1. ಸುದ್ದಿಗಳು

ಆಡಿನ ಹಾಲಿನ ಮಹತ್ವ ಹಾಗೂ ಅದರಲ್ಲಿನ ಪೌಷ್ಟಿಕತೆ

Kalmesh T
Kalmesh T
ಆಡಿನ ಹಾಲಿನ ಮಹತ್ವ ಹಾಗೂ ಅದರಲ್ಲಿನ ಪೌಷ್ಟಿಕತೆ

ಆಡಿನ ಹಾಲು ತಾಯಿಯ ಹಾಲಿನಷ್ಠೆ ಪೌಷ್ಠಿಕತೆ ಹೊಂದಿದ್ದು, ಒಂದು ಸಮತೋಲನ ಆಹಾರದ ಮೂಲವಾಗಿದೆ. ಮನುಷ್ಯರಲ್ಲಿ ತಾಯಿ ಹಾಲಿನಲ್ಲಿರುವ ಪೋಷಕಾಂಶಗಳೆಲ್ಲ ಆಡಿನ ಹಾಲಿನಲ್ಲಿರುತ್ತವೆ, ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.

ಇದನ್ನೂ ಓದಿರಿ: Dharwadi Buffalo: ಲಾಭದಾಯಕ ಹೈನುಗಾರಿಕೆಗೆ ವರದಾನ ಈ “ಧಾರವಾಡಿ ಎಮ್ಮೆ” ತಳಿ ಸಾಕಾಣಿಕೆ!

ಆಡು ಬಡವರ ಹಸು. ಆಡು ಸಾಕಾಣಿಕೆ ಸಣ್ಣ ರೈತರ ಜೀವನೋಪಾಯಕ್ಕೆ ಸೂಕ್ತವಾದ ಉದ್ದಿಮೆ, ಹಸುವನ್ನು ಕೊಳ್ಳಲಾಗದ ಒಬ್ಬ ಬಡ ರೈತನ ಪಾಲಿಗೆ ಆಡು ಕಾಮಧೇನು. ಆಡಿನ ಹಾಲು ತಾಯಿಯ ಹಾಲಿನಷ್ಠೆ ಪೌಷ್ಠಿಕತೆ ಹೊಂದಿದೆ.

ಅಲ್ಲದೇ ಇದೊಂದು ಸಮತೋಲನ ಆಹಾರದ ಮೂಲವಾಗಿದೆ. ಮನುಷ್ಯರಲ್ಲಿ ತಾಯಿ ಹಾಲಿನಲ್ಲಿರುವ ಪೋಷಕಾಂಶಗಳೆಲ್ಲ ಆಡಿನ ಹಾಲಿನಲ್ಲಿರುತ್ತವೆ, ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.

ಪೌಷ್ಟಿಕತೆ:

ಆಡಿನ ಹಾಲು ಹೆಚ್ಚು ಪೌಷ್ಟಿಕತೆಯಿಂದ ಕೂಡಿದ್ದು ಎಲ್ಲ ಜೀವಸತ್ವಗಳು, ಅಮೈನೋ ಆಮ್ಲಗಳು ಮತ್ತು ಖನಿಜಗಳು ಸರಿ ಸುಮಾರು ಆಕಳ ಹಾಲಿನಲ್ಲಿರುವ ಪ್ರಮಾಣದಷ್ಟೇ ಇರುತ್ತದೆ.

Turkey Farming: ಇಲ್ಲಿದೆ ಲಾಭದಾಯಕ “ಟರ್ಕಿ ಕೋಳಿ ಸಾಕಾಣಿಕೆ” ಕುರಿತಾದ ಮಾಹಿತಿ

ಆಡಿನ ಹಾಲಿನಲ್ಲಿರುವ ಪೋಶಕಾಂಶಗಳು (100 ಎಂ. ಎಲ್.)

