1. ಸುದ್ದಿಗಳು

12 ಸಾವಿರ KG ಮಾವಿನ ಹಣ್ಣುಗಳನ್ನು ನಾಶಪಡಿಸಿದ FSSAI ಅಧಿಕಾರಿಗಳು..!ಕಾರಣವೇನು ಗೊತ್ತಾ..?

Maltesh
Maltesh
Mangos

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ತಮಿಳುನಾಡಿನ ಕೊಯಮತ್ತೂರಿನ ಹಣ್ಣಿನ ಅಂಗಡಿಗಳ ಮೇಲೆ ದಾಳಿ ನಡೆಸಿ 14.7 ಟನ್‌ಗಳಷ್ಟಿ ಮಾಗಿದ ಹಣ್ಣುಗಳನ್ನು ಸೀಜ್‌ ಮಾಡಿದ್ದಾರೆ.

23 ಅಡಿ ಕಬ್ಬು ಬೆಳೆಯುವ ರೈತ ಉತ್ತರ ಪ್ರದೇಶದ ನಿವಾಸಿ.

ನೈಸರ್ಗಿಕ ಕೃಷಿ ಮೂಲಕ ಬೆಲ್ಲದ ನಿಜ ಸಿಹಿ ಸವಿದ ಯುವ ಕೃಷಿಕ ಶ್ರೀನಿಧಿ

ಏನಿದು ಪ್ರಕರಣ..?

ಕೊಯಮತ್ತೂರಿನ ಹಣ್ಣಿನ ಅಂಗಡಿಗಳಲ್ಲಿ ಬುಧವಾರ ನಡೆಸಿದ ಹಠಾತ್ ತಪಾಸಣೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ14.7 ಟನ್ ಕೃತಕವಾಗಿ ಮಾಗಿದ ಹಣ್ಣುಗಳನ್ನು ವಶಪಡಿಸಿಕೊಂಡು ನಾಶಪಡಿಸಿದೆ. ಹೌದು ರಾಸಾಯನಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದನ್ನು ತಿಳಿದು ದಾಳಿ ನಡೆಸಿದ ಅಧಿಕಾರಿಗಳಿಗೆ ಮಾವು ಮತ್ತು ಮೋಸಂಬಿ ಹಣ್ಣುಗಳನ್ನು ಅಕ್ರಮವಾಗಿ ಎಥಿಲೀನ್ ಸ್ಯಾಚೆಟ್‌ಗಳನ್ನು ಬಳಸಿ ಮಾಗಿಸಿರುವುದು ಖಾತ್ರುಯಾಗಿದೆ. ಹೀಗಾಗು ಅವುಗಳನ್ನು  ನಾಶ ಮಾಡಿದ್ದಾರೆ.

 

ಈ ವೇಳೆ ಜಿಲ್ಲಾಧಿಕಾರಿ ಜಿ.ಎಸ್.ಸಮೀರನ್ ಅವರ ಆದೇಶದ ಮೇರೆಗೆ ನಿಯೋಜಿತ ಅಧಿಕಾರಿ ಕೆ.ತಮಿಳ್ಸೆಲ್ವನ್ ನೇತೃತ್ವದಲ್ಲಿ, ಆರು ಎಫ್‌ಎಸ್‌ಎಸ್‌ಎಐ ತಂಡದ ಅಧಿಕಾರಿಗಳು ನಗರದ ಸುತ್ತಮುತ್ತಲಿನ ಹಣ್ಣು ಮಾರಾಟಗಾರರನ್ನು ವಿಚಾರಿಸಿ ಹಣ್ಣುಗಳ ಪರಿಶೀಲನೆ ನಡೆಸಿದ್ದಾರೆ.

ಏನಿದು ಎಥಿಲೀನ್..?

ಎಥಿಲೀನ್ ಅನಿಲದ ಸಸ್ಯ ಹಾರ್ಮೋನ್ ಆಗಿದ್ದು, ಇದು ಇತರ ಹಾರ್ಮೋನುಗಳು ಮತ್ತು ಸಂಕೇತಗಳೊಂದಿಗೆ ಅನೇಕ ಹಣ್ಣುಗಳ ಮಾಗಿದ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚಾಗಿ ಬಲಿಯದ ಹಣ್ಣು ಸಾಮಾನ್ಯವಾಗಿ ಕಡಿಮೆ ಮಟ್ಟದ ಎಥಿಲೀನ್ ಆಂಶವನ್ನು ಹೊಂದಿರುತ್ತದೆ. ಹಣ್ಣು ಬೆಳೆದಂತೆ, ಎಥಿಲೀನ್ ಹಣ್ಣು ಮಾಗುವುದನ್ನು ಪ್ರೇರೇಪಿಸುವ ಸಂಕೇತವಾಗಿ ಉತ್ಪತ್ತಿಯಾಗುತ್ತದೆ. ಸುಗ್ಗಿಯ ನಂತರ ಎಥಿಲೀನ್ ಉತ್ಪಾದನೆಯು ಹೆಚ್ಚುತ್ತಲೇ ಇರುತ್ತದೆ.

