1. ಸುದ್ದಿಗಳು

ಬಿಬಿಎಂಪಿ, ವಿವಿಧ ಸಂಘ ಸಂಸ್ಥೆಗಳಿಂದ ಜನರಿಗೆ ಉಚಿತ ಸಸಿ!

Hitesh
Hitesh
Free saplings for people from BBMP, various organizations! (Pic Credits: pexels )

ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ) ನಾಗರಿಕರಿಕರು/ ಸ್ವಯಂ ಸೇವಾ ಸಂಘ ಸಂಸ್ಥೆಗಳಿಗೆ ಬಿಬಿಎಂಪಿ ಅರಣ್ಯ ಘಟಕ ವತಿಯಿಂದ  ಉಚಿತವಾಗಿ ಸಸಿಗಳನ್ನು ವಿತರಿಸಲಾಗುತ್ತಿದೆ.  

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದ ವಿವಿಧ ವಲಯಗಳ ವ್ಯಾಪ್ತಿಯ ಸಸ್ಯ ಕ್ಷೇತ್ರಗಳಲ್ಲಿ

8*12 ಅಳತೆಯ ವಿವಿಧ ಮರದ ಜಾತಿಯ ಸಸಿಗಳು ಲಭ್ಯವಿದ್ದು, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ

ಹಾಗೂ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಅಲ್ಲದೇ ಬೆಂಗಳೂರು ನಗರವನ್ನು ಹಸಿರೀಕರಣ ಮಾಡಲು ಸಾರ್ವಜನಿಕರ ಸಹಯೋಗವನ್ನು ಬಯಸಿ ಸಾರ್ವಜನಿಕರಿಗೆ,

ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ಬೊಮ್ಮನಹಳ್ಳಿ, ಯಲಹಂಕ, ರಾಜರಾಜೇಶ್ವರಿ ನಗರ ಹಾಗೂ ಮಹದೇವಪುರ

ವಲಯಗಳಲ್ಲಿ ಬಿಬಿಎಂಪಿ ಅರಣ್ಯ ಘಟಕ ವತಿಯಿಂದ  ವಿತರಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 

ದರಂತೆ, ಸಾರ್ವಜನಿಕರು/ಸ್ವಯಂ ಸೇವಾ ಸಂಘ ಸಂಸ್ಥೆಗಳ ಆಸಕ್ತರು  ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು

ಸಲ್ಲಿಸಿ ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡುವಂತೆ  ಉಪ ಅರಣ್ಯ

ಸಂರಕ್ಷಣಾಧಿಕಾರಿ  ರವರು ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿದ್ದಾರೆ.  

Free saplings for people from BBMP, various organizations!

ಹೆಚ್ಚಿನ ಮಾಹಿತಿ ಹಾಗೂ ಲಭ್ಯವಿರುವ ಸಸಿಗಳ ಸ್ಥಳದ/ಸಸ್ಯಕ್ಷೇತ್ರದ ಹಾಗೂ ಸಂಬಂಧಪಟ್ಟ ವಲಯ ಅರಣ್ಯ 

ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.  

--------------

ಪಾಟ್ನಾ ಮುನಿಸಿಪಲ್ ಕಾರ್ಪೊರೇಷನ್ (ಪಿಎಂಸಿ) ಪ್ರತಿನಿಧಿಗಳ ಭೇಟಿ

ಪಾಟ್ನಾ ಮುನಿಸಿಪಲ್ ಕಾರ್ಪೊರೇಷನ್ (ಪಿಎಂಸಿ) ಪ್ರತಿನಿಧಿಗಳು ಹಾಗೂ GIZ(Deutsche Gesellschaft

fur Internationale Zusammenarbeit) ಅಧಿಕಾರಿಗಳು ಬಿಬಿಎಂಪಿಗೆ ಭೇಟಿ ನೀಡಿದರು.   

