1. ಸುದ್ದಿಗಳು

OPS | ಸರ್ಕಾರಿ ನೌಕರರಿಗೆ "ಹಳೇ ಪಿಂಚಣಿ ಯೋಜನೆ" ಬಜೆಟ್‌ನಲ್ಲಿ ಘೋಷಿಸುವ ಭರವಸೆ ನೀಡಿದ ಸಿಎಂ!

Hitesh
Hitesh

ರಾಜ್ಯ ಸರ್ಕಾರವು ಇದೀಗ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ವೊಂದನ್ನು ನೀಡಿದೆ. ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹಳೆ ಪಿಂಚಣಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ.

ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ

ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಬುಧವಾರ ಮುಖ್ಯಮಂತ್ರಿ Siddaramaiah ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಹಳೇ ಪಿಂಚಣಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಜೆಟ್‌ನಲ್ಲಿ

ಘೋಷಿಸುವ ಬಗ್ಗೆ  ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.   

Buffalo Milk Price Hike: ರೈತರಿಗೆ ಸಿಹಿಸುದ್ದಿ: ಎಮ್ಮೆ ಹಾಲಿಗೆ 9.25 ರೂ. ನಿಗದಿ!

ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು ಎನ್ನುವ ಸಂಬಂಧ ಸರ್ಕಾರಿ ನೌಕರರು ಕಳೆದ ಕೆಲವು ತಿಂಗಳುಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. 

ಈಗಾಗಲೇ ಕೆಲವು ಸರ್ಕಾರಗಳು ಆಯಾ ರಾಜ್ಯದಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಿ ಹಳೇ ಪಿಂಚಣಿ ವ್ಯವಸ್ಥೆಯನ್ನೇ

ಜಾರಿ ಮಾಡುವ ಸಂಬಂಧ ಅಲ್ಲಿನ ಸರ್ಕಾರಿ ನೌಕರರಿಗೆ ಭರವಸೆ ನೀಡಿದೆ. ಅಷ್ಟೇ ಅಲ್ಲ ಈ ಸಂಬಂಧ ಈಗಾಗಲೇ  ಹಲವು

ಸರ್ಕಾರಗಳು ಪಿಂಚಣಿಯನ್ನು ಹಿಂದಕ್ಕೂ ಪಡೆದಿವೆ. 

ರಾಜ್ಯದಲ್ಲಿಯೂ ಹಳೆಯ ಪಿಂಚಣಿ ವ್ಯವಸ್ಥೆಯ ಜಾರಿ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರಿ ನೌಕರರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು.

ಇದೀಗ ರಾಜ್ಯದಲ್ಲಿಯೂ ಹಳೆ ಪಿಂಚಣಿಯನ್ನು ರದ್ದು ಮಾಡಿ ಆದೇಶ ಮಾಡಿವೆ.

Indira Canteen ಇಂದಿರಾ ಕ್ಯಾಂಟೀನ್‌ ಯೋಜನೆಗೆ ಮರುಜೀವ; ಯೋಜನೆಯ ಸಮಗ್ರ ವಿವರ ಇಲ್ಲಿದೆ!

ಈಗಾಗಲೇ ಪ್ರತಿಪಕ್ಷದ ಆಡಳಿತವಿರುವ ಪ್ರಮುಖ ರಾಜ್ಯಗಳಾದ ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ

ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿ ಮಾಡುವುದಾಗಿ ಅಲ್ಲಿನ ಸರ್ಕಾರಗಳು ತಮ್ಮ ನಿರ್ಧಾರವನ್ನು ಪ್ರಕಟಿಸಿವೆ.

ಇನ್ನು ಈಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷವು ಬಿಜೆಪಿ

ಸರ್ಕಾರದ ವಿರುದ್ಧ ಹಾಗೂ ಸರ್ಕಾರಿ ನೌಕರರನ್ನು ಸೆಳೆಯುವ ಉದ್ದೇಶದಿಂದ ಸರ್ಕಾರಿ ನೌಕರರಿಗೆ ಹಳೆಯ

ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು.

Heavy Rain ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!

Good news for government employees: Old pension system discussed in cabinet meeting: Siddaramaiah

ಇನ್ನು ರಾಜ್ಯದಲ್ಲಿಯೂ ಸರ್ಕಾರಿ ನೌಕರರು ಚುನಾವಣೆ ಪೂರ್ವದಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದರು.

ಅಲ್ಲದೇ ಯಾವ ಪಕ್ಷ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುತ್ತಾರೆಯೋ ಅವರಿಗೇ ನಾವು ಮತದಾನ ಮಾಡುತ್ತೇವೆ

ಎಂದು ಘೋಷಾವಾಕ್ಯಗಳೊಂದಿಗೆ ಪ್ರತಿಭಟನೆಯನ್ನೂ ನಡೆಸಿದ್ದರು.  

Ration Card ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಮತ್ತೊಮ್ಮೆ ಕಾರ್ಡ್‌ ಅಪ್ಲೈ ಮಾಡುವುದೇಗೆ ?

Good news for government employees: Old pension system discussed in cabinet meeting: Siddaramaiah (ಚಿತ್ರಕೃಪೆ: @CMofKarnataka)
Published On: 14 June 2023, 10:24 AM English Summary: Good news for old pension government employees: Siddaramaiah promises to implement old pension system!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.