1. ಸುದ್ದಿಗಳು

ಮಳೆ ಅವಾಂತರದಿಂದ 5 ಸಾವಿರ ಎಕರೆ ಬೆಳೆ ನಷ್ಟ!

Kalmesh T
Kalmesh T
5 thousand acres crop loss due to rain!

ಕಳೆದ ಎರಡು ದಿನಗಳಿಂದ ಅಬ್ಬರದ ಮಳೆಯಿಲ್ಲದಿದ್ದರೂ ಜಿಟಿಜಿಟಿ ಮಳೆ ಮುಂದುವರಿದಿದೆ. ಶುಕ್ರವಾರ ಕೂಡ ಆಗಾಗ ಮಳೆ ಬೀಳುತ್ತಿದೆ. ಮಳೆ ನಿಂತರೂ ಜಿಲ್ಲೆಯಲ್ಲಿ ಹರಿದಿರುವ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ಉಕ್ಕೇರಿ ಹರಿಯುತ್ತಿವೆ.

ಕಳೆದ ಹತ್ತು ದಿನಗಳಿಂದ ಬೀಳುತ್ತಿರುವ ನಿರಂತರ ಮಳೆಗೆ ಜಿಲ್ಲೆಯಲ್ಲಿ 1611 ಹೆಕ್ಟೇರ್‌ ಕೃಷಿ ಹಾಗೂ 335 ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಸೇರಿದಂತೆ ಸುಮಾರು 5 ಸಾವಿರ ಎಕರೆಯಷ್ಟು ಬೆಳೆ ಹಾನಿಯಾಗಿದೆ. ಜತೆಗೆ, 342 ಮನೆಗಳು ಬಿದ್ದು ಆ ಕುಟುಂಬಗಳು ಬೀದಿಗೆ ಬರುವಂತಾಗಿವೆ.

ಇದನ್ನೂ ಓದಿರಿ: World Snake Day: “ವಿಶ್ವ ಹಾವುಗಳ ದಿನ”ದ ಕುರಿತು ನಾಗರಾಜ್ ಬೆಳ್ಳೂರು ಅವರು ಬರೆದ ಕುತೂಹಲಕಾರಿ ಲೇಖನ!

ಕಳೆದ ಎರಡು ದಿನಗಳಿಂದ ಅಬ್ಬರದ ಮಳೆಯಿಲ್ಲದಿದ್ದರೂ ಜಿಟಿಜಿಟಿ ಮಳೆ ಮುಂದುವರಿದಿದೆ. ಶುಕ್ರವಾರ ಕೂಡ ಆಗಾಗ ಮಳೆ ಬೀಳುತ್ತಿದೆ. ಮಳೆ ನಿಂತರೂ ಜಿಲ್ಲೆಯಲ್ಲಿ ಹರಿದಿರುವ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ಉಕ್ಕೇರಿ ಹರಿಯುತ್ತಿವೆ.

ಇದರಿಂದ ನದಿ ಪಾತ್ರದ ಹೊಲಗದ್ದೆಗಳು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾಳಾಗಿವೆ. ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಹತ್ತಿ, ಸೋಯಾಬಿನ್‌ ಇತ್ಯಾದಿ ಬೆಳೆಗಳು ಹಲವು ದಿನಗಳ ಕಾಲ ನೀರಿನಲ್ಲು ಮುಳುಗಿ ಕೊಳೆಯ ತೊಡಗಿವೆ.

ಟೊಮ್ಯಾಟೋ, ಮೆಣಸಿನಕಾಯಿ ಇತ್ಯಾದಿ ತರಕಾರಿ ಬೆಳೆಗಳಂತೂ ಸಂಪೂರ್ಣ ಹಾಳಾಗಿವೆ. ಎಡಬಿಡದೇ ಸುರಿಯುತ್ತಿರುವ ಮಳೆಗೆ ತರಕಾರಿ ಕೊಳೆತು ರೈತರು ಕಣ್ಣೀರು ಹಾಕುವಂತಾಗಿದೆ.

ಗ್ರಾಹಕರೆ ಗಮನಿಸಿ: ಜುಲೈ 18ರಿಂದ ಮತ್ತೇ ಹೆಚ್ಚಾಗಲಿವೆ ದಿನಬಳಕೆ ಸಾಮಗ್ರಿ ಬೆಲೆಗಳು! ಹೊಸ GST ನಿಯಮ ಏನು ಹೇಳುತ್ತದೆ?

1946 ಹೆಕ್ಟೇರ್‌ ಬೆಳೆ ಹಾನಿ

ಮಳೆಗೆ ಬೆಳೆಗಳು ಹಾಳಾಗುತ್ತಿದ್ದರೂ ಸರಿಯಾಗಿ ಹಾನಿ ಸರ್ವೇ ನಡೆಸದ್ದಕ್ಕೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಈಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದರ ಬೆನ್ನಲ್ಲೇ ಚುರುಕಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿದ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಇದುವರೆಗೆ ಆಗಿರುವ ಹಾನಿ ವರದಿ ಸಿದ್ಧಪಡಿಸಿವೆ.

ಅದರಂತೆ 1611 ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ, 335 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿವೆ.

ಜಿಲ್ಲೆಯಲ್ಲಿ ಮೆಕ್ಕೆಜೋಳ ಅತಿಹೆಚ್ಚು 1347 ಹೆಕ್ಟೇರ್‌ ಪ್ರದೇಶದಲ್ಲಿ ಹಾಳಾಗಿವೆ. 145 ಹೆಕ್ಟೇರ್‌ ಹತ್ತಿ, 69 ಹೆಕ್ಟೇರ್‌ ಸೋಯಾ, 21 ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆ ಹಾಳಾಗಿವೆ.

ಹಾವೇರಿ ತಾಲೂಕಿನಲ್ಲಿ 88ಹೆಕ್ಟೇರ್‌, ಹಾನಗಲ್ಲ 115, ಸವಣೂರು 58, ಶಿಗ್ಗಾಂವಿ 24, ಬ್ಯಾಡಗಿ 220, ಹಿರೇಕೆರೂರು 230, ರಾಣಿಬೆನ್ನೂರು 448, ರಟ್ಟೀಹಳ್ಳಿ ತಾಲೂಕಿನಲ್ಲಿ 427 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ.

Published On: 16 July 2022, 12:47 PM English Summary: 5 thousand acres crop loss due to rain!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.