1. ಸುದ್ದಿಗಳು

Indira Canteen ಇಂದಿರಾ ಕ್ಯಾಂಟೀನ್‌ ಯೋಜನೆಗೆ ಮರುಜೀವ; ಯೋಜನೆಯ ಸಮಗ್ರ ವಿವರ ಇಲ್ಲಿದೆ!

Hitesh
Hitesh
Indira Canteen Revival of Indira Canteen Scheme; Here is the complete details of the project!

ಕಳೆದ ಮೂರು ವರ್ಷಕ್ಕೂ ಹೆಚ್ಚು ಸಮಯದಿಂದ ಕಡೆಗಣನೆಗೆ ಒಳಗಾಗಿದ್ದ ಇಂದಿರಾ ಕ್ಯಾಂಟೀನ್‌ಗೆ ಇದೀಗ ಜೀವಕಳೆ ಬರುವ ಮುನ್ಸೂಚನೆ ಬಂದಿದೆ.
 

ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್‌ಗಳ ಪುನರಾರಂಭಕ್ಕೆ ಮುಂದಾಗಿದ್ದು, ಬಡವರು ಹಾಗೂ ನಿರ್ಗತಿಕರು ಮತ್ತೆ ಇಂದಿರಾ ಕ್ಯಾಂಟೀನ್‌ಗಳ ಕಡೆ ಮುಖ ಮಾಡಿದ್ದಾರೆ.

ಇಂದಿರಾ ಕ್ಯಾಂಟೀನ್‌ನಇಂದಿನ ಬೆಳವಣೆಗೆಗಳೇನು ಎನ್ನುವುದರ ಸಮಗ್ರ ವಿವರ ಈ ಲೇಖನದಲ್ಲಿದೆ.  

ಬಡವರಿಗೆ ಕಡಿಮೆ ಖರ್ಚಿನಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್‌ ರಾಜಕೀಯ ಹಾಗೂ ಸಿದ್ಧಾಂತ ಸಂಘರ್ಷದಿಂದ ಕಡೆಗಣನೆಗೆ ಗುರಿಯಾಗಿತ್ತು.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಕೊರತೆ, ಜಲಮಂಡಳಿಗೆ ನೀರಿನ ಬಿಲ್‌ ಬಾಕಿ ಉಳಿಸಿಕೊಂಡದ್ದು,

ಗ್ರಾಹಕರಿಗೆ ರುಚಿ ಇಲ್ಲದ ಆಹಾರ ಪೂರೈಕೆ ಸೇರಿದಂತೆ ಹಲವು ಕಾರಣಗಳಿಂದ ಇಂದಿರಾ ಕ್ಯಾಂಟೀನ್‌ ಕಳೆಗುಂದಿತ್ತು.

ಇದೀಗ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್‌ ಪುನರಾರಂಭದ ಬಗ್ಗೆ ಮಾತನಾಡಿದ್ದಾರೆ.   

ಅನುದಾನ ಕೊರತೆಯಿಂದ ಕಳೆಗುಂದಿದ್ದ ಇಂದಿರಾ ಕ್ಯಾಂಟೀನ್‌

ಬೆಂಗಳೂರಿನಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿ 171 ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗಿತ್ತು.

ಅವುಗಳಲ್ಲಿ 20ಕ್ಕೂ ಹೆಚ್ಚು ಮೊಬೈಲ್‌ ಕ್ಯಾಂಟೀನ್‌ಗಳನ್ನು ಸಹ ಪ್ರಾರಂಭಿಸಲಾಗಿತ್ತು.

ಆದರೆ, ಅನುದಾನದ ಕೊರತೆಯಿಂದ ಇಂದಿರಾ ಕ್ಯಾಂಟೀನ್‌ಗಳು ಕಳೆಗುಂದಿದ್ದವು.

ಅಲ್ಲದೇ ಬೆಂಗಳೂರಿನ ಎಂಟು ವಲಯಗಳಲ್ಲಿ ಅಂದಾಜು 40 ಲಕ್ಷರೂ. ಇಂದಿರಾ ಕ್ಯಾಂಟೀನ್‌ಗಳಿಗೆ ನೀರಿನ ಬಿಲ್‌ ಉಳಿಕೆ ಇದೆ.

ಹೀಗಾಗಿ, ಕೆಲವು ಕಡೆಗಳಲ್ಲಿ ನೀರು ಪೂರೈಕೆಯಲ್ಲೂ ವ್ಯತ್ಯಾಸವಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಪ್ರಾರಂಭದ ಹಂತದಲ್ಲಿ  145 ಕೋಟಿ ರೂ.

ಅನುದಾನ ಮೀಸಲಿಡುವ ಮೂಲಕ ರಾಜ್ಯಾದ್ಯಂತ 400 ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿತ್ತು.

ಆದರೆ, ನಂತರದಲ್ಲಿ ಇಂದಿರಾ ಕ್ಯಾಂಟೀನ್‌ನ ನಿರ್ವಹಣೆ ಹಾಗೂ ಅನುದಾನ ಹೊಂದಾಣಿಕೆಯನ್ನು ಸಂಸ್ಥೆಗಳಿಗೆ ಹೆಗಲಿಗೆ ವರ್ಗಾಹಿಸಿತ್ತು.

ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ನ ನಿರ್ವಹಣೆಗೆ ಹಣಕಾಸಿನ ಕೊರತೆ ಉಂಟಾಗಿತ್ತು.

