1. ಸುದ್ದಿಗಳು

ಕೃಷ್ಣಾ-ಮಹದಾಯಿ ಸಂಕಲ್ಪ ಯಾತ್ರೆಗೆ S.R.ಪಾಟೀಲ ಮತ್ತು ರೈತ ತಂಡಗಳು ಸಜ್ಜು!

Kalmesh T
Kalmesh T
S.R. Patil outfit for Krishna-Mahadai Sankalpa Yatra!

ಏ.13 ರಿಂದ 6 ದಿನಗಳ ಕಾಲ ಉತ್ತರ ಕರ್ನಾಟಕದ ಎಲ್ಲ ರೈತರು, ಸಂತ್ರಸ್ತರು, ಮುಖಂಡರು ಸೇರಿ ಸುಮಾರು 75 ಟ್ರ್ಯಾಕ್ಟರ್‌ಗಳಲ್ಲಿ ಕೃಷ್ಣಾ-ಮಹದಾಯಿ ಸಂಕಲ್ಪ ಯಾತ್ರೆಯನ್ನು ನರಗುಂದದಿಂದ(Nargund) ಆರಂಭ ಮಾಡಲಾಗುವುದು ಎಂದು ವಿಧಾನ ಪರಿಷತ್ತ ವಿರೋಧ ಪಕ್ಷದ ಮಾಜಿ ನಾಯಕ ಎಸ್‌.ಆರ್‌.ಪಾಟೀಲ(SR Patil) ಹೇಳಿದರು.

ಬಾಪೂಜಿ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿ ಬುಧವಾರ ಉತ್ತರ ಕರ್ನಾಟಕ (North Karnataka) ಸ್ವಾಭಿಮಾನ ವೇದಿಕೆ ಹಮ್ಮಿಕೊಂಡಿದ್ದ ಕೃಷ್ಣಾ ಮಹದಾಯಿ ಸಂಕಲ್ಪ ಯಾತ್ರೆ (Krishna Mahadayi Sankalpa Yatra) ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನು ಓದಿರಿ: NCDEX ನಿಂದ ರೈತರಿಗಾಗಿ ಕಾಲ್ ಸೆಂಟರ್ ಸ್ಥಾಪನೆ!

ಎಚ್ಚರಿಕೆ: ಕರ್ನಾಟಕದಲ್ಲಿ ಭಾರೀ ಮಳೆ! ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ

“ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಸಂಚರಿಸುವ ಈ ಯಾತ್ರೆ ಏ.18ರಂದು ಬೀಳಗಿ ತಲುಪಿ ಬೃಹತ್‌ ಸಮಾವೇಶ ಮಾಡಿ ಸರ್ಕಾರಗಳಿಗೆ ಮನವರಿಕೆ ಮಾಡೋಣ. ಈ ಯಾತ್ರೆ ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿ ನಡೆಯಲಿದೆ. ಹೀಗಾಗಿ ಎಲ್ಲರೂ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಭಾಗವಹಿಸಬೇಕು” ಎಂದು ಕೋರಿದರು.

ಕೃಷ್ಣಾ ಯೋಜನೆಯ(Krishna Project) 3ನೇ ಹಂತ ಜಾರಿಯಾದರೆ 130 ಟಿಎಂಸಿ ನೀರು ಸಂಗ್ರಹಣೆಯೊಂದಿಗೆ ಉತ್ತರ ಕರ್ನಾಟಕದ 7 ಜಿಲ್ಲೆಗಳ 14.6 ಲಕ್ಷ ಎಕರೆ ಜಮೀನು ನೀರಾವರಿಗೆ(Irrigation) ಬರಲಿದೆ. ಮಹಾದಾಯಿ(Mahadayi) ನದಿಯನ್ನು ಮಲಪ್ರಭ ನದಿಗೆ ಜೋಡಣೆ ಮಾಡಿದರೆ 4 ಜಿಲ್ಲೆಗಳಿಗೆ ಸುಮಾರು 7.56 ಟಿಎಂಸಿ ನೀರು ಕುಡಿಯಲು ಸಿಗುತ್ತದೆ.

