1. ಸುದ್ದಿಗಳು

ಇತರರಿಗೆ ಗೊತ್ತಿಲ್ಲದಂತೆ ಅವರ Whatsapp ನೋಡಬೇಕೆ? ಈ App ಡೌನ್ಲೋಡ್ ಮಾಡಿ ಸಾಕು

KJ Staff
KJ Staff
ಸಾಂದರ್ಭಿಕ ಚಿತ್ರ

ಪ್ರತಿಯೊಂದು ಮಗುವಿಗೆ ಮನೆಯೇ ಮೊದಲ ಶಾಲೆ. ತಾಯಿಯೇ ಮೊದಲ ಗುರು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸರಿ ಹಾಗೂ ತಪ್ಪಿನ ಬಗ್ಗೆ ಕಲಿಸಿಕೊಡುತ್ತಾರೆ. ಹಾಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ಇತ್ತೀಚಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೊಬೈಲ್ ಬಂದಿದ್ದೆ ತಡ ಮಕ್ಕಳ ಮೇಲೆ ಆಗಾಧ ಪರಿಣಾಮ ಬೀರುತ್ತಿದೆ. ಅರ್ಥಾತ್ ಮಕ್ಕಳು ಮೊಬೈಲ್ನಲ್ಲಿಯೇ ಮುಳುಗಿ ಬಿಟ್ಟಿದ್ದಾರೆ.

ಇದನ್ನೂ ಓದಿ: Gold Rate: ಬೆಂಗಳೂರು, ಮೈಸೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ..!


ಇನ್ನು ಮಕ್ಕಳ ಮೊಬೈಲ್ ಗೀಳಿನಿಂದ ಪೋಷಕರು ತೀವ್ ಆತಂಕಕ್ಕೊಳಗಾಗುವ ಪರಿಸ್ಥಿತಿ ಎದುರಾಗಿದೆ. ಯಾಕಂದ್ರೆ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರೆ ಅವರು ಅದರಲ್ಲಿ ಏನು ಮಾಡುತ್ತಾರೆ, ಏನು ನೋಡುತ್ತಾರೆ ಅನ್ನೋ ಸಹಜ ಕುತೂಹಲ ಹಾಗೂ ಗಾಬರಿ ಪೋಷಕರಲ್ಲಿ ಮನೆ ಮಾಡಿರುತ್ತದೆ. ಈ ಆತಂಕವನ್ನು ದೂರ ಮಾಡಲು ಈ ಲೇಖನ ಹೊತ್ತು ತಂದಿದ್ದೇವೆ. ಇದರಲ್ಲಿಇತರರಿಗೆ ಗೊತ್ತಿಲ್ಲದೆ ಅವರ ಮೊಬೈಲ್ ಕಂಟ್ರೋಲ್ ಮಾಡೋದು ಹೇಗೆ ಎಂಬುದನ್ನು ವಿವರಿಸಲಾಗಿದೆ.

ಇದನ್ನೂ ಓದಿ: Fruit Juices: ಈ ಜ್ಯೂಸ್‌ಗಳು ಬಾಯಾರಿಕೆಗೂ ಸೈ.. ಆರೋಗ್ಯಕ್ಕೂ ಜೈ

ಇತರರ ಸ್ಮಾರ್ಟ್‌ಫೋನ್ ಕಾರ್ಯಗಳನ್ನು ನೋಡುವುದು ಹೇಗೆ ?

ಸೆಲ್ ಟ್ರ್ಯಾಕರ್ (celltracker.i ಎಂಬ ಒಂದು ಮೊಬೈಲ್ ಅಪ್ಲಿಕೇಶನ್ ಇದೆ. ಸದ್ಯ ಇದು ಅತ್ಯುತ್ತಮ ಪೋಷಕರ ನಿಯಂತ್ರಣ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರುವುದಾಗಿ ಹೇಳಲಾಗುತ್ತಿದೆ. ಇದು ಕೇವಲ ಪೋಷಕರ ನಿಯಂತ್ರಣ ಅಪ್ಲಿಕೇಶನ್ ಮಾತ್ರ ಎಂದು ಕಂಪೆನಿ ತಿಳಿಸಿದೆ. ಯಾವುದೇ ಕಾರಣಕ್ಕೂ ಸ್ಪೈವೇರ್ ಅಲ್ಲ , ಇದು ಪತ್ತೇದಾರಿ ಅಪ್ಲಿಕೇಶನ್ ಅಲ್ಲ. ಆದರೆ, ಮೊಬೈಲ್ ಟ್ರ್ಯಾಕರ್‌ನ ಸುಧಾರಿತ ಅದೃಶ್ಯ ವೈಶಿಷ್ಟ್ಯವು ಇತರೆ ಬಳಕೆದಾರರ ಸಾಧನದಿಂದ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: GOOD NEWS : ಏಪ್ರೀಲ್ 1 ರಿಂದ Savings Account ಬಡ್ಡಿದರವನ್ನ ಶೇ 6ಕ್ಕೇರಿಸಲು ತೀರ್ಮಾನ ಕೈಗೊಂಡ ಬ್ಯಾಂಕ್

