ ಬಾರಿ ಜೆಡಿಎಸ್‌ ತೀವ್ರವಾದ ಸೋಲನ್ನು ಅನುಭವಿಸಿದೆ.

ರಾಜ್ಯ ರಾಜಕೀಯದಲ್ಲಿ ಜೆಡಿಎಸ್‌ಗೆ ಮಹತ್ವದ ಸ್ಥಾನವಿದೆ. ಜೆಡಿಎಸ್‌ ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ

ಇಲ್ಲಿಯವರೆಗೂ ಒಮ್ಮೆಯೂ ಬಂದಿಲ್ಲ. ಆದರೆ, ಜೆಡಿಎಸ್‌ ಕಿಂಗ್‌ ಮೇಕರ್‌ ಆಗುವ ಮೂಲಕ

ಎಚ್‌.ಡಿ ಕುಮಾರ್‌ ಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

ಈ ಬಾರಿಯ ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದೆ. 

ಜೆಡಿಎಸ್‌ ಪಕ್ಷ ವಿಸರ್ಜನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ!

ಎಷ್ಟರ ಮಟ್ಟಿಗೆ ಎಂದರೆ ಈ ಬಾರಿ ಜೆಡಿಎಸ್‌ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಸಿಗುವುದು ಅನುಮಾನ ಎನ್ನಲಾಗಿದೆ.

ಆಗಿದ್ದರೆ ಜೆಡಿಎಸ್‌ ಎಡವಿದ್ದೆಲ್ಲಿ ಎನ್ನುವುದನ್ನು ನೋಡುವುದೇ ಆದರೆ…

ಜೆಡಿಎಸ್‌ಗೆ ಸೋಲಲು ಕಾರಣವಾದ ಅಂಶಗಳು

* ಕುಟುಂಬ ರಾಜಕಾರಣ: ಜೆಡಿಎಸ್‌ಗೆ ಈ ಬಾರಿ ಹೆಚ್ಚಾಗಿ ಮುಳುವಾಗಿದ್ದು, ಇದೇ ಅಂಶ, ಜೆಡಿಎಸ್‌ ಕುಟುಂಬ ರಾಜಕೀಯ ಮಾಡುತ್ತದೆ.

ಕಾರ್ಯಕರ್ತರನ್ನು ಚೆನ್ನಾಗಿ ನಡೆಸಿಕೊಳ್ಳುವುದಿಲ್ಲ. ಅವರಿಗೆ ಟಿಕೆಟ್‌ ನೀಡುವುದಿಲ್ಲ ಎನ್ನುವ ಆರೋಪಗಳು ಈ ಪಕ್ಷದ ಮೇಲಿದೆ.

ಈ ಬಾರಿ ಹಾಸನದಲ್ಲಿ ಭವಾನಿ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡುವ ವಿಚಾರವಾಗಿ ಹಲವು ಗೊಂದಲ ಸೃಷ್ಟಿಯಾಗಿತ್ತು.

* ಹಳೆ ಮೈಸೂರು ಭಾಗದಲ್ಲಿ ಗಟ್ಟಿ: ಜೆಡಿಎಸ್‌ ಪಕ್ಷವು ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲೂ ತಳಮಟ್ಟದ ಕಾರ್ಯಕರ್ತರನ್ನು ಹೊಂದಿಲ್ಲ.

ಅಲ್ಲದೇ ಹಲವು ಕ್ಷೇತ್ರಗಳಲ್ಲಿ ಪ್ರಬಲವಾದ ಅಭ್ಯರ್ಥಿಗಳು ಸಹ ಈ ಪಕ್ಷದಲ್ಲಿ ಇಲ್ಲ.

ಈ ಎಲ್ಲ ಕಾರಣಗಳಿಂದ ಈ ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಗೆಲುವಿನ ದಡ  ಮುಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ.  

