1. ಸುದ್ದಿಗಳು

Karnataka Rajyotsava: 68 ಸಾಧಕರು, ಕನ್ನಡಕ್ಕೆ ಕೊಡುಗೆ ನೀಡಿದ ಸಂಸ್ಥೆಗಳಿಗೂ ಪ್ರಶಸ್ತಿ

Hitesh
Hitesh
Karnataka Rajyotsava: 68 achievers, organizations also awarded for contribution to Kannada

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.

1. 68 ಸಾಧಕರಿಗೆ, ಸಂಘ-ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

2. ಕಬ್ಬು ಬೆಳೆಯುವ ಪ್ರದೇಶಗಳಲ್ಲಿ 5 ತಾಸು ವಿದ್ಯುತ್

3. ಮೀನು ಕೃಷಿಗೆ ಹೊಸ ಯೋಜನೆ: ಸರ್ಕಾರ

4. ಹುಲಿ ಚರ್ಮ, ಉಗುರು ಬಳಸದಂತೆ ಮನವಿ

5. ರೇಷನ್‌ ಕಾರ್ಡ್‌ ವಿಭಜನೆ: ಸರ್ಕಾರದಿಂದ ಹೊಸ ಷರತ್ತು!

ಸುದ್ದಿಗಳ ವಿವರ ಈ ರೀತಿ ಇದೆ.

1. ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ  ತುಂಬುತ್ತಿರುವ ಹಿನ್ನೆಲೆಯಲ್ಲಿ,

ಕನ್ನಡದ ಪರವಾಗಿ ಕಾರ್ಯ ನಿರ್ವಹಿಸಿರುವ ಸಂಘ-ಸಂಸ್ಥೆಗಳಿಗೆ 10 ಪ್ರಶಸ್ತಿಗಳು ಹಾಗೂ 68 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು

ಪ್ರದಾನ ಮಾಡಲು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
-----------------
2. ರಾಜ್ಯದಲ್ಲಿ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ 5 ತಾಸು ವಿದ್ಯುತ್, ತೋಟದ ಮನೆಗಳ ಗೃಹ ಬಳಕೆಗಾಗಿ ಸಂಜೆ 6 ರಿಂದ 10

ಗಂಟೆಯವರೆಗೆ ಸಿಂಗಲ್ ಪೇಸ್ ವಿದ್ಯುತ್‌ ಪೂರೈಸುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನಿರ್ದೇಶನ ನೀಡಿದ್ದಾರೆ. 
-----------------
3. ರಾಜ್ಯದಲ್ಲಿ ಮೀನು ಕೃಷಿ ಉತ್ತೇಜನಕ್ಕೆ ಸರ್ಕಾರ ಹಲವು ನೂತನ ಯೋಜನೆಗಳನ್ನು ರೂಪಿಸಿರುವುದಾಗಿ

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.
----------------- 

4. ರಾಜ್ಯದಲ್ಲಿ ಸಿನಿಮಾ ನಟರು, ರಾಜಕಾರಣಿಗಳು ಹಾಗೂ ಗಣ್ಯರು ವನ್ಯಜೀವಿಗಳ ಅಂಗಾಂಗದಿಂದ ಮಾಡಿರುವ ಆಭರಣ ಬಳಸುತ್ತಿರುವುದು

ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಹುಲಿ ಚರ್ಮ, ಉಗುರು ಆನೆದಂತ

ಸೇರಿದಂತೆ ವನ್ಯಜೀವಿಗಳ ಅಂಗಾಂಗಳನ್ನು ಧರಿಸುವುದನ್ನು ಕೆಲವು ವ್ಯಕ್ತಿಗಳು ಪ್ರತಿಷ್ಠೆ ಎಂದು ಭಾವಿಸಿರುವುದು ವಿಷಾದನೀಯ ಎಂದಿದ್ದಾರೆ.

ಇನ್ನು ವನ್ಯಜೀವಿಗಳ ಅಂಗಾಂಗ ಅಳವಡಿಸಿರುವ ಆಭರಣ ಹೊಂದಿರುವ ರಾಜ್ಯದ ಕೆಲವು ಪ್ರಸಿದ್ಧ ವ್ಯಕ್ತಿಗಳನ್ನು

ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆಗೆ ಒಳಪಡಿಸುತ್ತಿದ್ದಾರೆ ಎಂದಿದ್ದಾರೆ.  

5. ಸರ್ಕಾರದ ಪ್ರಮುಖ ಗ್ಯಾರಂಟಿಗಳ ಯೋಜನೆಗಳ ಲಾಭವನ್ನು ಪಡೆಯುವುದಕ್ಕಾಗಿ ಕೆಲವರು ರೇಷನ್‌ ಕಾರ್ಡ್‌ಗಳನ್ನು ವಿಭಜನೆ ಮಾಡುವುದು ವರದಿಯಾಗುತ್ತಿದೆ.

ಅಂದರೆ, ಒಂದೇ ಕುಟುಂಬದಿಂದ ಎರಡು ಅಥವಾ ಮೂರು ಕಾರ್ಡ್‌ಗಳನ್ನು ಅಪ್ಲೈ ಮಾಡುವುದು. ಇದನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ.

ಈಗಾಗಲೇ ರಾಜ್ಯದಲ್ಲಿ ಬಿಪಿಎಲ್‌ ಅಥವಾ ಎಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುತ್ತಿರುವುದು ಹೆಚ್ಚಾಗಿದೆ. ಇದೀಗ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ಗಳ

ದುರುಪಯೋಗವನ್ನು ತಡೆಯಲು, ಬಿಪಿಎಲ್ ಕಾರ್ಡ್‌ಗಳನ್ನು ವಿಭಜಿಸುವುದನ್ನು ನಿಷೇಧಿಸಲು ರಾಜ್ಯ ಹಣಕಾಸು ಇಲಾಖೆ ಮುಂದಾಗಿದೆ.

ಬಿಪಿಎಲ್ ಕಾರ್ಡ್‌ಗಳನ್ನು ವಿಭಜಿಸಲು ಅವಕಾಶ ನೀಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿದೆ. 

ಚಿತ್ರಕೃಪೆ: ಸಾಮಾಜಿಕ ಜಾಲತಾಣ 

Published On: 27 October 2023, 05:57 PM English Summary: Karnataka Rajyotsava: 68 achievers, organizations also awarded for contribution to Kannada

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.