ಇನ್ನಷ್ಟು ಓದಿರಿ: ರೈತರಿಗಾಗಿ ಸರ್ಕಾರದಿಂದ ಸಹಾಯಧನ..! Hydroponics ಮತ್ತು Aeroponics ಕೃಷಿಗಾಗಿ ನೆರವು

GOOD NEWS : ಏಪ್ರೀಲ್ 1 ರಿಂದ Savings Account ಬಡ್ಡಿದರವನ್ನ ಶೇ 6ಕ್ಕೇರಿಸಲು ತೀರ್ಮಾನ ಕೈಗೊಂಡ ಬ್ಯಾಂಕ್

ನವಲಿ ಸಮತೋಲನ ಜಲಾಶಯದಲ್ಲಿ ತುಂಗಭದ್ರ ನದಿಗೆ ಡ್ಯಾಂ ನಿರ್ಮಿಸಿ 31 ಟಿಎಂಸಿ ನೀರು ಸಂಗ್ರಹಿಸಬಹುದು. ಹೀಗೆ ಹಲವಾರು ನೀರಾವರಿ ಯೋಜನೆಗಳು ಜಾರಿಗೆ ಬರುತ್ತವೆ. ಇದರಿಂದ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಜತೆಗೆ ಹಲವಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಮೂಲ ಸೌಕರ್ಯ, ನೌಕರಿ, ಉದ್ಯೋಗ ಸೇರಿದಂತೆ ಹಲವಾರು ವಿಷಯಗಳಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯವಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ 10 ನದಿಗಳು ಬೃಹದಾಕಾರವಾಗಿ ಹರಿಯುತ್ತಿದ್ದರೂ ಅವುಗಳನ್ನು ನೀರಾವರಿ ಯೋಜನೆಗಾಗಿ ಉಪಯೋಗ ಮಾಡಿಕೊಳ್ಳುವ ಕೆಲಸ ನಡೆಯುತ್ತಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಬೇಕಿರುವ ಅನುದಾನ ಸೇರಿದಂತೆ ಕೆಲಸಗಳು ಯೋಜನೆ ಜಾರಿಯಾದರೆ ಎಷ್ಟೊಂದು ಅಭಿವೃದ್ಧಿಯಾಗುತ್ತದೆ ಎನ್ನುವ ವಿಚಾರವನ್ನು ತಿಳಿಸುವ ಕೆಲಸವನ್ನು ಮಾಡುತ್ತಲೇ ಬಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅದಕ್ಕಾಗಿ ನಾವೆಲ್ಲರೂ ಕೃಷ್ಣಾ ಮತ್ತು ಮಹದಾಯಿ ಸೇರಿದಂತೆ ನವಲಿ ಸಮತೋಲನ ಜಲಾಶಯಗಳ ಕುರಿತಾಗಿ ಟ್ರ್ಯಾಕ್ಟರ್‌ ಯಾತ್ರೆ ಆರಂಭ ಮಾಡಿ ಸರ್ಕಾರಕ್ಕೆ ಮತ್ತೊಮ್ಮೆ ಮನವರಿಕೆ ಮಾಡೋಣ ಎಂದರು.

ಮುಂದಿನ 5 ದಿನ ಬಿಸಿಲಿನ ತೀವೃತೆಯಲ್ಲಿ ಏರಿಕೆ! ಯಾವ ರಾಜ್ಯಗಳಲ್ಲಿ ಹೆಚ್ಚಾಗಲಿದೆ ಬಿಸಿಲು?

ರೈತರಿಗೆ ಬಿಗ್‌ನ್ಯೂಸ್‌: PM ಕಿಸಾನ್‌ eKYCಯಲ್ಲಿ ಮಹತ್ವದ ಬದಲಾವಣೆ.ಈಗಲೇ ಓದಿ

ರಾಜ್ಯದಲ್ಲಿ ಆಡಳಿತಕ್ಕೆ ಬರುವ ಯಾವುದೇ ಸರ್ಕಾರವಿದ್ದರೂ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಪ್ರಾದೇಶಿಕ ಅಸಮಾನತೆ ಮುಗಿಲೆತ್ತರಕ್ಕೆ ಏರಿದೆ. ಇಂತಹ ಪರಿಸ್ಥಿತಿ ಹೀಗೆ ಮುಂದುವರಿದರೆ ಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಸಂಪೂರ್ಣ ಅಭಿವೃದ್ಧಿ ಕುಂಠಿತ ಪ್ರದೇಶವಾಗಲಿದೆ ಅಂತ ವಿಧಾನ ಪರಿಷತ್ತ ವಿರೋಧ ಪಕ್ಷದ ಮಾಜಿ ನಾಯಕ ಎಸ್‌.ಆರ್‌.ಪಾಟೀಲ ತಿಳಿಸಿದ್ದಾರೆ.  

NABARDನಲ್ಲಿ ಇಂಟರ್ನ್‌ಶಿಪ್ Rs.18000 Stipend!

ಟ್ರೈನಿ ಹುದ್ದೆಗಳಿಗೆ IFFCO ನೇಮಕಾತಿ

Published On: 31 March 2022, 03:02 PM English Summary: S.R. Patil outfit for Krishna-Mahadai Sankalpa Yatra!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.