1. ಸುದ್ದಿಗಳು

ಜೆಡಿಎಸ್‌ ಪಕ್ಷ ವಿಸರ್ಜನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ!

Hitesh
Hitesh
Discussion on the Social network about the dissolution of the JDS party!

ಜೆಡಿಎಸ್‌ ಪಕ್ಷ ವಿಸರ್ಜನೆ ಮಾಡುವ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಜೆಡಿಎಸ್‌ ಪಕ್ಷ ವಿಸರ್ಜನೆ ಚರ್ಚೆ ಈಗ ಏಕೆ ಎನ್ನುವ ವಿವರ ಇಲ್ಲಿದೆ.

ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ನ ವಿಸರ್ಜನೆಯ ಬಗ್ಗೆ ಇದೀಗ ವ್ಯಾಪಕವಾದ ಚರ್ಚೆ ನಡೆದಿದೆ.

ಪ್ರತಿ ಬಾರಿಯೂ ಚುನಾವಣೆಯ ನಂತರ ಜೆಡಿಎಸ್‌ನ ಬಗ್ಗೆ ಭಿನ್ನವಾದ ಚರ್ಚೆಗಳು ಪ್ರಾರಂಭವಾಗುತ್ತವೆ.

ಜೆಡಿಎಸ್‌ ಈ ಬಾರಿ ಪಂಚರತ್ನ ಯೋಜನೆಯ ಮೂಲಕ ಬಹುಮತ ಸಾಧಿಸಲಿದೆ ಎಂದೇ ಹೇಳಲಾಗಿತ್ತು.

ಅಲ್ಲದೇ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಈ ಪಕ್ಷ ಹಾಕಿಕೊಂಡಿತ್ತು.

ಆದರೆ, ಜೆಡಿಎಸ್‌ಗೆ ಈ ಬಾರಿ ಕೇವಲ 19 ಸೀಟುಗಳು ಮಾತ್ರ ಲಭ್ಯವಾಗಿವೆ.

ಜಿಡಿಎಸ್‌ ಭದ್ರಕೋಟೆ ಆಗಿರುವ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್‌ ಈ ಬಾರಿ ಸೋತಿದೆ.

ಅಲ್ಲದೇ ಹಲವು ಕ್ಷೇತ್ರಗಳಲ್ಲಿ ಪ್ರಾಯಾಸದ ಗೆಲುವನ್ನು ಆ ಪಕ್ಷ ಸಾಧಿಸಿದೆ.

ಇದೇ ಸಂದರ್ಭದಲ್ಲಿ ಜೆಡಿಎಸ್‌ನ ವಿಸರ್ಜನೆಯ ಕುರಿತು ಸಹ ಭಾರೀ ಚರ್ಚೆ ನಡೆಯುತ್ತಿದೆ.

ಕುಮಾರಸ್ವಾಮಿ ಹೇಳಿಕೆಯ ಕುರಿತು ಭಾರೀ ಚರ್ಚೆ!

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಪಕ್ಷದ ವರಿಷ್ಠರಾದ ಎಚ್‌.ಡಿ ಕುಮಾರಸ್ವಾಮಿ ಅವರು ಈ ಬಾರಿ ಜೆಡಿಎಸ್‌ ಪೂರ್ಣಬಹುಮತ ಪಡೆದು ಅಧಿಕಾರಕ್ಕೆ ಬರದೆ ಇದ್ದರೆ,

ಪಕ್ಷವನ್ನೇ ವಿಸರ್ಜಿಸುವುದಾಗಿ ಹೇಳಿದ್ದರು ಎನ್ನಲಾದ ಹೇಳಿಕೆಯನ್ನು ಕೆಲವು ಪತ್ರಿಕೆಗಳು ವರದಿ ಮಾಡಿದ್ದು,

ಅದರ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಕೆಲವರು ಕುಮಾರಸ್ವಾಮಿ ಅವರ ಮುಂದಿನ ನಡೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಮತದಾನಕ್ಕೆ ಕೆಲವೇ ಗಂಟೆಗಳ ಮುಂದೆ ಸಮ್ಮಿಶ್ರ ಅಥವಾ ಬೆಂಬಲ ನೀಡಲು ಕೋರಿ ಕೆಲವು

ಧೂತರು ಬಂದಿದ್ದರು ಎಂದು ಜಿಡಿಎಸ್‌ನ ವರಿಷ್ಠರು ಕೊನೆಯ ಕ್ಷಣದಲ್ಲಿ ಹೇಳಿದ್ದು, ಆ ಪಕ್ಷಕ್ಕೆ ಮುಳುವಾಗಿ ಸಂಭವಿಸಿದೆ.  

 ಜೆಡಿಎಸ್ ಈ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ  ವಿಜಯಸಾಧಿಸಲಿದೆ.

ಇದು ಆಗದೇ ಇದ್ದರೆ, ಪಕ್ಷವನ್ನು ವಿಸರ್ಜಿಸುವುದಾಗಿ ಎಂದು  ಎಚ್‌ಡಿ ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಹೇಳಿಕೆ ನೀಡಿದ್ದರು.