ಬರೋಬ್ಬರಿ 23 ಅಡಿ ಉದ್ದದ ಕಬ್ಬು ಬೆಳೆದ ರೈತ! ಅಚ್ಚರಿಯಾದರೂ ಇದು ಸತ್ಯ

ಹೀಗಾಗಿ ಹಣ್ಣಿನ ಅವಧಿ, ಹಾಗೂ  ಶೇಖರಣಾ ಸಾಮರ್ಥ್ಯ ಮತ್ತು ರೋಗಕಾರಕ ದಾಳಿಗಳಿಗೆ ಅದರ ಒಳಗಾಗುವಿಕೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ಎಥಿಲೀನ್ ಉತ್ಪಾದನೆಯ ದರಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನಿರ್ವಹಿಸುವುದು ನಿಪ್ರಾಮುಖ್ಯತೆಯನ್ನು ಹೊಂದಿದೆ, ಆದ್ದರಿಂದ ಹಣ್ಣುಗಳು ಮರದ ಮೇಲೆ ಅಥವಾ ಕೊಯ್ಲು ನಂತರದ ಶೇಖರಣೆಯ ಸಮಯದಲ್ಲಿ ಹೆಚ್ಚು-ಪಕ್ವವಾಗುವುದಿಲ್ಲ, ಹೀಗಾಗಿ ಇದನ್ನು ಬಳಸಿ ರಾಸಾಯನಿಕವಾಗಿ ಮಾಗಿಸಲಾಗುತ್ತದೆ.

ಇತ್ತೀಚಿನ ಸಂಶೋಧನೆಯ ಪ್ರಕಾರ, ಎಥಿಲೀನ್ ಹಣ್ಣಿನ ಪಕ್ವಗೊಳಿಸುವಿಕೆಯಲ್ಲಿ ಒಳಗೊಂಡಿರುವ ಹಲವಾರು ಜೀನ್‌ಗಳ ಅಭಿವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಕಿಣ್ವಗಳು ಸಂಕೀರ್ಣ ಪಾಲಿಸ್ಯಾಕರೈಡ್‌ಗಳನ್ನು ಸರಳವಾದ ಸಕ್ಕರೆಗಳಾಗಿ ವಿಭಜಿಸುತ್ತವೆ, ಇದು ಹಣ್ಣಿನ ಚರ್ಮವನ್ನು ಮೃದುಗೊಳಿಸುತ್ತದೆ. ಕೃತಕ ಪಕ್ವಗೊಳಿಸುವಿಕೆಯಲ್ಲಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಲು ರಾಸಾಯನಿಕಗಳನ್ನು ಬಳಸಲಾಗುತ್ತದೆ.

ಸದ್ಯ ಈ ಹಠಾತ್ ತಪಾಸಣೆಯಲ್ಲಿ 12.35 ಟನ್ ಮಾವು ಮತ್ತು 2.35 ಟನ್ ಮೋಸಂಬಿ ಹಣ್ಣನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 8.10 ಲಕ್ಷ ಮೌಲ್ಯದ ವಶಪಡಿಸಿಕೊಂಡ ಹಣ್ಣುಗಳನ್ನು ಪಾಲಿಕೆಯ ಕಾಂಪೋಸ್ಟ್ ಯಾರ್ಡ್‌ಗೆ ವರ್ಗಾಯಿಸಿ ಕೆಡವಲಾಯಿತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ “ಅರಣ್ಯ ಬೆಂಕಿ ನಿರ್ವಹಣೆಯ ಕುರಿತು ಸಲಹಾ ಕಾರ್ಯಾಗಾರ”

ಕೃತಕವಾಗಿ ಮಾಗಿದ ಹಣ್ಣುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಸ್ಎಐ 12 ಮಾರಾಟಗಾರರಿಗೆ ನೋಟಿಸ್ ನೀಡಿದೆ. ಇದನ್ನು ತಿನ್ನುವುದರಿಂದ ಜಠರಗರುಳಿನ ಸಮಸ್ಯೆಗಳು, ಅತಿಸಾರ, ವಾಂತಿ, ವಾಕರಿಕೆ ಮತ್ತು ಚರ್ಮದ ಅಲರ್ಜಿಗಳು ಉಂಟಾಗಬಹುದು.

ಎಫ್‌ಎಸ್‌ಎಸ್‌ಎಐ , ಜಿಲ್ಲಾಡಳಿತದ ಸದ್ಯ ಹಣ್ಣುಗಳನ್ನು ಕೃತಕವಾಗಿ ಹಣ್ಣಾಗುವುದನ್ನು ಪರಿಶೀಲಿಸಲು ನಗರದಾದ್ಯಂತ ಇದೇ ರೀತಿಯ ತಪಾಸಣೆಗಳನ್ನು ಮಾಡುತ್ತಿದೆ. ದೂರುಗಳನ್ನು ಅಥವಾ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಲು ಸಾರ್ವಜನಿಕರು FSSAI ಅನ್ನು WhatsApp ಮೂಲಕ 94440-42322 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಭಾರತೀಯ ರೈಲ್ವೇ ಶೀಘ್ರವಾಗಿ ಕಲ್ಲಿದ್ದಲನ್ನು ಸಾಗಿಸಲು ಬದ್ಧವಾಗಿವೆ-ಕೇಂದ್ರ

ಸಾಧನೆ: 2022 ರಲ್ಲಿ 661.54 ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ!

Published On: 13 May 2022, 12:47 PM English Summary: FSSAI Officers Destroy 12 thousand kg mango in Tamilnadu

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.