ಏನೆಲ್ಲ ಸೇವೆಗಳಿವೆ..?
• SMS ಟ್ರ್ಯಾಕರ್. ...
• WhatsApp ಟ್ರ್ಯಾಕರ್. ...
• ಸ್ಥಳ ಟ್ರ್ಯಾಕರ್. ...
• facebook ಟ್ರ್ಯಾಕರ್. ...
• ಬ್ರೌಸಿಂಗ್ ಇತಿಹಾಸ. ...
Photo ಟ್ರ್ಯಾಕರ್. ...
• SnapChat ಟ್ರ್ಯಾಕರ್.


ಸ್ಟೆಪ್ -1
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಅದು ಅನುಮತಿಸುವ ಮೂಲಕ ಎಲ್ಲಾ ನಿರ್ಬಂಧಗಳಿಗೆ ನೀವು ಅನುಮತಿ ನೀಡಬೇಕು. ಎಲ್ಲಾ ನೋಂದಣಿಯ ನಂತರ, celltracker.io ಅಪ್ಲಿಕೇಶನ್ ಅನ್ನು ನಿಮ್ಮ ಮಕ್ಕಳ ಸ್ಮಾರ್ಟ್‌ಫೋನಿನಲ್ಲಿ ಈ ಆಪ್‌ ಅನ್ನು ಡೌನ್‌ಲೋಡ್ ಮಾಡಬೇಕು.

ಸ್ಟೆಪ್-2
ಇನ್‌ಸ್ಟಾಲ್ ಆಗಿರುವ ಆಪ್ ಅವರಿಗೆ ಕಾಣಿಸಿಸುವುದಿಲ್ಲವಾದುದರಿಂದ, ಅವರಿಗೆ ತಿಳಿಯದಂತೆ. ಫೋನ್ ನಿಮ್ಮ ಹತ್ತಿರ ಇಲ್ಲದಿದ್ದರೂ ಸಹ ನೀವು ಅವರ ನೀವು ಅವರ ಫೋನ್ ಅನ್ನು ಕಂಟ್ರೋಲ್ ಮಾಡಬಹುದು.

 ಪೆಟ್ರೋಲ್ ಆಯ್ತು, ಗ್ಯಾಸ್ ಆಯ್ತು.. ಏಪ್ರೀಲ್ 1ರಿಂದ ಗಗನಕ್ಕೇರಲಿವೆ ಈ ಔಷಧಗಳ ರೇಟ್‌..!

ಸ್ಟೆಪ್-3
ಈಗ ನೀವು ಈಗ ಟ್ರ್ಯಾಕಿಂಗ್ ಮೊಬೈಲ್‌ನಲ್ಲಿ ಎಲ್ಲಾ ಚಟುವಟಿಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ನೀವು ಅವರ ಸಂಪರ್ಕಗಳು, ಕರೆಗಳು, ಸಂದೇಶಗಳು, ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ನೋಡಬಹುದು. ಅವರ ಫೋನಿನಲ್ಲಿ ಚಿತ್ರಗಳನ್ನು ಕ್ಲಿಕ್ ಮಾಡಬಹುದು, ಧ್ವನಿಯನ್ನು ರೆಕಾರ್ಡ್ ಮಾಡಬಹುದು ಮತ್ತು ಕೇವಲ ಒಂದು ಕ್ಲಿಕ್ ಮೂಲಕ ಅವುಗಳನ್ನು ಫಾರ್ಮೇಟ್ ಕೂಡ ಮಾಡಬಹುದಾಗಿದೆ.!ಹೀಗೆ ಇದು ನಿಮ್ಮ ಮಕ್ಕಳ ಮೇಲೆ ನಿಯಂತ್ರಣವಿಡಲು ಸಾಧ್ಯವಾಗುತ್ತದೆ.

Published On: 30 March 2022, 11:05 AM English Summary: how to control another android phone

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.