ಆದರೆ, ಈ ಬಾರಿ ಜೆಡಿಎಸ್‌ಗೆ ಕೇವಲ 19 ಸ್ಥಾನಗಳ ಸಿಕ್ಕಿದೆ.

2018ರಲ್ಲಿ 37 ಸ್ಥಾನಗಳಲ್ಲಿ ಜೆಡಿಎಸ್ ಜಯ ಕಂಡಿತ್ತು.

ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಈ ಬಾರಿ ಜೆಡಿಎಸ್‌ ಮತ್ತಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ.  

ಎಚ್‌.ಡಿ ಕುಮಾರಸ್ವಾಮಿ ಅವರ ಟ್ವೀಟ್‌ನಲ್ಲಿ ಏನಿದೆ ?  

ಚುನಾವಣೆ ಫಲಿತಾಂಶದ ನಂತರ ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು, “ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ.

ಈ ಹಿಂದೆ ಶ್ರೀ ಹೆಚ್.ಡಿ.ದೇವೇಗೌಡರು, ಶ್ರೀ ಹೆಚ್.ಡಿ.ರೇವಣ್ಣ, ನಾನೂ ಸೋತಿದ್ದೆವು.

ಹಾಗೆಯೇ ಗೆದ್ದಾಗ ಬದ್ಧತೆಯಿಂದ ಜನಸೇವೆ ಮಾಡಿದ್ದೇವೆ.

ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ”  ಎಂದು ಟ್ವೀಟ್‌ ಮಾಡಿದ್ದಾರೆ.  

ಅಲ್ಲದೇ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರಕ್ಕೆ ಶುಭವಾಗಲಿ.

ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ.

ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು.

ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ. 

Discussion on the Social network about the dissolution of the JDS party!

ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ.

ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ.

ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ.

ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು ಎಂದಿದ್ದಾರೆ.  

ಜೆಡಿಎಸ್‌ನ ಪಂಚರತ್ನ ಯಾತ್ರೆ 103 ಕ್ಷೇತ್ರಗಳಲ್ಲಿ ಯಶಸ್ವಿಯಾಗಿತ್ತು.

ಈ ಬಾರಿ ಜೆಡಿಎಸ್‌ ಮತಗಳಿಕೆ ಶೇ.5 ರಷ್ಟು ಕುಸಿತ ಕಂಡಿದೆ.

2018ರ ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 18 ರಷ್ಟಿದ್ದ ಮತಗಳಿಕೆ ಪ್ರಮಾಣವು ಈ ಬಾರಿ ಕೇವಲ ಶೇ 13.3ಕ್ಕೆ ಕುಸಿತ ಕಂಡಂತಾಗಿದೆ.  

ಹಲವು ಪ್ರಮುಖರ ಸೋಲು

ಜೆಡಿಎಸ್‌ನ (ಒಕ್ಕಲಿಗ ಸಮುದಾಯದ ಮತ) ಮತಗಳು ಈ ಬಾರಿ ಕಾಂಗ್ರೆಸ್‌ಗೆ ವರ್ಗಾವಣೆ ಆಗಿರುವುದು ಸ್ಪಷ್ಟವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಬಾರಿ ಅವರು ಮುಖ್ಯಮಂತ್ರಿ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿದ್ದಾರೆ.

ಹೀಗಾಗಿ ಈ ಸಮುದಾಯದ ಹಲವರು ಈ ಬಾರಿ ಕಾಂಗ್ರೆಸ್‌ಗೆ ಮತದಾನ ಮಾಡಿದ್ದಾರೆ.

ಅಲ್ಲದೇ ಈ ಬಾರಿ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ರಚನೆಯಾಗುವ ಸಾಧ್ಯತೆಗಳು ಇದ್ದರೆ, ಅದಕ್ಕೆ ಬೆಂಬಲ ನೀಡುವ ಒಲವನ್ನು ತೋರಿಸಿತ್ತು.

ಇದು ಸಹ ಪಕ್ಷಕ್ಕೆ ಬಹುವಾಗಿ ಮುಳುವಾಗಿದೆ. 1 ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಮತಗಳಿರುವ ರಾಮನಗರದಲ್ಲೇ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ.  

ಅಲ್ಲದೇ ಪಕ್ಷದ ಪ್ರಮುಖ ನಾಯಕರಾದ ಬಂಡೆಪ್ಪ ಕಾಶೆಂಪೂರ್, ಸಾ.ರಾ. ಮಹೇಶ್,

ನಾಗಠಾಣ, ವಿ.ಎಸ್‌ ದತ್ತಾ ಹಾಗೂ ದೇವಾನಂದ್ ಚವ್ಹಾಣ್  ಅವರಂತಹ ಪ್ರಮುಖ ನಾಯಕರೂ ಈ ಬಾರಿ ಸೋತಿದ್ದಾರೆ. 

Pic Credits: HD Kumaraswamy Official twitter account 

Weather Report: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ, ಕೆಲವೆಡೆ ಬಿಸಿಲ ಝಳ! 

Published On: 15 May 2023, 11:53 AM English Summary: Discussion on the Social network about the dissolution of the JDS party!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.