1. ಸುದ್ದಿಗಳು

ರೈತರಿಗೆ ಗುಡ್ ನೀವ್ಸ್! ಒಂದು ಕರೆ ಮಾಡಿದರೆ ಸಾಕು, 72 ಗಂಟೆಯಲ್ಲಿ ರೈತರ ಮನೆಗೆ ಪಹಣಿ!

Kalmesh T
Kalmesh T
Good Neews for Farmers! Just one phone call will be enough for the next 72 hours to get to your home

ರೈತರಿಗೆ ಇಲ್ಲಿದೆ ಗುಡ್‌ ನೀವ್ಸ್‌. ಇನ್ಮುಂದೆ ರೈತರು ತಮ್ಮ ಜಮೀನುಗಳ ಪಹಣಿ ಪತ್ರಗಳನ್ನು ಪಡೆಯಲು ಪರದಾಡುವ ಅವಶ್ಯಕತೆ ಇಲ್ಲ. ಕೇವಲ ಒಂದು ಫೋನ್‌ ಕರೆ ಮಾಡಿದರೆ ಸಾಕು  ನಂತರದ 72 ಗಂಟೆಯಲ್ಲಿ ಸೀದಾ ನಿಮ್ಮ ಪಹಣಿ ಪತ್ರ ನಿಮ್ಮ ಮನೆಗೆ ಬರಲಿದೆ. ಹೇಗಪ್ಪಾ ಅಂತೀರಾ ಇಲ್ಲಿದೆ ಸಂಪೂರ್ಣ ವಿವರ.

ಕಂದಾಯ ಇಲಾಖೆ(Department of Revenue) ಶೀಘ್ರದಲ್ಲಿ ಆರಂಭಿಸಲಿರುವ ಸಹಾಯವಾಣಿಗೆ(Helpline) ಕರೆ ಮಾಡಿದ 72 ಗಂಟೆಯೊಳಗಾಗಿ ಪಿಂಚಣಿದಾರರಿಗೆ ಮಂಜೂರಾತಿ ಪತ್ರ ತಲುಪಿಸುವ ಯೋಜನೆ ಜಾರಿ ತರಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌(R Ashok) ಹೇಳಿದರು.

ಇದನ್ನು ಓದಿರಿ: 

ಕೃಷ್ಣಾ-ಮಹದಾಯಿ ಸಂಕಲ್ಪ ಯಾತ್ರೆಗೆ S.R.ಪಾಟೀಲ ಮತ್ತು ರೈತ ತಂಡಗಳು ಸಜ್ಜು!

ಬಿಜೆಪಿಯ(BJP) ಪಿ.ಎಂ. ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿವಿಧ ವರ್ಗಗಳಿಗೆ ನೀಡುವ ಮಾಸಾಶನ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ, ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಯೋಜನೆ(Pension Scheme) ಮಂಜೂರಾತಿ ಪತ್ರ ನೀಡುವ ಯೋಜನೆ ಆರಂಭಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಹೊಸ ಸಾಫ್ಟ್‌ವೇರ್‌(Software) ರೂಪಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ(Karnataka) ಆರಂಭಿಸಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ರೈತರ ಆಯ್ದ ದಾಖಲೆಗಳನ್ನು ತಲುಪಿಸುವ ಕಾರ್ಯ ಮಾಡಲಾಗಿದೆ. ಮುಂದುವರೆದು ಪಿಂಚಣಿ ಮಂಜೂರಾತಿ ಪತ್ರವನ್ನು ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.

NCDEX ನಿಂದ ರೈತರಿಗಾಗಿ ಕಾಲ್ ಸೆಂಟರ್ ಸ್ಥಾಪನೆ!

60 ಲಕ್ಷ ದಾಖಲೆ ವಿತರಣೆ:

ಇತ್ತೀಚೆಗೆ ಕಂದಾಯ ದಾಖಲೆಗಳನ್ನು ರೈತರ(Farmers) ಮನೆ ಬಾಗಿಲಿಗೆ ತಲುಪಿಸುವ ಯೋಜನೆಯಡಿ ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಅಟ್ಲಾಸ್‌ ದಾಖಲೆಗಳನ್ನು ನೀಡಲಾಗುತ್ತಿದ್ದು, ಸುಮರು 60 ಲಕ್ಷ ಕುಟುಂಬಗಳಿಗೆ ತಲುಪಿಸಿದ್ದೇವೆ. 5 ವರ್ಷಕ್ಕೊಮ್ಮೆ ಈ ರೀತಿ ದಾಖಲೆ ನೀಡಬೇಕೆಂಬ ನಿಯಮದ ಅನ್ವಯ ಕೊಡಲಾಗಿದೆ. ಇದಕ್ಕೆ ಸುಮಾರು 15 ಕೋಟಿ ರು. ವೆಚ್ಚವಾಗಿದೆ ಎಂದು ಕಾಂಗ್ರೆಸ್‌ ಸದಸ್ಯಕೆ. ಹರೀಶ್‌ಕುಮಾರ್‌ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಎಚ್ಚರಿಕೆ: ಕರ್ನಾಟಕದಲ್ಲಿ ಭಾರೀ ಮಳೆ! ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ

ದಾಖಲೆಗಳನ್ನು ನೀಡುವುದರಿಂದ ಬಡವರು, ದಲಿತರಿಗೆ ತಮ್ಮ ಆಸ್ತಿಯ ವಿವರ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದ ಸಚಿವರು, ಪಹಣಿ ದಾಖಲೆಗಳ ಅವಧಿ ಮಾತ್ರ ಒಂದು ವರ್ಷವಾಗಿರುತ್ತದೆ, ಜಾತಿ ಪ್ರಮಾಣ ಪತ್ರ ಶಾಶ್ವತವಾಗಿರುತ್ತದೆ ಎಂದು ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ(CM Ibrahim) ಅವರಿಗೆ ಉತ್ತರಿಸಿದರು.

ಒಂದು ವೇಳೆ ದಾಖಲೆಗಳು ಮುದ್ರಣವಾಗದೆ ರೈತರಿಗೆ ದಾಖಲೆಗಳನ್ನು ಮುದ್ದಾಂ ತಲುಪಿಸಲು ಸಾಧ್ಯವಾಗದೇ ಇದ್ದರೆ ಅಂತಹ ರೈತರಿಗೆ ಮಾ. 21ರಿಂದ 26ರ ವರೆಗೆ ನಾಡಕಚೇರಿಯಲ್ಲಿ ಉಚಿತವಾಗಿ ದಾಖಲೆ ವಿತರಿಸಲು ಅವಕಾಶ ನೀಡಲಾಗಿತ್ತು. ಅಂತೆಯೇ, ಅಂತಹ ರೈತರು ಸಹ ನಾಡಕಚೇರಿಗಳಲ್ಲಿ ಪಡೆದುಕೊಂಡಿದ್ದಾರೆ.

ರೈತರಿಗಾಗಿ ಸರ್ಕಾರದಿಂದ ಸಹಾಯಧನ..! Hydroponics ಮತ್ತು Aeroponics ಕೃಷಿಗಾಗಿ ನೆರವು

Published On: 31 March 2022, 03:40 PM English Summary: Good Neews for Farmers! Just one phone call will be enough for the next 72 hours to get to your home

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.