1. ಸುದ್ದಿಗಳು

World Snake Day: “ವಿಶ್ವ ಹಾವುಗಳ ದಿನ”ದ ಕುರಿತು ನಾಗರಾಜ್ ಬೆಳ್ಳೂರು ಅವರು ಬರೆದ ಕುತೂಹಲಕಾರಿ ಲೇಖನ!

Kalmesh T
Kalmesh T
July 16 ವಿಶ್ವ ಹಾವುಗಳ ದಿನ

ಇಂದು ಜುಲೈ 16 ವಿಶ್ವ ಹಾವುಗಳ ದಿನ. ವಿಶ್ವದಲ್ಲಿರುವ ವಿಶೇಷ ಹಾವುಗಳ ಪರಿಚಯ, ಹಾವುಗಳ ಕುರಿತು ಇರುವ ಮೂಢನಂಬಿಕೆಗಳು, ಅವುಗಳ ಜೀವನ ಶೈಲಿ ಹೀಗೆ ಎಲ್ಲದರ ಬಗ್ಗೆ ಇಲ್ಲಿದೆ ಕುತೂಹಲಕರ  ಮಾಹಿತಿಗಳು..

ಹಾವುಗಳು ಪರಿಸರದ ಆಹಾರ ಸರಪಳಿ ವ್ಯವಸ್ಥೆಯ ಬಹುಮುಖ್ಯ ಕೊಂಡಿಗಳು ಹಾಗಾಗಿ ಅವುಗಳ ಬಗೆಗೆ ಅರಿವು, ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಹಾವುಗಳ ದಿನವನ್ನು ಆಚರಿಸಲಾಗುತ್ತದೆ.

ವಿಶ್ವದಲ್ಲಿ 2500 ಕ್ಕೂ ಅಧಿಕ ಜಾತಿ/ಪ್ರಭೇದದ ಹಾವುಗಳಿದ್ದು, ಭಾರತದಲ್ಲಿ 300ಕ್ಕೂ ಅಧಿಕ ಜಾತಿ/ ಪ್ರಬೇಧಗಳನ್ನು ಕಾಣಬಹುದು.

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ

ಹಾವುಗಳು ಶೀತ ರಕ್ತಜೀವಿಗಾಗಿದ್ದು ಅಧಿಕ ಚಳಿ ಅಧಿಕ ಸೆಖೆ ಸಹಿಸುವುದಿಲ್ಲ. ಹಾವುಗಳು ಜೀವನದುದ್ದಕ್ಕೂ ಬೆಳೆಯುತ್ತಲೇ ಇರುತ್ತವೆ ಇವುಗಳ ಚರ್ಮದ ಮೇಲಿನ ಪೊರೆ  (Dead Cell) ಗಳಿಂದ ರಚನೆಯಾಗಿರುತ್ತದೆ.

ಹಾಗಾಗಿ ಹಾವಿನ ಗಾತ್ರಕ್ಕೆ ತಕ್ಕಂತೆ ಪೊರೆ ಬೆಳವಣಿಗೆಯಾಗದ ಕಾರಣ  ಹಾವುಗಳು ನಿಯಮಿತವಾಗಿ ಪೊರೆ ಕಳಚುತ್ತವೆ. ಸಾಮಾನ್ಯವಾಗಿ ಹಾವು ಪೊರೆ ಕಳಚಿದರೆ ಬೆಳೆಯುತ್ತಿದೆ ಎಂದರ್ಥ.

ಹಾವುಗಳು ಮರಿ ಹಾಕುತ್ತವಾ? ಅಥವಾ ಮೊಟ್ಟೆ ಇಡುತ್ತವಾ?