ಪೋಶಕಾಂಶಗಳು

ಪ್ರಮಾಣ

ಸಸಾರಜನಕ

3.3 ಗ್ರಾಂ

ಕೊಬ್ಬು

4.5 ಗ್ರಾಂ

ಖನಿಜಾಂಶ

0.8 ಗ್ರಾಂ

ಕಾರ್ಬೋಹೈಡ್ರೇಟ್

4.6 ಗ್ರಾಂ

ಶಕ್ತಿ

72 ಕಿ. ಕ್ಯಾಲೋರಿ

ಕ್ಯಾಲ್ಸಿಯಂ

170 ಮಿ. ಗ್ರಾಂ

ಫಾಸ್ಪರಸ್

120 ಮಿ. ಗ್ರಾಂ

ಕಬ್ಬಿಣ

0.3 ಮಿ. ಗ್ರಾಂ

ಬೀಟಾ ಕೆರೋಟಿನ್

55 ಗ್ರಾಂ

ಥಯಾಮಿನ್

0.05 ಮಿ ಗ್ರಾಂ

ರೈಬೋಪ್ಲೇಮಿನ್

0.04 ಮಿ. ಗ್ರಾಂ

ನಿಯಾಸಿನ್

0.3 ಮಿ. ಗ್ರಾಂ

ವಿಟಾಮಿನ್ ಸಿ

1 ಮಿ. ಗ್ರಾಂ

ಸೋಡಿಯಂ

11 ಮಿ. ಗ್ರಾಂ

ಪೋಟ್ಯಾಶಿಯಂ

110 ಮಿ. ಗ್ರಾಂ

ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..!

ಹಾಲಿನಲ್ಲಿರುವ ಕೊಬ್ಬಿನ ಕಣಗಳು ಚಿಕ್ಕದಾಗಿದ್ದು ಹಾಲಿನಲ್ಲಿ ಸಮನಾಗಿ ಬೆರೆತ ಕಾರಣ ಇತರ ಹಾಲಿನ ಹಾಗೆ ಈ ಹಾಲು ಕೆನೆ ಕಟ್ಟುವುದಿಲ್ಲ, ಆದರೆ ಆಡಿನ ಹಾಲಿನಿಂದ ಖೋವಾ, ಪನೀರ್, ತುಪ್ಪ, ಚೀಸ್ ಇತ್ಯಾದಿ ಪದಾರ್ಥಗಳನ್ನು ತಯಾರಿಸಬಹುದು.

ಅಷ್ಟೇ ಅಲ್ಲದೇ ಅವುಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಚಿಕ್ಕ ಮಕ್ಕಳಿಗೆ ಆಡಿನ ಹಾಲನ್ನು ತಾಯಿ ಹಾಲಿಗೆ ಪರ್ಯಾಯವಾಗಿ ಬಳಸಬಹುದು. 

ಈ ಹಾಲು ಜೀರ್ಣಶಕ್ತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ವಾಂತಿ ಭೇದಿ, ಉಸಿರಾಟದ ತೊಂದರೆಗಳಂತಹ ಆರೋಗ್ಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ದೇಹದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆ ಮಾಡುವುದರ ಜೊತೆಗೆ ಹೃದಯ ರೊಗ, ಮೂರ್ಛೆರೋಗ, ಪಿತ್ತಕೋಶದ ಹರಳು ಮತ್ತು ಇತರೆ ರೋಗಗಳ ಪ್ರಮಾಣ ಕಡಿಮೆ ಮಾಡುತ್ತದೆ. ಆಡಿನ ಹಾಲಿನ ದಿನನಿತ್ಯದ ಬಳಕೆಯಿಂದ ದೇಹದ ತೂಕ ಹೆಚ್ಚುತ್ತದೆ.

ಅಸ್ಥಿಪಂಜರದಲ್ಲಿ ಖನಿಜಾಂಶಗಳ ಶೇಖರಣೆ, ರಕ್ತದ ಹಿಮೋಗ್ಲೋಬಿನ್ ಅಂಶ ಕೂಡ ಹೆಚ್ಚಾಗುತ್ತದೆ. ಆಡಿನ ಹಾಲು ಪೌಷ್ಠಿಕಾಂಶಗಳಲ್ಲಿ ತಾಯಿಯ ಹಾಲಿಗೆ ತುಂಬ ನಿಖರವಾಗಿದೆ.

