1. ಸುದ್ದಿಗಳು

ಕಲಿಕಾ ಭಾಗ್ಯ : ಕಟ್ಟಡ ಕಾರ್ಮಿಕರ ಮಕ್ಕಳಿಗೆ 50 ಸಾವಿರ ರೂ. ವಿದ್ಯಾರ್ಥಿ ವೇತನ

KJ Staff
KJ Staff
ಸಾಂದರ್ಭಿಕ ಚಿತ್ರ


ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ, ಕಾರ್ಮಿಕರ ಮಕ್ಕಳಿಗೆ ಕಲಿಕೆ ಭಾಗ್ಯ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಲು ಸರ್ಕಾರದ ವೆಬ್ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬೇಕು.. ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿ ನೇರ ವರ್ಗಾವಣೆ ಮೂಲಕ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ.

ನೋಂದಾಯಿತ ನಿರ್ಮಾಣ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣದ ನೆರವು.
ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿ ನೋಂದಾಯಿತ ಫಲಾನುಭವಿಯಿಂದ ಶೈಕ್ಷಣಿಕ ಸಹಾಯ ಧನದ ಅರ್ಜಿಯನ್ನು ಸ್ವೀಕರಿಸಿ, ಅವಲಂಬಿತ ಅರ್ಹ ಎರಡು ಮಕ್ಕಳಿಗೆ ಪ್ರತಿ ವರ್ಷ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ. ‘ಕಲಿಕಾ ಭಾಗ್ಯ¨’ ಯೋಜನೆಯಡಿಯಲ್ಲಿ ವಾರ್ಷಿಕ ಶೈಕ್ಷಣಿಕ ಸಹಾಯಧನ ಮತ್ತು ಪ್ರತಿಭಾ ಸಹಾಯಧನವನ್ನು ನೀಡುವುದು ( ಸರ್ಕಾರದ ಅಧಿಸೂಚನೆ ದಿನಾಂಕ 14-12-2019 ರಂತೆ ಶೈಕ್ಷಣಿಕ ಸಹಾಯಧನ ದರಗಳು ಸರ್ಕಾರದ ಪ್ರಕಟನೆ ಅನುಗುಣವಾಗಿರುತ್ತದೆ) .

ಇದನ್ನೂ ಓದಿ:ಇತರರಿಗೆ ಗೊತ್ತಿಲ್ಲದಂತೆ ಅವರ Whatsapp ನೋಡಬೇಕೆ? ಈ App ಡೌನ್ಲೋಡ್ ಮಾಡಿ ಸಾಕು

• 1ನೇ ತರಗತಿ ಉತ್ತೀರ್ಣರಾದವರಿಗೆ 2000/-
• 2ನೇ ತರಗತಿ ಉತ್ತೀರ್ಣರಾದವರಿಗೆ 2000/-
• 3ನೇ ತರಗತಿ ಉತ್ತೀರ್ಣರಾದವರಿಗೆ 2000/-
• 4ನೇ ತರಗತಿ ಉತ್ತೀರ್ಣರಾದವರಿಗೆ 3000/-
• 5ನೇ ತರಗತಿ ಉತ್ತೀರ್ಣರಾದವರಿಗೆ 3000/-
• 6ನೇ ತರಗತಿ ಉತ್ತೀರ್ಣರಾದವರಿಗೆ 3000/-
• 7ನೇ ತರಗತಿ ಉತ್ತೀರ್ಣರಾದವರಿಗೆ 4000/-
• 8ನೇ ತರಗತಿ ಉತ್ತೀರ್ಣರಾದವರಿಗೆ 4000/-
• 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• 10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-(On Merit Seat)
• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-(On Merit Seat)
• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಇದನ್ನೂ ಓದಿ: ಗ್ರಾಹಕರೇ ದಯವಿಟ್ಟು ಗಮನಿಸಿ.. ಏಪ್ರಿಲ್ 1 ರಿಂದ ಬದಲಾಗುತ್ತಿರುವ ಈ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು..?