ಕೆಲ ಹಾವುಗಳು ಮರಿ ಹಾಕುತ್ತವೆ ( Viviparous) ಹಾಗೂ ಕೆಲ ಹಾವುಗಳು ಮೊಟ್ಟೆ (Oviparous)ಇಡುತ್ತವೆ. ಹಾವುಗಳು ಮೊಟ್ಟೆಗೆ ಕಾವು ಕೊಡಲಾರವು ಏಕೆಂದರೆ ಶೀತ ರಕ್ತಜೀವಿಯಾದ್ದರಿಂದ ತಮ್ಮ ದೇಹದಿಂದ ಬಿಸಿ ಉಂಟು ಮಾಡಲಾರವು.

ಹಾವುಗಳಲ್ಲಿ ಮರಿಗಳ ಪೋಷಣೆ ಇಲ್ಲ. ಆದರೆ ಕೆಲವು ಜಾತಿ ಹಾವುಗಳು ಮೊಟ್ಟೆಗಳು ಮರಿಯಾಗುವವರೆಗೂ ಜೊತೆಗಿದ್ದು ನಂತರ ಹೊರಟು ಹೋಗುತ್ತವೆ.

ಜೂನ್‌ 1 "ವಿಶ್ವ ಹಾಲು ದಿನ": ಹಾಲಿನ ಪ್ರಾಮುಖ್ಯತೆ ಮತ್ತು ಅದರ ವಿಶಿಷ್ಟ ಪ್ರಯೋಜನಗಳೇನು ಗೊತ್ತಾ?

July 16 ವಿಶ್ವ ಹಾವುಗಳ ದಿನ

ಹಾವುಗಳಿಗೆ ಕಿವಿ ಇಲ್ಲ, ಕಣ್ಣುರೆಪ್ಪೆ ಇಲ್ಲ, ಸೀಳು ನಾಲಿಗೆ, ಕಣ್ಣು ಹಾಗು ಚರ್ಮ ಇವುಗಳ ಮುಖ್ಯ ಜ್ಞಾನೇಂದ್ರಿಯಗಳು ನೆಲದ ಕಂಪನಗಳನ್ನು ಗ್ರಹಿಸಿ ಮುಂದಿನ ಅಪಾಯ ತಿಳಿಯಬಲ್ಲವು.

ಎಲ್ಲ ಹಾವುಗಳು ಮಾಂಸಾಹಾರಿಗಳಾಗಿದ್ದು ಇಡಿಯಾಗಿ ಬಲಿ ಜೀವಿಗಳನ್ನು ನುಂಗಿ(swallow) ಜೀರ್ಣಿಸಿಕೊಳ್ಳಬಲ್ಲವು, ಜೀರ್ಣ ರಸದ ಕಿಣ್ವಗಳು (Enzyme) ಶಕ್ತಿಯುತವಾಗಿದ್ದು ಬಲಿಯ ಜೀವಿಯ ಎಲುಬು, ಕೋಡುಗಳನ್ನು ಸುಲಭವಾಗಿ ಜೀರ್ಣಿಸಬಲ್ಲದು.

ಹಾವಿಗೆ ಹಾಲು ನೀಡಬಹುದೇ?

ಹಾವಿಗೆ ಹಾಲನ್ನು ಕುಡಿಸಿದರೆ ಅದರ ಜೀರ್ಣ ಕ್ರಿಯೆಗೆ ತೊಂದರೆ ಉಂಟಾಗಿ ಸಾವು ಸಂಭವಿಸಬಹುದು. ಹಾವುಗಳಿಗೆ ಕಾಲುಗಳಿಲ್ಲ, ತಮ್ಮ ದೇಹದ ಪಕ್ಕೆಲುಬು ಹಾಗೂ ಹೊಟ್ಟೆ ಅಡಿಯ Belly scale ಬಳಸಿ ಚಲಿಸುತ್ತವೆ.