ಪೋಶಕಾಂಶಗಳು

ಆಡಿನ ಹಾಲು

ತಾಯಿಯ ಹಾಲು

ಕ್ಯಾಲರಿ

163.3 ಕ್ಯಾಲರಿ

165.6 ಕ್ಯಾಲರಿ

ಕೊಬ್ಬು

9 ಗ್ರಾಂ

9.3 ಗ್ರಾಂ

ಪ್ರೋಟೀನ್

4 ಗ್ರಾಂ

3.3 ಗ್ರಾಂ

ಕಾರ್ಬೊಹೈಡ್ರೇಟ್

17.5 ಗ್ರಾಂ

17.5 ಗ್ರಾಂ

ಆಡಿನ ಹಾಲಿನ ಪ್ರಯೋಜನಗಳು

ನಮ್ಮ ಜೀವನದಲ್ಲಿ ಹಾಲು ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಇದು ಅತ್ಯಗತ್ಯ ಪೋಷಕಾಂಶಗಳನ್ನು ಒದಗಿಸುವದರ ಮೂಲಕ ಆರೋಗ್ಯಕರವಾಗಿ ಉಳಿಯಲು ಸಹಾಯ ಮಾಡುತ್ತದೆ.

ಮತ್ತು ಮಗುವಿನ ಜೀವನದ ಆರಂಭಿಕ ವರ್ಷಗಳಲ್ಲಿ ಪೋಷಣೆಯ ಪ್ರಮುಖ ಮೂಲವಾಗಿದೆ ಎಂದು ತಿಳಿಯಲಾಗಿದೆ. ಭಾರತಿಯರು ಸಾಮಾನ್ಯವಾಗಿ ನಮ್ಮ ಹಾಲಿನ ಅಗತ್ಯಗಳಿಗೆ ಹಸುವಿನ ಹಾಲನ್ನು ಅವಲಂಬಿಸುತ್ತಾರೆ ಮತ್ತು ಅಪರೋಪವಾಗಿ ನಾವು ಇತರ ರೀತಿಯ ಹಾಲನ್ನು ಸೇವಿಸುತ್ತೇವೆ.

ಆಡಿನ ಹಾಲಿಗೆ ಮಹತ್ವ ಬರಲು ಕಾರಣವಾದ ಅಂಶಗಳೆಂದರೆ;

1. ಮೂಳೆಗಳನ್ನು ಪ್ರಬಲಗೊಳಿಸುತ್ತದೆ : ಆಡಿನ ಹಾಲು ಕ್ಯಾಲ್ಸಿಯಂನಲ್ಲಿ ಉತ್ಕೃಷ್ಟವಾಗಿದೆ ಮತ್ತು ಹಸುವಿನ ಹಾಲಿಗಿಂತ ಭಿನ್ನವಾಗಿದೆ. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ.

ಕ್ಯಾಲ್ಸಿಯಂ ಜೊತೆಗೆ ಆಡಿನ ಹಾಲು ಅಮೈನೊ ಆಸಿಡ್ ಟ್ರಿಪ್ಟೊಫಾನ್ನಲ್ಲಿ ಸಮೃದ್ದವಾಗಿರುವದರಿಂದ ಎಲುಬುಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಆದ್ದರಿಂದ ಆಸ್ಟಿಯೊಪೊರೋಸಿಸ್ ಮತ್ತು ಇತರೆ ರೋಗಗಳು ಬರುವ ಲಕ್ಷಣಗಳು ಕಡಿಮೆ.

2. ಚಯಾಪಚಯ ಹೆಚ್ಚಿಸುತ್ತದೆ : ಆಡಿನ ಹಾಲು ಪೌಷ್ಠಿಕ ಮತ್ತು ಗಟ್ಟಿ ಹಾಲು, ಆದುದರಿಂದ ಹೊಟ್ಟೆ ತುಂಬಲು ನಿಮಗೆ ಬಹಳಷ್ಟು ಪ್ರಮಾಣ ಬೇಕಾಗುವದಿಲ್ಲ. ಆಡಿನ ಹಾಲಿನ ಒಂದು ಕಪ್ ಸಾಕಷ್ಷು ಕ್ಯಾಲ್ಸಿಯಂ, ವಿಟಮಿನ್ ‘ಬಿ’ ಮತ್ತು ಗಮನಾರ್ಹ ಪ್ರಮಾಣದ ಫಾಸ್ಪರಸ್ ಮತ್ತು ಪೊಟ್ಯಾಸಿಯಂಗಳನ್ನು ಒದಗಿಸುತ್ತದೆ.

ಆಡಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ತಾಮ್ರ ಇರುವದರಿಂದ ಇದು ಜಠರದ ಚಯಾಪಚಯ ಪ್ರಮಾಣವನ್ನು ಸುದಾರಿಸುತ್ತದೆ. ಅಲ್ಲದೆ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

3. ರೋಗ ನಿರೋಧಕ ಶಕ್ತಿ : ಆಡಿನ ಹಾಲಿನಲ್ಲಿರುವ ಸೆಲೆನಿಯಂ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿರೋಧಕ ವ್ಯವಸ್ಥೆಯು ಸುಸ್ಥಿತಿಯಲ್ಲಿದ್ದರೆ ಮಾತ್ರ ದೇಹ ಸದೃಢ ಹಾಗೂ ಆರೋಗ್ಯಕರವಾಗಿ ಉಳಿಯಲು ಸಾಧ್ಯ.

4. ವಿರೋಧಿ ಉರಿಯೂತ ಗುಣ : ಹಸು ಹಾಲಿನ ಮೇಲೆ ಆಡಿನ ಹಾಲಿಗೆ ಆದ್ಯತೆ ನೀಡುವದಾದರೆ, ಅದು ಆಡಿನ ಹಾಲಿನಲ್ಲಿರುವ ಉರಿಯೂತ ಶಮಣ ಗುಣಗಳು. ಆಡಿನ ಹಾಲಿನಲ್ಲಿರುವ ಅನೇಕ ಎಂಜೈಮ್ಯಾಟಿಕ್ ಅಂಶಗಳು, ಇವು ಜಠರದಲ್ಲಿರುವ ಉರಿಯೂತವನ್ನು ಶಮಣಗೊಳಿಸುತ್ತದೆ.

5. ಇದು ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ : ಆಡಿನ ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಜೀವಕೋಶಗಳು, ಅಂಗಾಂಶಗಳು, ಮೂಳೆಗಳು ಮತ್ತು ಸ್ನಾಯುಗಳ ಬಿಲ್ಡಿಂಗಬ್ಲಾಕ್ಸ್ ಎಂದು ಕರೆಯಲ್ಪಡುತ್ತವೆ. ಇವು ಉತ್ತಮ ಆರೋಗ್ಯ, ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸಹಾಯವಾಗುತ್ತದೆ. ದಿನನಿತ್ಯ ಆಡಿನ ಹಾಲಿನ ಸೇವನೆಯಿಂದ ಪ್ರೋಟೀನಿನ ಸ್ಥಿರ ಹರಿವನ್ನು ಖಾತ್ರಿ ಪಡಿಸಬಹುದು.

6. ಹೃದಯ ಸ್ನೇಹಿ : ಆಡಿನ ಹಾಲಿನಲ್ಲಿರುವ ಉತ್ತಮ ಕೊಬ್ಬಿನ ಆಮ್ಲಗಳು ಕೊಲೆಸ್ಟರಾಲ್‌ನ್ನು ಮಿತಿಯಲ್ಲಿಡುತ್ತವೆ. ಹಾಲಿನಲ್ಲಿರುವ ಪೊಟ್ಯಾಶಿಯಂ ಸಮೃದ್ಧತೆಯು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

7. ಕೊಬ್ಬು ಕಡಿಮೆ ಪ್ರಮಾಣದಲ್ಲಿದೆ : ಆಡಿನ ಹಾಲು ತೂಕವನ್ನು ಕಡಿಮೆ ಮಾಡಬಯಸುವವರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಕೊಬ್ಬು ಅನೇಕ ಅಪಾಯಕಾರಿ ರೋಗಗಳಿಗೆ ಕಾರಣವಾಗಿದ್ದು ಇದು ಒಂದು ಪ್ರಧಾನ ಸಮಸ್ಯೆಯಾಗಿದೆ.

