1. ಸುದ್ದಿಗಳು

Defense ದೇಶದ ರಕ್ಷಣಾ ಉತ್ಪಾದನೆ; ಇದೇ ಮೊದಲು 1 ಲಕ್ಷ ಕೋಟಿಗೂ ಹೆಚ್ಚು!

Hitesh
Hitesh
Defense production of the country; More than 1 lakh crore for the first time!

ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರಕ್ಕೆ ಮೊದಲಿನಿಂದಲೂ ಆದ್ಯತೆಯನ್ನು ನೀಡುತ್ತಿದ್ದು, ಇದೀಗ ರಕ್ಷಣಾ ಕ್ಷೇತ್ರದಲ್ಲಿ ಮಹತ್ವ ಬೆಳವಣಿಗೆಯೊಂದು ನಡೆದಿದೆ.

ಹೌದು ದೇಶದ ರಕ್ಷಣಾ ಉತ್ಪಾದನೆಯು ಮೊದಲ ಬಾರಿಗೆ 1 ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ.

ಈ ಮೊತ್ತದ ಉತ್ಪಾದನೆ ಇದೇ ಮೊದಲಾಗಿದೆ. ಅಲ್ಲದೇ 2022-23ರ ಹಣಕಾಸು ವರ್ಷದಲ್ಲಿ ಸುಮಾರು 1.07 ಲಕ್ಷ ಕೋಟಿ

ರೂ.ಗಳಷ್ಟಿದ್ದ ರಕ್ಷಣಾ ಉತ್ಪಾದನೆಯು 2021-22 ಕ್ಕಿಂತ 12% ಕ್ಕಿಂತ ಹೆಚ್ಚಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.  

ರಕ್ಷಣಾ ಸಚಿವಾಲಯದ ಸತತ ಪ್ರಯತ್ನಗಳ ಫಲವಾಗಿ, 2022-23ರ ಹಣಕಾಸು ವರ್ಷದಲ್ಲಿ (ಎಫ್‌ವೈ)

ರಕ್ಷಣಾ ಉತ್ಪಾದನೆಯ ಮೌಲ್ಯವು ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ.

ಮೌಲ್ಯವು ಪ್ರಸ್ತುತ 1,06,800 ಕೋಟಿ ರೂಪಾಯಿಗಳಷ್ಟಿದೆ ಮತ್ತು ಉಳಿದ ಖಾಸಗಿ ರಕ್ಷಣಾ ಉದ್ಯಮಗಳಿಂದ

ಸಮಗ್ರ ಹಾಗೂ ಪೂರ್ಣ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಿದ ನಂತರ ಈ ಪ್ರಮಾಣ  ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

FY 2022-23ರಲ್ಲಿನ ರಕ್ಷಣಾ ಉತ್ಪಾದನೆಯ ಪ್ರಸ್ತುತ ಮೌಲ್ಯವು FY 2021-22 ಕ್ಕಿಂತ ಶೇಕಡಾ 12 ಕ್ಕಿಂತ ಹೆಚ್ಚು ಏರಿಕೆಯಾಗಿದೆ.  

ಈ ಅಂಕಿ ಅಂಶದ ಪ್ರಕಾರ 95,000 ಕೋಟಿ ರೂ. ಎಂದಾಗಿದೆ.

ರಕ್ಷಣಾ ಕ್ಷೇತ್ರದ ಕೈಗಾರಿಕೆಗಳು ಮತ್ತು  ಸಂಘಗಳು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು

ಮತ್ತು ದೇಶದಲ್ಲಿ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ವ್ಯಾಪಾರವನ್ನು ಸುಲಭಗೊಳಿಸುವ ಉದ್ದೇಶವನ್ನು ಸಾಧಿಸಲು ಹಲವಾರು ನೀತಿ ಸುಧಾರಣೆಗಳನ್ನು ತೆಗೆದುಕೊಳ್ಳಲಾಗಿದೆ.

ಪೂರೈಕೆ ಸರಪಳಿಗೆ MSME ಗಳು ಮತ್ತು ಸ್ಟಾರ್ಟ್-ಅಪ್‌ಗಳ ಏಕೀಕರಣ ಸೇರಿದೆ. 

ಈ ನೀತಿಗಳಿಂದಾಗಿ, ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಕೈಗಾರಿಕೆಗಳು ರಕ್ಷಣಾ ವಿನ್ಯಾಸ,

ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಬರಲಿವೆ.

ಕಳೆದ 7-8 ವರ್ಷಗಳಲ್ಲಿ ಕೈಗಾರಿಕೆಗಳಿಗೆ ನೀಡಲಾದ ರಕ್ಷಣಾ ಪರವಾನಗಿಗಳ ಸಂಖ್ಯೆಯಲ್ಲಿ ಸುಮಾರು 200 ಪ್ರತಿಶತದಷ್ಟು ಹೆಚ್ಚಳವಾಗಿದೆ.

ಸರ್ಕಾರ ದ ಈ ಕ್ರಮಗಳು ದೇಶದ ರಕ್ಷಣಾ ಕೈಗಾರಿಕಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಿವೆ ಮತ್ತು

ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ ಎಂದು ಹೇಳಲಾಗಿದೆ.   

Published On: 19 May 2023, 12:57 PM English Summary: Defense production of the country; More than 1 lakh crore for the first time!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.