ಭಾರತದ ಹೆಬ್ಬಾವುಗಳು ವಿಷರಹಿತವಾಗಿದ್ದು ಯಾವುದೇ ಮನುಷ್ಯನನ್ನು ನುಂಗಿದ ಅಧಿಕೃತ ದಾಖಲೆ ಇದುವರೆಗೆ ಇಲ್ಲ, ಇಂಡೋನೇಷಿಯಾದ  Reticulated ಹೆಬ್ಬಾವುಗಳು ಮನುಷ್ಯನನ್ನು ನುಂಗಿದ ಕೆಲ ದಾಖಲೆಗಳು ಇವೆ. ಕಾಳಿಂಗಳಲ್ಲಿ ಜುಟ್ಟು ಕಾಳಿಂಗ ಎಂಬುದು ಕಾಲ್ಪನಿಕವಾಗಿದ್ದು ಅಂತಹ ಹಾವುಗಳು ಈ ಭೂಮಿಯಲ್ಲಿ ಇಲ್ಲ.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಇನ್ನು  ಹಾವುಗಳಲ್ಲಿಯೂ ಕೆಲ ದಾಖಲೆಗಳು ಇವೆ. ಆಫ್ರಿಕಾದ ಕಪ್ಪು ಮಾಂಬಾ(Black Mamba) ಗಂಟೆಗೆ 12 ಮೈಲಿ ವೇಗದಲ್ಲಿ ಓಡುವ ಮೂಲಕ ವೇಗದ ಹಾವು ಎನಿಸಿದೆ.

ದಕ್ಷಿಣ ಅಮೆರಿಕಾದ ಅಮೆಜಾನ್ ನದಿಯಲ್ಲಿ ಕಂಡು ಬರುವ ಅನಕೊಂಡ ಹೆಬ್ಬಾವುಗಳು ಹಾವುಗಳಲ್ಲೇ ದೊಡ್ಡವು ಎನಿಸಿದರೆ Reticulated python ಉದ್ದದ ಹಾವುಗಳಾಗಿವೆ.

ನಮ್ಮ ದೇಶದ ರಾಷ್ಟ್ರೀಯ ಸರಿಸೃಪ ಕಾಳಿಂಗ ಸರ್ಪವಾಗಿದೆ. ಇದು ಗೂಡು ಕಟ್ಟಿ ಮೊಟ್ಟೆ ಇಡುವ ವಿಶ್ವದ ಏಕಮಾತ್ರ ಹಾವಾಗಿದ್ದು ,ವಿಶ್ವದ ಅತೀ ಉದ್ದದ ವಿಷಕಾರಿ ಹಾವು ಕೂಡ ಹೌದು.

ಇತರ ಜಾತಿ ಹಾವು, ಉಡಗಳನ್ನು ಮಾತ್ರ ತಿನ್ನುವ ಇದು ಸ್ವಜಾತಿ ಭಕ್ಷಕ (Cannibalism) ಕೂಡ ಹೌದು ಆದರೆ ಇಲಿ ಹೆಗ್ಗಣ,ಕಪ್ಪೆ ಕೋಳಿ, ಮೊಟ್ಟೆಗಳನ್ನು ಉಪವಾಸ ಇದ್ದರೂ ತಿನ್ನುವುದಿಲ್ಲ.

ಹುಳ ಹಾವು or worm snake ನಮ್ಮ ದೇಶದ ಅತೀ ಚಿಕ್ಕ ಹಾವು ಎನಿಸಿದೆ. ಆಫ್ರಿಕಾದಲ್ಲಿ ವಿಷ ಉಗುಳುವ ಹಾವುಗಳು ಇದ್ದು ಇವು ಮೂರು ಮೀಟರ್ ದೂರದವರೆಗೂ ವಿಷ ಉಗುಳುತ್ತವೆ ಇವಕ್ಕೆ ಇಂಗ್ಲೀಷಲ್ಲಿ Spitting Cobra ಎನ್ನುತ್ತಾರೆ.

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

July 16 ವಿಶ್ವ ಹಾವುಗಳ ದಿನ

ಇರಾನಿನಲ್ಲಿ ಕಂಡುಬರುವ Spider tailed horned viper ಈ ಹಾವಿನ ಬಾಲದ ತುದಿಯಲ್ಲಿ ಜೇಡದಂತಹ ರಚನೆ ಇದ್ದು ಇದನ್ನೆ ಜೇಡ ಎಂದು ಭಾವಿಸಿ ತಿನ್ನಲು ಹತ್ತಿರ ಬರುವ ಪಕ್ಷಿಗಳನ್ನು ಬೇಟೆಯಾಡುತ್ತದೆ.