ಪರಿಣಾಮಗಳು ತಕ್ಷಣವೇ ಕಾಣಿಸದಿದ್ದರೂ ಸಹ, ಕೊಬ್ಬು ದೇಹದೊಳಗೆ ತೊಡಕುಗಳನ್ನು ಉಂಟು ಮಾಡುತ್ತದೆ. ಆಡಿನ ಹಾಲಿನಲ್ಲಿರುವ ಕೊಬ್ಬಿನ ಕಣಗಳು ತುಂಬ ಚಿಕ್ಕದಾಗಿರುವದರಿಂದ ಇವುಗಳ ಹಾಲು ಆಕಳು ಹಾಗೂ ಎಮ್ಮೆಯ ಹಾಲಿನಂತೆ ಕೆನೆಗಟ್ಟುವದಿಲ್ಲ, ಹೀಗಾಗಿ ಶಿಶುಗಳು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

8. ಮೆದುಳಿಗೆ ಒಳ್ಳೆಯದು : ಆಡಿನ ಹಾಲು ಮೆದುಳಿನ ಬೆಳವಣಿಗೆಗೆ ಉತ್ತಮ ಆಹಾರವಾಗಿದೆ. ಇದು ಅತೀ ಸೂಕ್ಷ್ಮ ನರಮಂಡಲವನ್ನು ಪರಿಗಣಿಸಿ ಪೋಷಿಸುತ್ತದೆ ಅದಲ್ಲದೆ ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ.

9. ಶೂನ್ಯ ವಿಷತ್ವ : ವಿಷಕಾರಿತ್ವವು ಹಾಲಿನ ಉತ್ಪನ್ನಗಳನ್ನು ತಯಾರಿಸುವಲ್ಲಿ ಒಂದು ಪ್ರಮುಖ ಅಡತಡೆ, ಅದು ತಕ್ಷಣ ಪರಿಣಾಮ ತೋರಿಸದಿದ್ದರೂ ಸಹ ದೀರ್ಘಾವಧಿಯ ಪರಿಣಾಮಗಳು ಅಪಾಯಕಾರಿ. ಆದರೆ ಈ ವಿಷಕಾರಿತ್ವವನ್ನು ನಾವು ಆಡಿನ ಹಾಲಿನಲ್ಲಿ ಕಾಣುವದಿಲ್ಲ.

ಕೋಳಿ ಸಾಕಾಣಿಕೆ : ಯಶಸ್ವಿ ಕೋಳಿ ಸಾಕಾಣಿಕೆಗೆ ತಗುಲುವ ವೆಚ್ಚ ಎಷ್ಟು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಗೋವಿನ ಹಾಲಿಗೆ ಮಹತ್ವವಿರುವದರಿಂದ, ಅದಕ್ಕೆ ಅನುಗುಣವಾಗಿ ಬೇಡಿಕೆ ಪೂರೈಸಲು ಅಸ್ವಾಭಾವಿಕ ರೀತಿಯಲ್ಲಿ ಹಾಲಿನ ಇಳುವರಿಯನ್ನು ಹೆಚ್ಚಿಸಲು ರಸಾಯನಿಕಗಳನ್ನು ನೀಡಲಾಗುತ್ತಿರುವುದರಿಂದ ಹಾಲಿನಲ್ಲಿ ವಿಷತ್ವ ಹೆಚ್ಚಾಗಿದೆ. ಆದರೆ, ಆಡುಗಳಿಗೆ ಯಾವುದೇ ರೀತಿಯ ರಸಾಯನಿಕಗಳನ್ನು ಉಪಯೋಗಿಸದೇ ಇರುವದರಿಂದ ಆಡಿನ ಹಾಲಿನಲ್ಲಿ ನಾವು ಶೂನ್ಯ ವಿಷತ್ವ ನೋಡಬಹುದು.

