1. ಸುದ್ದಿಗಳು

ಗ್ರಾಹಕರೇ ಇಲ್ನೋಡಿ: LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ..ಹೊಸ ರೇಟ್‌ ಎಷ್ಟು ಗೊತ್ತಾ..?

Maltesh
Maltesh

ಇಂದಿನಿಂದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಬಹಳ ದಿನಗಳ ನಂತರ ಜನರ ಕಿಚನ್ ಬಜೆಟ್ ನಲ್ಲಿ ಕೊಂಚ ರಿಲೀಫ್ ಸಿಕ್ಕಿದೆ. ಇಂದಿನಿಂದ ನಿಮ್ಮ ನಗರದಲ್ಲಿ LPG ಸಿಲಿಂಡರ್ ಎಷ್ಟು ಅಗ್ಗವಾಗಿದೆ ಗೊತ್ತಾ?

LPG ಸಿಲಿಂಡರ್ ಬೆಲೆ 1ನೇ ಏಪ್ರಿಲ್ 2023:  ಇಂದು 2024 ರ ಆರ್ಥಿಕ ವರ್ಷದ ಮೊದಲ ದಿನವಾಗಿದೆ ಮತ್ತು ಸರ್ಕಾರವು LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಂದು ಕಮರ್ಷಿಯಲ್‌ ಎಲ್‌ಪಿಜಿ ಬೆಲೆಯಲ್ಲಿ ಸುಮಾರು 92 ರೂಪಾಯಿ ಕಡಿತ ಮಾಡಲಾಗಿದೆ.  ದೇಶೀಯ ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಬೆಲೆಯಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್ ದರ ಕಳೆದ ತಿಂಗಳಷ್ಟೇ ಇದೆ. ಗಮನಾರ್ಹವೆಂದರೆ ಮಾರ್ಚ್‌ನಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು 350 ರೂ.ಗಳಷ್ಟು ಹೆಚ್ಚಿಸಿದ ಸರ್ಕಾರ ಇದೀಗ ಶನಿವಾರ 92 ರೂಗೆ ಇಳಿಸಿದೆ.

ಏಕಾಏಕಿ 80 ಸಾವಿರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌.. ಕಾರಣ ಏನು ಗೊತ್ತಾ..?

ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆಗಳು: 1 ಏಪ್ರಿಲ್ 2023

ದೆಹಲಿ: 1,103

ಪಾಟ್ನಾ: 1,202

ಲೇಹ್: 1,340

ಐಜ್ವಾಲ್: 1255

ಅಂಡಮಾನ್: 1179

ಅಹಮದಾಬಾದ್: 1110

ಭೋಪಾಲ್: 1118.5

ಜೈಪುರ: 1116.5

ಬೆಂಗಳೂರು: 1115.5

ಮುಂಬೈ: 1112.5

ಕನ್ಯಾಕುಮಾರಿ: 1187

ರಾಂಚಿ: 1160.5

ವಿಶಾಖಪಟ್ಟಣಂ: 1111

ಬಂಗಾರ ಪ್ರಿಯರೇ ಇಲ್ನೋಡಿ.. ನಾಳೆಯಿಂದ ಈ ರೀತಿಯ ಚಿನ್ನಾಭರಣ ಖರೀದಿಗೆ ಅವಕಾಶವಿಲ್ಲ!

ಚೆನ್ನೈ: 1118.5

ಆಗ್ರಾ: 1115.5

ಚಂಡೀಗಢ: 1112.5

ಶಿಮ್ಲಾ: 1147.5

ದಿಬ್ರುಗಢ: 1145

ಲಕ್ನೋ: 1140.5

ಉದಯಪುರ: 1132.5

ಇಂದೋರ್: 1131

ಕೋಲ್ಕತ್ತಾ: 1129

ಡೆಹ್ರಾಡೂನ್: 1122

ಸರ್ಕಾರದಿಂದ ಬಹುದೊಡ್ಡ ಘೋಷಣೆ: Ration Card ಇದ್ದವರಿಗೆ ಇನ್ಮುಂದೆ 150 kg ಅಕ್ಕಿ ಫ್ರೀ!

ಗೃಹಬಳಕೆಯ LPG ಸಿಲಿಂಡರ್‌ಗಳಿಗಿಂತ ವಾಣಿಜ್ಯ ಅನಿಲ ದರಗಳು ಹೆಚ್ಚು ಕಮ್ಮಿ ಆಗುತ್ತಲೆ ನಡೆಯುತ್ತೆ. ಕಳೆದ ವರ್ಷ ಈ ತಿಂಗಳು  ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ರೂ 2,253 ಕ್ಕೆ ಲಭ್ಯವಿತ್ತು ಮತ್ತು ಇಂದಿನಿಂದ ಬೆಲೆಗಳು ರೂ 2,028 ಕ್ಕೆ ಇಳಿದಿದೆ. ಒಂದು ವರ್ಷದಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮಾತ್ರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 225 ರೂಪಾಯಿ ಇಳಿಕೆಯಾಗಿದೆ.

Published On: 01 April 2023, 09:41 AM English Summary: Heavy reduction in LPG cylinder price..

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.