ಹಾವಿನ ಸಮೀಪ ಹೋದರೆ ತನ್ನ ಬಾಲದ ತುದಿಯ ವಿಶಿಷ್ಟ ರಚನೆಯಿಂದ ಶಬ್ದವನ್ನು ಹೊರಡಿಸಿ ಎಚ್ಚರಿಸುವ ಬುಡುಬುಡುಕೆ ಹಾವು (rattle snake) ಅಮೆರಿಕಾದಲ್ಲಿ ಇದೆ.

ಹಾವುಗಳ ಮೈಮೇಲೆ ಕೂದಲು ಬೆಳೆಯುವ ಸಾಧ್ಯತೆ ಇಲ್ಲವೇ ಇಲ್ಲ ಆದರೆ ಥೈಲ್ಯಾಂಡಲ್ಲಿ ಇತ್ತೀಚಿಗೆ ಹಸಿರು ಕೂದಲಿನಿಂದ ಕೂಡಿದ ಹಾವು ಪತ್ತೆಯಾಗಿ ಅಚ್ಚರಿ ಸೃಷ್ಟಿಸಿತ್ತು. ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಹಸಿರು ಪಾಚಿ ಕೂದಲಿನಂತೆ ಬೆಳೆದು ಅಚ್ಚರಿಗೆ ಕಾರಣವಾಗಿತ್ತು.

ಇನ್ನು ಗಾಳಿಯಲ್ಲಿ ಹತ್ತಾರು ಮೀಟರ್ ದೂರ ತೇಲಿಕೊಂಡು ಹಾರಬಲ್ಲ (Gliding) Paradise Tree Flying Snake ಎಂಬ ಹಾವುಗಳೂ ಇವೆ.

ಆಫ್ರಿಕಾದಲ್ಲಿ ಕಂಡು ಬರುವ ಗಬೂನ್ ವೈಪರ್(Gaboon Viper) ಎಂಬ ಹಾವು  ತನ್ನ ಉದ್ದವಾದ ವಿಷದ ಹಲ್ಲಿನಿಂದ (Fang's) ಪ್ರಸಿದ್ಧಿಯಾಗಿದೆ.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಹಾವುಗಳ ದೃಷ್ಟಿ ಅವು ಜೀವಿಗಳನ್ನು ನೋಡುವ ವಿಧಾನವು ನಮ್ಮಂತೆ ಬಣ್ಣ ಬಣ್ಣವಾಗಿರದೆ ಬಹಳಷ್ಟು ಹಾವುಗಳು ಅತಿ ಕೆಂಪು (Infrared vision) ವಿಧಾನದ ಮೂಲಕ ಜೀವಿಗಳನ್ನು ನೋಡುತ್ತವೆ. ಹಾವುಗಳು ಚಲನೆಯನ್ನು ಗುರುತಿಸಿದಂತೆ ಒಂದೇ ಕಡೆ ನಿಂತ ವಸ್ತು or ಜೀವಿಯನ್ನು ಸುಲಭವಾಗಿ ಕಣ್ಣಿನಿಂದ ಗುರುತಿಸುವುದಿಲ್ಲ.

ಇನ್ನು ಹಾವುಗಳ ಬೇಟೆಯ ವಿಧಾನವೂ ವಿಭಿನ್ನ, ಕೆಲ ಜಾತಿ ಹಾವುಗಳು ಬಲಿ ಜೀವಿಯನ್ನು ಬೆನ್ನಟ್ಟಿ ಹಿಡಿದು ಅದು ಜೀವವಿರುವಾಗಲೇ ಸಿಕ್ಕ ಭಾಗದಿಂದ ನುಂಗಿದರೆ ಕೆಲವು ಹಾವುಗಳು ಬಲಿಯನ್ನ ಕಡಿದು ವಿಷ ಉಣಿಸಿ ಸತ್ತ ನಂತರ ನುಂಗುತ್ತವೆ.