ಪಾಟ್ನಾ ಮುನಿಸಿಪಲ್ ಕಾರ್ಪೊರೇಷನ್ (ಪಿಎಂಸಿ) ಪ್ರತಿನಿಧಿಗಳ ಭೇಟಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಹಣಕಾಸು) ಜಯರಾಮ್ ರಾಯಪುರ ಅವರ ಅಧ್ಯಕ್ಷತೆಯಲ್ಲಿ

ಪಾಟ್ನಾ ಮುನಿಸಿಪಲ್ ಕಾರ್ಪೊರೇಷನ್ (ಪಿಎಂಸಿ) ಪ್ರತಿನಿಧಿಗಳು ಹಾಗೂ GIZ ಅಧಿಕಾರಿಗಳ ಜೊತೆ ಪಾಲಿಕೆ

ಹಾಗೂ ಘನತ್ಯಾಜ್ಯ ನಿರ್ವಹಣೆಯ ಕಾರ್ಯವೈಖರಿ ಬಗ್ಗೆ ಸಭೆ ನಡೆಸಲಾಯಿತು.

NAMA facility fund-'Waste Solutions for a circular Economy in India' ಯೋಜನೆ ಅಡಿಯಲ್ಲಿ

GIZ ಅಧಿಕಾರಿಗಳು ಹಾಗೂ ಪಾಟ್ನಾ ಮುನಿಸಿಪಲ್ ಕಾರ್ಪೊರೇಷನ್ (ಪಿಎಂಸಿ) ರವರ ಪ್ರತಿನಿಧಿಗಳಿಗೆ ಬಿಬಿಎಂಪಿ

ವತಿಯಿಂದ ಘನತ್ಯಾಜ್ಯ ನಿರ್ವಹಣೆಯ ಕುರಿತು ಸಂಪೂರ್ಣ ಮಾಹಿತಿ ನೀಡಲಾಯಿತು.

ಮೊದಲಿಗೆ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಪಾಲಿಕೆಯ ಇತಿಹಾಸದ ಬಗ್ಗೆ ಪಾಟ್ನಾ

ಮುನಿಸಿಪಲ್ ಕಾರ್ಪೊರೇಷನ್ (ಪಿಎಂಸಿ) ಪ್ರತಿನಿಧಿಗಳಿಗೆ ವಿವರ ನೀಡಿದರು.

ನಂತರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ಬೆಂಗಳೂರಿನ ಪ್ರಗತಿಯ ಬಗ್ಗೆ, ಬಿಬಿಎಂಪಿ ವತಿಯಿಂದ ಅಳವಡಿಸಲಾದ ಜೈವಿಕ-ಮೆಥನೇಶನ್,

ಕಾಂಪೋಸ್ಟಿಂಗ್ ಘಟಕದ ಕಾರ್ಯ ನಿರ್ವಹಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಅಲ್ಲದೇ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಮಾದರಿ ಪಾಟ್ನಾ ಮುನಿಸಿಪಲ್ ಕಾರ್ಪೊರೇಷನ್‌ನಲ್ಲು

ಘನತ್ಯಾಜ್ಯ ನಿರ್ವಹಣೆ ಘಟಕ, ಪೌರಕಾರ್ಮಿಕರಿಗೆ ಸುವಿಧ ಕ್ಯಾಬಿನ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪಾಟ್ನಾ ಮುನಿಸಿಪಲ್ ಕಾರ್ಪೊರೇಷನ್ ಅಪರ ಆಯುಕ್ತರಾದ  ಶೀಲಾ ಇರಾನಿ, ಐ.ಪಿ.ಎಸ್.

ಪಾಟ್ನಾ ಮುನಿಸಿಪಲ್ ಕಾರ್ಪೊರೇಷನ್ ವಾರ್ಡ್ ಕೌನ್ಸಿಲರ್‌ಗಳಾದ ಸತೀಶ್ ಕುಮಾರ್ ಹಾಗೂ ಕೈಲಾಶ್ ಪ್ರಸಾದ್ ಯಾದವ್ ,

ಪಾಟ್ನಾ ಮುನಿಸಿಪಲ್  ಕಿರಿಯ ಅಭಿಯಂತರರು, GIZ ಅಧಿಕಾರಿಗಳು, ಪಾಲಿಕೆಯ ಜಂಟಿ ಆಯುಕ್ತರು(ಘನತ್ಯಾಜ್ಯ) ಪರಶುರಾಮ್ ಶಿನ್ನಾಳಕರ್

ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.   

Published On: 19 May 2023, 02:50 PM English Summary: Free saplings for people from BBMP, various organizations!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.