* ಪಕ್ಷದಲ್ಲಿ ನಾಯಕರ ಕೊರತೆ: ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌ ಹೀನಾಯವಾಗಿ ಸೋತಿರುವುದರ ಹಿಂದೆ

ಈ ಪಕ್ಷದಲ್ಲಿ ಪ್ರಮುಖ ನಾಯಕರು ಇಲ್ಲದಿರುವುದು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮರ್ಪಕವಾದ ಪ್ರಚಾರ ಆಗದೆ ಇರುವುದು ಸಹ ಕಾರಣವಾಗಿದೆ.

ಎಚ್‌.ಡಿ. ಕುಮಾರಸ್ವಾಮಿ ಅವರೇ ಹೆಚ್ಚಾಗಿ ಪ್ರಚಾರಗಳಲ್ಲಿ ತೊಡಗಿಸಿಕೊಳ್ಳಬೇಕಾಯಿತು.

ಇನ್ನು ಳೇ ಮೈಸೂರು ಭಾಗದಲ್ಲಿ ಕಳೆದ ಬಾರಿ ಜೆಡಿಎಸ್‌ಗೆ ಹೆಚ್ಚು ಸ್ಥಾನ ಕೊಟ್ಟರೂ ಕ್ಷೇತ್ರಗಳು ಅಭಿವೃದ್ಧಿ ಆಗಿಲ್ಲ ಎನ್ನುವ ಆರೋಪವೂ ಇದೆ.  

Karnataka's regional party, JDS, where did it stumble?

* ರಾಜಿಗೆ ಬಂದಿದ್ದಾರೆ ಎಂಬ ಮಾತು: ಮತದಾನಕ್ಕೆ ಇನ್ನು ಒಂದುವಾರವಷ್ಟೇ ಇದೆ ಎನ್ನುವ ಸಂದರ್ಭದಲ್ಲಿ ಜೆಡಿಎಸ್‌ನೊಂದಿಗೆ ಮಾತುಕತೆ ನಡೆಸಲು

ಧೂತರು ಬಂದಿದ್ದಾರೆ ಎಂದು ಈ ಪಕ್ಷದ ಪ್ರಮುಖರು ಹೇಳಿದ್ದರು. ಹೀಗಾಗಿ, ಇದು ಸಹ ಜೆಡಿಎಸ್‌ ಪಕ್ಷ ಕೆಲವೇ ಸ್ಥಾನಗಳನ್ನು ಪಡೆದುಕೊಳ್ಳುವಂತಾಯಿತು.

ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ರಚನೆಗೆ ಮುಂದಾಗಲಿದೆ ಎನ್ನುವ ಅನುಮಾನವೂ ಜೆಡಿಎಸ್‌ ಮತಗಳು ಕಳೆದುಕೊಳ್ಳಲು ಕಾರಣವಾಯಿತು.      

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ:

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಪಕ್ಷದ ವರಿಷ್ಠರಾದ ಎಚ್‌.ಡಿ ಕುಮಾರಸ್ವಾಮಿ ಅವರು ಈ ಬಾರಿ ಜೆಡಿಎಸ್‌ ಪೂರ್ಣಬಹುಮತ

ಪಡೆದು ಅಧಿಕಾರಕ್ಕೆ ಬರದೆ ಇದ್ದರೆ, ಪಕ್ಷವನ್ನೇ ವಿಸರ್ಜಿಸುವುದಾಗಿ ಹೇಳಿದ್ದರು ಎನ್ನಲಾದ ಹೇಳಿಕೆಯನ್ನು ಕೆಲವು ಪತ್ರಿಕೆಗಳು ವರದಿ ಮಾಡಿದ್ದು,

ಅದರ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಕೆಲವರು ಕುಮಾರಸ್ವಾಮಿ

ಅವರ ಮುಂದಿನ ನಡೆ ಏನು ಎಂದು ಪ್ರಶ್ನೆ ಮಾಡಿದ್ದರು.