ಹಾವುಗಳು ತಮ್ಮ  ಪ್ರದೇಶದ (Territory) ಗಡಿಗಾಗಿ ಹಾಗು ಹೆಣ್ಣಿನ್ನ ಕೂಡಲು (Mating) ಗಂಟೆಗಟ್ಟಲೆ ಹೋರಾಟ ನಡೆಸಬಲ್ಲವು.

ಹೆಬ್ಬಾವುಗಳ ಬೇಟೆ ವಿಧಾನವೆ ಅಚ್ಚರಿ ತರುತ್ತದೆ. ಬಲಿಗಾಗಿ ದಿನ, ತಿಂಗಳುಗಳ ಕಾಲ ಒಂದೇ ಜಾಗದಲ್ಲಿ ಮಲಗಿ ಉಷ್ಣ ರಕ್ತದ (Warm blood) ಬಲಿ ಜೀವಿಗಳು ಹತ್ತಿರ ಬರುತ್ತಿದ್ದಂತೆ ತನ್ನ ತುಟಿಯ ಅಕ್ಕ ಪಕ್ಕದಲ್ಲಿರುವ ಬಿಸಿ ಗ್ರಹಿಸುವ ಅಂಗಗಳು

(Heat sensitive organs) ಜಾಗೃತವಾಗಿ ಬಲಿ ಪ್ರಾಣಿಯನ್ನು ಕಣ್ಣಿಂದ ನೋಡದೇ ಅದರ ಗಾತ್ರ, ಎತ್ತರ ಇರುವ ದೂರ ಲೆಕ್ಕಹಾಕಿ ಆಕ್ರಮಣ ಮಾಡಿ ಉಸಿರುಗಟ್ಟಿಸಿ ಕೊಂದು ತಲೆಯ ಭಾಗದಿಂದಲೇ ನುಂಗುತ್ತವೆ.

July 16 ವಿಶ್ವ ಹಾವುಗಳ ದಿನ

ಇನ್ನು ಕೆಲ Pit viper ಗಳು ತಮ್ಮ ಕಣ್ಣು ಮತ್ತು ಮೂಗಿನ ಮಧ್ಯದಲ್ಲಿರುವ ಕುಳಿ (Heat sensitive Pitts)ಗಳ ಮೂಲಕ ಜೀವಿಗಳನ್ನು ಗ್ರಹಿಸಿ ಬೇಟೆಯಾಡುತ್ತವೆ.

ಕೆಲ ಜಾತಿ ಹಾವುಗಳು ತಮ್ಮದೇ ಜಾತಿಯ ಹಾವುಗಳನ್ನು ಭಕ್ಷಿಸುತ್ತವೆ, ಇದಕ್ಕೆ ಸ್ವಜಾತಿ ಭಕ್ಷಣೆ ಅಥವಾ Cannibalism ಎನ್ನುತ್ತಾರೆ. ನಾಗರಹಾವು ಕಾಳಿಂಗ ಸರ್ಪಗಳು ಸ್ವಜಾತಿ ಭಕ್ಷಕಗಳಿಗೆ ಉದಾಹರಣೆ.

ಹಾವುಗಳ ಮೆದುಳಿನ ಶಕ್ತಿ ಇನ್ನು ಪ್ರಾಥಮಿಕ ಹಂತದಲ್ಲಿದ್ದು ಆಹಾರ ಸಂಪಾದನೆ, ಸಂತಾನೋತ್ಪತ್ತಿಗೆ ಸೀಮಿತವಾಗಿದೆ. ಹಾವುಗಳಿಗೆ ದೀರ್ಘ ಕಾಲ ನೆನಪಿನ ಶಕ್ತಿ ಇಲ್ಲ ಹಾಗಾಗಿ ಹಾವಿನ ರೋಷ ಹನ್ನೆರಡು ವರ್ಷ ಎಂಬುದು ಸುಳ್ಳು.

