1. ಸುದ್ದಿಗಳು

ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು, ಈ ಹೊತ್ತಿನ ಚರ್ಚೆ ಏನು ?

Hitesh
Hitesh
Who is the Chief Minister of Karnataka, what is the current discussion?

ರಾಜ್ಯದಲ್ಲಿ ಇದೀಗ ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದೇ ಬಹುವಾಗಿ ಚರ್ಚೆ ಆಗುತ್ತಿದೆ.

ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ಇದ್ದಾರಾದರೂ, ಹೆಚ್ಚು ಚರ್ಚೆ ಆಗುತ್ತಿರುವುದು ಹಾಗೂ ಜಿದ್ದಾಜಿದ್ದಿ

ಇರುವುದು ಮಾಜಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ನಡುವೆ.

ಈ ಬಾರಿ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ಇಬ್ಬರೂ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಪೂರ್ಣ ಬಹುಮತ ಪಡೆಯುವುದರೊಂದಿಗೆ ಸರ್ಕಾರ ರಚನೆಯ ಪ್ರಕ್ರಿಯಲ್ಲಿ ತೊಡಗಿದೆ. 

ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿದ್ದು, ಸರಳವಾದ ಬಹುಮತ 113 ಇದೆ. ಈ ಬಾರಿ ಕಾಂಗ್ರೆಸ್‌ ಸರಳವಾದ ಬಹುಮತವನ್ನೂ ದಾಟಿ,

ಇದೇ ಮೊದಲ ಬಾರಿಗೆ 135 ಸ್ಥಾನಗಳನ್ನು ಗೆದ್ದಿದೆ. ಅಲ್ಲದೇ ರಾಜ್ಯದಲ್ಲಿ ಈ ರೀತಿ ಒಂದೇ ಪಕ್ಷವು 135 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಸಹ ಹೊಸ ದಾಖಲೆಯೇ ಆಗಿದೆ.

ಈ ರೀತಿ ಅಭೂತಪೂರ್ವ ಯಶಸ್ಸು ಸಿಕ್ಕಿದೆಯಾದರೂ, ಸಾರ್ವಜನಿಕರ ವಿಶ್ವಾಸವನ್ನು ಸರ್ಕಾರ ಉಳಿಸಿಕೊಳ್ಳಬೇಕಿದೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ಆಯ್ಕೆ ಪ್ರಕ್ರಿಯೆ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಯಾರಾಗ್ತಾರೆ ರಾಜ್ಯದ ಮುಂದಿನ ಮುಖ್ಯಮಂತ್ರಿ

ಇದು ಸದ್ಯ ಕರ್ನಾಟಕದವರಿಗಷ್ಟೇ ಅಲ್ಲ ದೇಶದ ಹಲವರು ಎದುರು ನೋಡುತ್ತಿರುವ ರಾಜಕೀಯ ಕುತೂಹಲ.

ದೇಶದಲ್ಲಿ ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿಯ ಆಯ್ಕೆ ಹಾಗೂ ಅವರು

ಈ ಒಂದು ವರ್ಷದ ಅವಧಿಯಲ್ಲಿ ನೀಡುವ ಜನಪರ ಆಡಳಿತ ಹಾಗೂ ತೆಗೆದುಕೊಳ್ಳುವ ನಿರ್ಣಯಗಳು ಎಲ್ಲವೂ ಪರಿಣಾಮ ಬೀರಲಿದೆ.

ಹೀಗಾಗಿ, ಹೈಕಮ್ಯಾಂಡ್‌ ಸಹ ಅಳೆದು ತೂಗಿಯೇ ನಿರ್ಣಯವನ್ನು ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ.

ದೆಹಲಿಯಿಂದ ಬುಲಾವ್‌

ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನ ಹೈಕಮ್ಯಾಂಡ್‌ ಆಹ್ವಾನಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಿದ್ದಾರೆ.

ಈ ಮಧ್ಯೆ ಡಿಕೆ ಶಿವಕುಮಾರ್‌ ಅವರ ಜನ್ಮದಿನ (ಸೋಮವಾರ) ಇರುವುದರಿಂದ ಅವರು ದೆಹಲಿಗೆ ಹೋಗಿಲ್ಲ.

ಜನ್ಮದಿನ ಇರುವ ಕಾರಣ, ಎಲ್ಲರೂ ಶುಭಕೋರಲು ಬರುತ್ತಿದ್ದಾರೆ ಹಾಗೂ ಕೆಲವು ಪೂಜೆಗಳನ್ನೂ ಮಾಡುವುದಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಬಾರಿ ಮುಖ್ಯಮಂತ್ರಿಯ ಪ್ರಭಲ ಆಕಾಂಕ್ಷಿಗಳಲ್ಲಿ ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಇದ್ದಾರೆ.

ಯಾರು ಸಿಎಂ (CM) ಆಗಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಜನಾಬಿಫ್ರಾಯವೇನು ?

ರಾಜ್ಯದಲ್ಲಿ ಚುನಾವಣೆ ಪೂರ್ವ ಹಾಗೂ ಚುನಾವಣೆಯ ನಂತರವೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾದ ಜನ ಬೆಂಬಲವೇ ಹೆಚ್ಚಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಜಯಕರ್ನಾಟಕ ದಿನಪತ್ರಿಕೆ ಸೇರಿದಂತೆ ವಿವಿಧ ಮಾಧ್ಯಮಗಳು ಹಾಗೂ ಜನಾಭಿಪ್ರಾಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಾರಿಯ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್‌ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ಬಿಜೆಪಿಯನ್ನು ರಾಜ್ಯದಲ್ಲಿ ಸೋಲಿಸುವಲ್ಲಿ ಅವರ ಪಾತ್ರವನ್ನು ಬಹಳಷ್ಟಿದೆ.

ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತರುವಲ್ಲಿ ಅವರು ಬಹುವಾಗಿ ಶ್ರಮಿಸಿದ್ದು, ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು

ಅವರಿಗೆ ಅಧಿಕಾರ ನೀಡಬೇಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಮಠಾಧೀಶರ ಬೆಂಬಲ

ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್‌ ಅವರನ್ನು ಆಯ್ಕೆ ಮಾಡಬೇಕು ಎಂದು ಒಕ್ಕಲಿಗ ಸಮುದಾಯದ ಹಲವು ಮಠಾಧೀಶರು ಒತ್ತಾಯಿಸಿದ್ದಾರೆ. 

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವರು

ಡಿ.ಕೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.    

Published On: 15 May 2023, 02:18 PM English Summary: Who is the Chief Minister of Karnataka, what is the current discussion?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.