ಅಲ್ಲದೇ ಮತದಾನಕ್ಕೆ ಕೆಲವೇ ಗಂಟೆಗಳ ಮುಂದೆ ಸಮ್ಮಿಶ್ರ ಅಥವಾ ಬೆಂಬಲ ನೀಡಲು ಕೋರಿ ಕೆಲವು

ಧೂತರು ಬಂದಿದ್ದರು ಎಂದು ಜಿಡಿಎಸ್‌ನ ವರಿಷ್ಠರು ಕೊನೆಯ ಕ್ಷಣದಲ್ಲಿ ಹೇಳಿದ್ದು, ಆ ಪಕ್ಷಕ್ಕೆ ಮುಳುವಾಗಿ ಸಂಭವಿಸಿದೆ. 

ಜೆಡಿಎಸ್ ಈ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ  ವಿಜಯಸಾಧಿಸಲಿದೆ.

ಇದು ಆಗದೇ ಇದ್ದರೆ, ಪಕ್ಷವನ್ನು ವಿಸರ್ಜಿಸುವುದಾಗಿ ಎಂದು  ಎಚ್‌ಡಿ ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಹೇಳಿಕೆ ನೀಡಿದ್ದರು.

ಆದರೆ, ಈ ಬಾರಿ ಜೆಡಿಎಸ್‌ಗೆ ಕೇವಲ 19 ಸ್ಥಾನಗಳ ಸಿಕ್ಕಿದೆ. 2018ರಲ್ಲಿ 37 ಸ್ಥಾನಗಳಲ್ಲಿ ಜೆಡಿಎಸ್ ಜಯ ಕಂಡಿತ್ತು.

ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಈ ಬಾರಿ ಜೆಡಿಎಸ್‌ ಮತ್ತಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ. 

ಎಚ್‌.ಡಿ ಕುಮಾರಸ್ವಾಮಿ ಅವರ ಟ್ವೀಟ್‌ನಲ್ಲಿ ಏನಿದೆ ? 

ಚುನಾವಣೆ ಫಲಿತಾಂಶದ ನಂತರ ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು,

“ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ.

ಈ ಹಿಂದೆ ಶ್ರೀ ಹೆಚ್.ಡಿ.ದೇವೇಗೌಡರು, ಶ್ರೀ ಹೆಚ್.ಡಿ.ರೇವಣ್ಣ, ನಾನೂ ಸೋತಿದ್ದೆವು. ಹಾಗೆಯೇ ಗೆದ್ದಾಗ ಬದ್ಧತೆಯಿಂದ ಜನಸೇವೆ ಮಾಡಿದ್ದೇವೆ.

ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ”  ಎಂದು ಟ್ವೀಟ್‌ ಮಾಡಿದ್ದಾರೆ. 

ಅಲ್ಲದೇ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ.

ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು.

ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ. 

ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ.

ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ.

ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ.

ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು ಎಂದಿದ್ದಾರೆ.  ಜೆಡಿಎಸ್‌ನ ಪಂಚರತ್ನ ಯಾತ್ರೆ 103 ಕ್ಷೇತ್ರಗಳಲ್ಲಿ ಯಶಸ್ವಿಯಾಗಿತ್ತು.

ಈ ಬಾರಿ ಜೆಡಿಎಸ್‌ ಮತಗಳಿಕೆ ಶೇ.5 ರಷ್ಟು ಕುಸಿತ ಕಂಡಿದೆ.

2018ರ ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 18 ರಷ್ಟಿದ್ದ ಮತಗಳಿಕೆ ಪ್ರಮಾಣವು ಈ ಬಾರಿ ಕೇವಲ ಶೇ 13.3ಕ್ಕೆ ಕುಸಿತ ಕಂಡಂತಾಗಿದೆ.    

Published On: 19 May 2023, 04:03 PM English Summary: Karnataka's regional party, JDS, where did it stumble?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.