ಇನ್ನು ಈ ಹಿಂದೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಡಿಸಲಾಗಿದ್ದ ಬಜೆಟ್‌ನಲ್ಲಿಯೂ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ  ಹಣ ಮೀಸಲಿರಿಸಿರಲಿಲ್ಲ.

ಪಾಲಿಕೆ ಕ್ಯಾಂಟೀನ್‌ಗಳ ನಿರ್ವಹಣೆಗೆ ತಗಲುವ ವೆಚ್ಚದಲ್ಲಿ ಶೇ.50 ರಷ್ಟು ಭರಿಸುವಂತೆ  ಮನವಿ ಮಾಡಲಾಗಿತ್ತಾದರೂ,

ಅದಕ್ಕೂ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನೀಡಲು ಹಿಂದೇಟು ಹಾಕಿತ್ತು.

ಅಲ್ಲದೇ ಈ ನಡುವೆ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುವ ಬಗ್ಗೆಯೂ ಚರ್ಚೆ ನಡೆದಿತ್ತು. 2022-23ರ ಬಜೆಟ್‌ನಲ್ಲಿ

ಬಿಬಿಎಂಪಿ 50 ಕೋಟಿ ರೂ ಅನುದಾನ ಮೀಸಲಿರಿಸಿತ್ತು.  

Heavy Rain ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!

ಮತ್ತಷ್ಟು ಇಂದಿರಾ ಕ್ಯಾಂಟೀನ್‌

ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಇನ್ನು 50 ಇಂದಿರಾ ಕ್ಯಾಂಟೀನ್‌ಗಳ ಪ್ರಾರಂಭದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಹೊಸ ಇಂದಿರಾ ಕ್ಯಾಂಟೀನ್‌ಗಳು ಪ್ರಾರಂಭವಾಗುವ ಸಾಧ್ಯತೆ ಇದೆ.

ಈ ಹಿಂದೆ ಜಾಗದ ಕೊರತೆ ಇರುವ ಪ್ರದೇಶಗಳಲ್ಲಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗಿತ್ತು.   

ಇದೇ ತಿಂಗಳು ಪುನರಾರಂಭ

ಇದೇ ತಿಂಗಳ 29ರಿಂದ ಇಂದಿರಾ ಕ್ಯಾಂಟೀನ್‌ಗಳು ಅದ್ಧೂರಿಯಾಗಿ ಪುನರಾರಂಭವಾಗಲಿದ್ದು,

ಉಪಹಾರಕ್ಕೆ 10 ರೂಪಾಯಿ, ಊಟಕ್ಕೆ 20 ರೂಪಾಯಿ  ನಿಗದಿ ಮಾಡುವ ಮೂಲಕ ಶುಚಿಕರ ಉಪಹಾರ

ಹಾಗೂ ಊಟ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇಂದಿರಾ ಕ್ಯಾಂಟೀನ್‌ ಪುನಶ್ಚೇತಕ್ಕೆ ಬದ್ಧ: ಸಿದ್ದರಾಮಯ್ಯ

ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಪುನರಾರಂಭಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು ತಿಳಿಸಿದ್ದಾರೆ.

ಅಲ್ಲದೇ ನಗರ-ಪಟ್ಟಣಗಳಲ್ಲಿರುವ ಮತ್ತು ಕಾರ್ಯನಿಮಿತ್ತ ನಗರಗಳಿಗೆ ಬರುವ ಬಡವರ ಹಸಿವು ತಣಿಸುವ ಸದುದ್ದೇಶದಿಂದ

ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಕಾರಣದಿಂದಾಗಿ ಕೆಲವು ಮುಚ್ಚಿವೆ,

ಹಲವು ಮುಚ್ಚುವ ಸ್ಥಿತಿಯಲ್ಲಿವೆ.

ಗರೀಬಿ ಹಟಾವೋ ಘೋಷಣೆಯ ಮೂಲಕ ಬಡತನ ನಿರ್ಮೂಲನೆಯ ಕಾರ್ಯವನ್ನು ಕಾಳಜಿಯಿಂದ ಮಾಡಿದ್ದ

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹೆಸರಿನ ಇಂದಿರಾ ಕ್ಯಾಂಟಿನ್ ಗಳನ್ನು ಮುಚ್ಚಲು ನಾವು ಅವಕಾಶ ನೀಡುವುದಿಲ್ಲ.

ಅಗತ್ಯ ಸಂಪನ್ಮೂಲ ಒದಗಿಸಿ ಅವುಗಳನ್ನು ಪುನಶ್ಚೇತನಗೊಳಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.

ಅತಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಗಳು ಸ್ವಸ್ಥ ಮತ್ತು ರುಚಿಕರವಾದ ಊಟ-ತಿಂಡಿಗಳೊಂದಿಗೆ ಜನರ ಸೇವೆ ಶುರುಮಾಡಲಿವೆ.

ಹಸಿದವರ ಪಾಲಿಗೆ ಅನ್ನವೇ ದೇವರು.. ಎಂದಿದ್ದಾರೆ. 

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ: ಎಷ್ಟಿದೆ ಇಂದಿನ ಚಿನ್ನದ ದರ ? 

Published On: 13 June 2023, 12:02 PM English Summary: Indira Canteen Revival of Indira Canteen Scheme; Here is the complete details of the project!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.