ನಮ್ಮ ದೇಶದಲ್ಲಿ ನಾಲ್ಕು ಹಾವುಗಳನ್ನು ಅಪಾಯಕಾರಿ ಹಾವುಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ಕಾಳಿಂಗ ಸರ್ಪ ತುಂಬಾ ವಿಷಕಾರಿ ಆದರೆ ಇದರ ಕಡಿತ ಇಲ್ಲವೇ ಇಲ್ಲ. ಇದ್ದರೂ ಬಹಳ ಅಪರೂಪ ಹಾಗಾಗಿ ಇದು ಅಪಾಯಕಾರಿ ಹಾವುಗಳ ಪಟ್ಟಿಯಲ್ಲಿ ಇಲ್ಲ.

ಹಾವುಗಳು ಸಾಮಾನ್ಯವಾಗಿ Neurotoxic, Heamotoxic ಹಾಗು Myotonic ವಿಷವನ್ನು ಹೊಂದಿವೆ.

ಹಾವಿನ ವಿಷ ಹಲವು ಪ್ರೋಟೀನ್ ಗಳ ಮಿಶ್ರಣವಾಗಿದ್ದು, ಈ ವಿಷ (Venom) ರಕ್ತನಾಳಗಳ ಸಂಪರ್ಕಕ್ಕೆ ಬಂದರೆ ಮಾತ್ರ ಅಪಾಯ ತರಬಲ್ಲದು.

ನಮ್ಮ ದೇಶದ ನಾಲ್ಕು ಅಪಾಯಕಾರಿ ಹಾವುಗಳ ಪಟ್ಟಿ ಈ ಕೆಳಗಿನಂತಿದೆ (4 Big venomous snakes Of India)

ನಾಗರಹಾವು (Indian Cobra)

ಕೊಳಕು ಮಂಡಲ (Russell's viper)

ಕಟ್ಟುಹಾವು (Krait)

ಉರಿಮಂಡಲ (Saw scaled viper)

ಹಾವು ಕಡಿತಕ್ಕೆ ಮಾಟ-ಮಂತ್ರ ನಡೆಯೋದಿಲ್ಲ!

ಈ ಹಾವುಗಳ ಕಡಿತದಿಂದಲೇ ( ಶೇಕಡಾ90%)ಪ್ರತಿವರ್ಷ ಮೂವತ್ತೈದು  ಸಾವಿರದಿಂದ ಐವತ್ತು  ಸಾವಿರ ಜನ ಸಾವಿಗೀಡಾಗುತ್ತಿದ್ದಾರೆ, ಬಹಳಷ್ಟು ಜನ ಅಂಗವಿಕಲರಾಗುತ್ತಿದ್ದಾರೆ.

ವಿಷದ ಹಾವಿನ ಕಡಿತಕ್ಕೆ ವಿಷ ನಿರೋದಕ ಚುಚ್ಚುಮದ್ದು (Asv- anti snake venom) ಒಂದೇ ಪರಿಹಾರ .ನಮ್ಮ ದೇಶದಲ್ಲಿ ಇದರ ಅರಿವು ಬಹಳಷ್ಟು ಜನರಿಗೆ ಇಲ್ಲದೆ ಗರಿಷ್ಟ ಪ್ರಮಾಣದ ಜನ ಸಾವಿಗೀಡಾಗುತ್ತಿದ್ದಾರೆ.

ಹಾವು ಕಡಿದಾಗ ಯಾವುದೇ ಮಂತ್ರ, ಮೂಢನಂಬಿಕೆ, ಮದ್ದುಗಳ ಮೊರೆ ಹೋಗದೆ ತುರ್ತಾಗಿ ಹತ್ತಿರದ ಸರ್ಕಾರಿ ಇಲ್ಲವೆ ಜಿಲ್ಲಾಸ್ಪತ್ರೆಗಳಲ್ಲಿ ದಾಖಲಾಗಿ ಹಾವಿನ ಕಡಿತಕ್ಕೆ ಉಚಿತ ಚಿಕಿತ್ಸೆ ಪಡೆಯಿರಿ.