 

ಪ್ರತಿಭಾವಂತ ಮಕ್ಕಳಿಗಾಗಿ
• ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
• ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
• ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
• ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/-
• ನೋಂದಾಯಿತ ನಿರ್ಮಾಣ ಕಾರ್ಮಿಕರ ಅರ್ಹ ಇಬ್ಬರು ಮಕ್ಕಳಿಗೆ ಸಹಾಯಧನ ನೀಡಲಾಗುವುದು;
• ನೋಂದಾಯಿತ ನಿರ್ಮಾಣ ಕಾರ್ಮಿಕರ ಮಂಡಳಿಗೆ ಪಾವತಿಸಬಹುದಾದ ಯಾವುದೇ ವಂತಿಗೆಯನ್ನು ಬಾಕಿ ಇರಿಸಿಕೊಂಡಿರಬಾರದು.

ಇದನ್ನೂ ಓದಿ: ಪೆಟ್ರೋಲ್ ಆಯ್ತು, ಗ್ಯಾಸ್ ಆಯ್ತು.. ಏಪ್ರೀಲ್ 1ರಿಂದ ಗಗನಕ್ಕೇರಲಿವೆ ಈ ಔಷಧಗಳ ರೇಟ್‌..!

ದೂರ ಶಿಕ್ಷಣ(Open University) ಮಾಡುವವರಿಗೆ ಇದು ಅನ್ವಯವಾಗುತ್ತದೆಯೇ..?

ಕರ್ನಾಟಕ ರಾಜ್ಯದಲ್ಲಿ ಭೌತಿಕವಾಗಿ ಆರಂಭವಾಗಿರುವ ಹಾಗು ಸರ್ಕಾರದಿಂದ ಮಾನ್ಯತೆ ಪಡೆದ ಶಾಲಾ ಕಾಲೇಜುಗಳಲ್ಲಿ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿಗಳ ಎರಡು ಮಕ್ಕಳಿಗೆ ಮಾತ್ರ ಶೈಕ್ಷಣಿಕ ಸಹಾಯಧನವನ್ನು ನೀಡಬಹುದಾಗಿರುತ್ತದೆ. ದೂರ ಶಿಕ್ಷಣ, ಆನ್ ಲೈನ್ ಶಿಕ್ಷಣ, ಹೋಂ ಸ್ಟಡಿ, ಇತ್ಯಾದಿ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯವು ಲಭ್ಯವಾಗುವುದಿಲ್ಲ.

ಇದನ್ನೂ ಓದಿ: Gold Rate: ಬೆಂಗಳೂರು, ಮೈಸೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ..!

ಈ ಸವಲತ್ತು ಪಡೆದುಕೊಳ್ಳಲು ಇರಬೇಕಾದ ದಾಖಲಾತಿಗಳು ಯಾವುವು.?/
• ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ ದೃಢೀಕೃತ ಪ್ರತಿ
• ರೇಷನ್ ಕಾರ್ಡ್
• ಉದ್ಯೋಗ ದೃಡೀಕರಣ ಪತ್ರ
• ಬ್ಯಾಂಕ್ ಖಾತೆ ಪುಸ್ತಕ ಪ್ರತಿ
• ಮೊದಲ ಮಗುವಿನ ಶಿಕ್ಷಣದ ವಿವರಗಳು
• ಎರಡನೇ ಮಗುವಿನ ಶಿಕ್ಷಣದ ವಿವರಗಳು
• ಮೊದಲ ಮಗುವಿನ ಛಾಯಾಚಿತ್ರ
• ಎರಡನೇ ಮಗುವಿನ ಛಾಯಾಚಿತ್ರ
• ಅಂಕಪಟ್ಟಿ ಮತ್ತು ವ್ಯಾಸಂಗ ಪ್ರಮಾಣ ಪತ್ರ
• ಮುಂದಿನ ಶೈಕ್ಷಣಿಕ ವರ್ಷದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
• ವಂತಿಗೆ ಪ್ರಮಾಣ ಪತ್ರವನ್ನು ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು
• ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಅರ್ಜಿ ಪ್ರಕ್ರಿಯೆ
• ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನಾ ವರದಿ ಸಿದ್ಧಪಡಿಸಲಾಗುವುದು (ಅಗತ್ಯವಿದ್ದಲ್ಲಿ)
• ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

ಇದನ್ನೂ ಓದಿ: Fruit Juices: ಈ ಜ್ಯೂಸ್‌ಗಳು ಬಾಯಾರಿಕೆಗೂ ಸೈ.. ಆರೋಗ್ಯಕ್ಕೂ ಜೈ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

Published On: 30 March 2022, 12:06 PM English Summary: kalika bhagya scholarship Karnataka Building And Other Construction Workers Welfare Board

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.