10. ಕಡಿಮೆ ಕೃತಕ ಸೇರ್ಪಡೆಗಳು : ಹಾಲಿಗೆ ಹೆಚ್ಚಿನ ಬೇಡಿಕೆ ಇರುವದರಿಂದ ಹಸುವಿನ ಹಾಲಿಗೆ ಕೆಲವು ಕೃತಕ ಸೇರ್ಪಡೆಗಳನ್ನು ಬಳಿಸಿಕೊಂಡು ಸಿಹಿಗೊಳಿಸಲಾಗುತ್ತಿದೆ. ಈ ಸೇರ್ಪಡೆಗಳು ನಮ್ಮ ಆರೋಗ್ಯವನ್ನು ತಗ್ಗಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ತೀವ್ರ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಮತ್ತೊಂದೆಡೆ, ಆಡಿನ ಹಾಲಿಗೆ ಯಾವುದೇ ಸೇರ್ಪಡೆಗಳಿಲ್ಲ, ಆದ್ದರಿಂದ ಆಡಿನ ಹಾಲು ಒಂದು ಆರೋಗ್ಯಕರ ಆಯ್ಕೆಯಾಗಿದೆ.

11. ಆಡಿನ ಹಾಲು ಕಡಿಮೆ ಲ್ಯಾಕ್ಟೋಸ್ ಹೊಂದಿರುತ್ತದೆ : ಲ್ಯಾಕ್ಟೋಸ್ ಎಂಬುದು ಸಕ್ಕರೆ ಅಂಶ. ಲ್ಯಾಕ್ಟೋಸ್ ಅಸಹಿಷ್ಣತೆ ಹೊಂದಿರುವ ಕೆಲ ಜನರು ಮತ್ತು ಶಿಶುಗಳಿಗೆ ಇದು ಅಲರ್ಜಿಗಳಿಗೆ ಕಾರಣವಾಗುತ್ತದೆ. ಆದರೆ ಆಡಿನ ಹಾಲು ಹಸುವಿನ ಹಾಲಿಗಿಂತ ಕಡಿಮೆ ಲ್ಯಾಕ್ಟೋಸ್‌ನ್ನು ಹೊಂದಿರುತ್ತದೆ. ಆದ್ದರಿಂದ ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಶಿಶುಗಳಿಗೆ ಆಡಿನ ಹಾಲು ಉತ್ತಮ ಹಾಗೂ ಆರೋಗ್ಯಕರ ಆಯ್ಕೆಯಾಗಿದೆ.

12. ನೈಸರ್ಗಿಕವಾಗಿ ಏಕರೂಪಗೊಂಡ ಸ್ಥಿರತೆ : ಕಚ್ಚಾ ಆಡಿನ ಹಾಲು ನೈಸರ್ಗಿಕ ರೂಪದಲ್ಲಿಯೂ ಸಹ ಸಮನ್ವಯವಿರುವದರಿಂದ ಹಾಲಿನ ಉತ್ಪಾದನೆಗಳನ್ನು ತಯಾರಿಸುವಾಗ ಕಡಿಮೆ ನಿರ್ವಹಣೆ ಬೇಕಾಗಿದೆ, ಹೀಗಾಗಿ ಅದರ ವೆಚ್ಚವು ಕೂಡ ಕಡಿಮೆಯಾಗುತ್ತದೆ.

ಆಡಿನ ಹಾಲಿನ ಆರೋಗ್ಯಕರ ಲಾಭಗಳನ್ನು ಅರಿತ ಮೇಲೆ ನಾವು ಮರಳಿ ಹಳೆಯ ಪದ್ಧತಿಯನ್ನು ಅಳವಡಿಸುವದು ಒಂದು ಬುದ್ಧಿವಂತ ಆಯ್ಕೆ. ಭಾರತದ ಸ್ವಾತಂತ್ರಕ್ಕಾಗಿ ನಿರಂತರವಾಗಿ ಹೋರಾಡಿದ ನಮ್ಮ ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿಯವರು ಕೂಡಾ ಆಡಿನ ಹಾಲನ್ನೇ ಸೇವಿಸುತ್ತಿದ್ದರು.

Published On: 26 February 2023, 03:23 PM English Summary: Importance of goat's milk and nutrition in it

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.