ಹಾವಿನ ತಲೆ ಮೇಲೆ ನಾಗಮಣಿ ಇಲ್ಲವೇ ಇಲ್ಲ!

ಹಾವಿನ ಮೇಲಿರುವಷ್ಟು ಮೂಢನಂಬಿಕೆಗಳು ಹಾಗು ತಪ್ಪು ತಿಳುವಳಿಕೆ ಬೇರೆ ಯಾವ ಜೀವಿಗಳ ಬಗ್ಗೆಯೂ ಇಲ್ಲ ಅನಿಸುತ್ತೆ. ಹಾವಿನಲ್ಲಿ ನಾಗಮಣಿ ಇರುವುದು, ಮಣ್ಣು ಮುಕ್ಕ (sand boa) ಹಾವಿಗೆ ಎರಡು ತಲೆ ಇರುವುದು, ಹಾವಿನ ರೋಷ ಹನ್ನೆರಡು ವರ್ಷ, ಹಾವಿಗೆ ಕೂದಲು ಬರುವುದು, ಹಸಿರು ಹಾವು ಕಿವಿ ಊದಿದರೆ ಕಿವುಡು ಆಗುವುದು, ಕೇರೆ ಹಾವು ಬಾಲದಲ್ಲಿ ಹೊಡೆದು ವಿಷ ಬಿಡುವುದು, ಮಿಡಿ ನಾಗರ ಎಂಬ ವಿಶೇಷ ಹಾವಿರುವುದು, ಕೊಳಕು ಮಂಡಲ ಮೈಗೆ ತಾಗಿದರೆ ಕೊಳೆಯುವುದು, ಜುಟ್ಟಿ ಕಾಳಿಂಗ ಎನ್ನುವ ಹಾವು ತಲೆಗೆ ಕುಟುಕಿ ಕೊಲ್ಲುವುದು, ಹಾವಿನ ಕಡಿತಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ ಎನ್ನುವುದು, ಇಂತಹ ತಪ್ಪು ತಿಳುವಳಿಕೆಗಳ ದೊಡ್ಡ ಪಟ್ಟಿಯೇ ಇದೆ.

ನಾವು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಹಾವಿನ ಕಡಿತಗಳನ್ನು ಖಂಡಿತಾ ತಪ್ಪಿಸಬಹುದು

1) ಹೊಲ ಗದ್ದೆ ತೋಟಗಳಲ್ಲಿ ಓಡಾಡುವಾಗ ಗಂಬೂಟುಗಳನ್ನು ಬಳಸಿ.

2)ರಾತ್ರಿ ಸಂಚರಿಸುವಾಗ ಕಡ್ಡಾಯವಾಗಿ ಟಾರ್ಚ್ಗಳನ್ನು ಬಳಸಿ

3) ರಾತ್ರಿ ಬಯಲು ಮಲ ವಿಸರ್ಜನೆ ತಪ್ಪಿಸಿ

4) ಮನೆಯ ಸುತ್ತಮುತ್ತ ಸ್ವಚ್ಚವಾಗಿರಲಿ, ಕಸಕಡ್ಡಿಗಳು ಇಲಿಗಳನ್ನು ಆಕರ್ಷಿಸುತ್ತವೆ, ಇಲಿಗಳನ್ನು ಬೇಟೆಯಾಡಲು ಹಾವುಗಳು ಸಹಜವಾಗಿ ಬರುತ್ತವೆ.

5) ಮನೆಯಿಂದ ಹೊರಗೆ ಮಲಗುವಾಗ ಚಾಪೆಯ ಸುತ್ತಲು ಸೊಳ್ಳೆ ಪರದೆ ಬಳಸಿ ಇದರಿಂದ ಹಾವುಗಳು ಹಾಸಿಗೆಯೊಳಗೆ ಬರಲು ಸಾಧ್ಯವಾಗುವುದಿಲ್ಲ.

