1. ಸುದ್ದಿಗಳು

ಈರುಳ್ಳಿ ಬೆಳೆಗಾರರಿಗೆ ಸಿಹಿ ಸುದ್ದಿ:ಕೇಂದ್ರದಿಂದ ಮಹತ್ವದ ಮಾಹಿತಿ

A C Shobha
A C Shobha
Good news for onion farmers

ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಗಳು 3 ಲಕ್ಷ ಟನ್‌ ಈರುಳ್ಳಿ ಖರೀದಿಸಲಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್‌ ಗೋಯಲ್‌ ಅವರು ಮಾಹಿತಿಯನ್ನು ನೀಡಿದ್ದಾರೆ.ಕಳೆದ ವರ್ಷ ಈ ಅವಧಿಯಲ್ಲಿ 2.5 ಲಕ್ಷ ಟನ್ ಈರುಳ್ಳಿ ಖರೀದಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ರೈತರಿಗೆ ಬೆಳೆ ಗೆ ಸರಿಯಾದ ಬೆಲೆ ಸಿಗುವಂತೆ ಮಾಡುವ ಉದ್ದೇಶದಿಂದ 3 ಲಕ್ಷ ಟನ್ ಈರುಳ್ಳಿ ಖರೀದಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ.

ಕಳೆದ ತಿಂಗಳಿನಿಂದ ಈರುಳ್ಳಿ ಬೆಲೆ ಭಾರಿ ಇಳಿಕೆ ಕಾಣುತ್ತಿರುವುದರಿಂದ ಮಹಾರಾಷ್ಟ್ರದ ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಏಪ್ರಿಲ್‌-ಜೂನ್‌ ಅವಧಿಯಲ್ಲಿ ಹಿಂಗಾರು ಬೆಳೆ ಬೆಳೆಯುತ್ತಾರೆ. ದೇಶಿ ಬೇಡಿಕೆಯ ಶೇಕಡ 65ರಷ್ಟು ಈರುಳ್ಳಿಯನ್ನು ಅಕ್ಟೋಬರ್‌-ನವೆಂಬರ್‌ನ ಮುಂಗಾರು ಅವಧಿಯಲ್ಲಿ ಬೆಳೆಯಲಾಗುತ್ತದೆ.

2. ಮೊಸರು ಪ್ಯಾಕೆಟ್‌ ನ ಮೇಲೆ ಹಿಂದಿ ಪದ ‘ದಹಿ’ ಎಂದು ನಮೂದಿಸಲಾಗಿತ್ತು ಇದು ರಾಜ್ಯಾದಾಂದ್ಯಂತ  ಈ ನಿರ್ದೇಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತನ್ನ ಆದೇಶವನ್ನು ಗುರುವಾರ ವಾಪಸ್‌ ಪಡೆದಿದುಕೊಂಡಿದೆ . 

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಈ ವಿಚಾರವಾಗಿ ಎಫ್‌ಎಸ್‌ಎಸ್‌ಐ ನಿರ್ದೇಶನಕ್ಕೆ ವಿರೋಧ ವ್ಯಕ್ತವಾಗಿತ್ತು.ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ ಹಾಗೂ ಹಲವು ಕನ್ನಡ ಸಂಘಟನೆಗಳು ಆದೇಶ ವಾಪಸ್‌ ಒತ್ತಾಯವನ್ನು ಮಾಡಿದ್ದರು . 

ಎಫ್‌ಎಸ್‌ಎಸ್‌ಎಐ ಗುರುವಾರ ತನ್ನ ಆದೇಶವನ್ನು ಪರಿಷ್ಕರಿಸಿದ್ದು,ಅದರಂತೆ ಪ್ರಾದೇಶಿಕ ಭಾಷೆಗಳನ್ನು ಪ್ಯಾಕೆಟ್‌ ಮೇಲೆ ಮುದ್ರಿಸಲು ಅವಕಾಶ ಕಲ್ಪಿಸಿದೆ. ಆಂಗ್ಲ ಭಾಷೆ ಜೊತೆಗೆ ಯಾವುದೇ ಪ್ರಾದೇಶಿಕ ಭಾಷೆಯನ್ನು ಬಳಸಬಹುದಾಗಿದೆ ಎಂದು ಆದೇಶ ಹೊರಡಿಸಿದೆ . 

ಇದನ್ನೂ ಓದಿ - ಕಳಪೆ ಗುಣಮಟ್ಟದ ಬೀಜ ಪೂರೈಕೆ: ಸೀಡ್ಸ್ ಕಂಪನಿಗೆ ಬಿತ್ತು ಭಾರೀ ದಂಡ!

3. ಇಂದು ರಾಜ್ಯದಲ್ಲಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಂಧನದ ದರಗಳನ್ನು (Fuel Price) ನೋಡುವುದಾದರೆ, ಪೆಟ್ರೋಲ್ ಬೆಲೆ (Petrol Price) ಚಿತ್ರದುರ್ಗದಲ್ಲಿ ಇಳಿಕೆ ಕಂಡಿದೆ . ಚಿತ್ರದುರ್ಗದಲ್ಲಿ 1 ರೂ. 68 ಪೈಸೆಗಳಷ್ಟು ಇಳಿಕೆ ಕಂಡಿದ್ದರೆ ವಿಜಯನಗರದಲ್ಲಿ 1 ರೂ. 34 ಪೈಸೆಗಳಷ್ಟು ಏರಿಕೆಯಾಗಿರುವುದನ್ನು ನೋಡಬಹುದಾಗಿದೆ . 

ಮಿಕ್ಕಂತೆ ಉಳಿದೆಡೆ ಎಂದಿನಂತೆ ಸ್ಥಿರವಾದ ಗತಿಯಯಲ್ಲಿ ಪೆಟ್ರೋಲ್ ದರಗಳು ಕೆಲ ಪೈಸೆಗಳಷ್ಟು ವ್ಯತ್ಯಾಸ ಹೊಂದಿರುವುದನ್ನು ಕಾಣಬಹುದಾಗಿದೆ.

ಭಾರತದಲ್ಲೂ ಸಹ ಅಂತಾರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳ ದರಗಳಲ್ಲಿ ನಿತ್ಯ ಏರಿಳಿತಗಳು ಸಹಜವಾಗಿದೆ.

ಇದನ್ನೂ ಓದಿ -ಬಂಗಾರ ಪ್ರಿಯರೇ ಇಲ್ನೋಡಿ.. ನಾಳೆಯಿಂದ ಈ ರೀತಿಯ ಚಿನ್ನಾಭರಣ ಖರೀದಿಗೆ ಅವಕಾಶವಿಲ್ಲ!

4.ಎರಡು ಮೂರೂ ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗಿದ್ದು , ಇನ್ನೂ ಮೂರುನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ . ಬೆಂಗಳೂರು ಮತ್ತು ಗ್ರಾಮಾಂತರ , ಮಂಡ್ಯ ಮೈಸೂರು ಕೋಲಾರ ತುಮಕೂರು ,ಕೊಡಗು ,ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ . ಜೊತೆಗೆ ಉತ್ತರ ಲ್=ಒಳನಾಡು ಹಾಗು ಕರಾವಳಿಯಲ್ಲಿಒಣಹವೆ ಮುಂದುವರೆಯಲಿದೆ .

Published On: 31 March 2023, 02:49 PM English Summary: GOOD news for onion farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.