6) ಗುಡಿಸಲು ಮನೆಗಳಾದರೆ ಮಂಚದ ಮೇಲೆ ಮಲಗುವುದು ಸೂಕ್ತ.

7) ಕೋಳಿ ಶೆಡ್ಡು ಕಟ್ಟಿಗೆ ರಾಶಿ, ದನದ ಕೊಟ್ಟಿಗೆಗಳು ಮನೆಯಿಂದ ಸ್ವಲ್ಪ ದೂರದಲ್ಲಿದ್ದರೆ ಉತ್ತಮ

8) ಮನೆ ಸುತ್ತಲಿರುವ ಇಲಿ ಬಿಲಗಳು, ಸಂದುಗಳನ್ನು ಆಗಾಗ ಮಣ್ಣಿನಿಂದ ಮುಚ್ಚುತ್ತಿರಬೇಕು.

9) ಮನೆಯ ಹೊರಗೆ ಇಟ್ಟ ಶೂಗಳನ್ನು ಧರಿಸುವಾಗ ಪರಿಶೀಲಿಸಬೇಕು.

10)ಮನೆಯ ಕಿಟಕಿಗೆ ತಾಗಿದ ಮರದ ರೆಂಬೆ, ಹೂವಿನ ಗಿಡಗಳನ್ನು ಆಗಾಗ ಕತ್ತರಿಸಬೇಕು.

11) ಮನೆಯ ಬಾಗಿಲನ್ನು ಯಾವಾಗಲೂ ತೆರೆದಿಡದೆ ಮುಚ್ಚಿರಬೇಕು.

ನಮ್ಮ ದೇಶದ ಎಲ್ಲಾ ಹಾವುಗಳು 1972 ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಬರುವುದರಿಂದ, ಹಾವುಗಳನ್ನು ಕೊಲ್ಲುವುದು, ಹಿಂಸಿಸುವುದು, ಮನರಂಜನೆಗೆ ಬಳಸುವುದು, ಮನೆಯಲ್ಲಿ ಸಾಕುವುದು, ಕಳ್ಳಸಾಗಣೆ ಮಾಡುವುದು ಶಿಕ್ಷಾರ್ಹ ಅಪರಾಧಗಳಾಗಿವೆ.

ಹಾವುಗಳು ನಮ್ಮ ಜೀವ ವೈವಿಧ್ಯತೆಯ  ಪ್ರಮುಖ ಭಾಗವಾಗಿವೆ. ಆಹಾರ ಸರಪಳಿಯ ಮುಖ್ಯ ಕೊಂಡಿಗಳಾದ ಇವು ಇಲಿಗಳ ಸಂಖ್ಯೆ ನಿಯಂತ್ರಿಸಿ ಮನುಷ್ಯನ ಆಹಾರದ ಬೆಳೆಗಳನ್ನು ಕಾಪಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ.

ಹಾವಿನ ವಿಷವನ್ನು  ಅನೇಕ ಚಿಕಿತ್ಸೆಗಳಿಗೆ ಬಳಸುವುದಲ್ಲದೆ  ಹಾವು ಕಡಿದಾಗ ಮನುಷ್ಯನ ಜೀವ ಉಳಿಸುವ ವಿಷ ನಿರೋದಕ ಚುಚ್ಚುಮದ್ದು ತಯಾರಿಸುವುದು ಹಾವಿನ ವಿಷದಿಂದಲೇ!!!

ಹಾವುಗಳನ್ನು ಉಳಿಸಿ ಸಂರಕ್ಷಿಸೋಣ

ನಾಗರಾಜ್ ಬೆಳ್ಳೂರು, ನಿಸರ್ಗ ಕನ್ಜರ್ವೇಶನ್ ಟ್ರಸ್ಟ್

Published On: 16 July 2022, 11:52 AM English Summary: July 16 World Snake Day

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.