ತಂತ್ರಜ್ಞಾನದಿಂದ ನೀವು ಊಹಿಸಬಹುದಾದ ಚಿಕ್ಕ ವಿಷಯಗಳ ಮೌಲ್ಯಕ್ಕೆ ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ. 1980 ರ ದಶಕದಲ್ಲಿ ಗೋಧಿಯ ಬೆಲೆ ಎಷ್ಟು ಎಂದು ನೀವು ಊಹಿಸಬಲ್ಲಿರಾ?
ನೀವು ನಿಖರವಾದ ಊಹೆಯನ್ನು ಮಾಡಲು ಸಾಧ್ಯವಿಲ್ಲ. ಆದರೆ ಈ ವೈರಲ್ ಪೋಟೋ ಅದನ್ನು ಬಹಿರಂಗಪಡಿಸುತ್ತದೆ. ನಿಖರವಾಗಿ ಹೇಳಬೇಕೆಂದರೆ 1987 ರ ಬಿಲ್ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ಆಗಿದೆ. ಆ ಸಮಯದಲ್ಲಿ ಪ್ರತಿ ಕೆಜಿ ಗೋಧಿಗೆ ಎಷ್ಟು ಬೆಲೆ ಇತ್ತು ಎಂಬುದು ಈ ಪೋಟೋದ ವಿಶೇಷತೆಯಾಗಿದೆ.
EPFO Update: ಈ ಸದಸ್ಯರು ಇದೀಗ ಹೆಚ್ಚಿನ ಪೆನ್ಷನ್ ಪಡೆಯುತ್ತಾರೆ!
ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಲೆವರನ್ನು ಅಚ್ಚರಿಗೊಳಪಡಿಸಿದೆ. 36 ವರ್ಷಗಳ ಹಿಂದೆ ಗೋಧಿ ಬೆಲೆಯನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು 1987 ರ ಬಿಲ್‌ನ ಚಿತ್ರವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ 36 ವರ್ಷಗಳಷ್ಟು ಅಂದ್ರೆ 1987ರ ಒಂದು ಬಿಲದದ ಇದ್ದು ಅದರಲ್ಲಿ ಒಂದು ಕೆಜಿ ಗೋಧಿಯ ಬೆಲೆ ಕೇವಲ ಒಂದು ರೂಪಾಯಿ ಆರು ಪೈಸೆಗಳಾಗಿದೆ.
ಭಾರತೀಯ ಆಹಾರ ನಿಗಮಕ್ಕೆ ಮಾರಾಟವಾದ ಉತ್ಪನ್ನಗಳ ಬಿಲ್ ಇದಾಗಿದ್ದು,"ಜೆ ಫಾರ್ಮ್" ಅನ್ನು IFS ಅಧಿಕಾರಿಯು ತನ್ನ ಅಜ್ಜನೊಂದಿಗೆ ಹಂಚಿಕೊಂಡಿದ್ದಾರೆ. ಧಾನ್ಯ ಮಾರುಕಟ್ಟೆಯಲ್ಲಿ ರೈತರ ಕೃಷಿ ಸರಕುಗಳ ಮಾರಾಟ ರಸೀದಿ ಜೆ ರೂಪದಲ್ಲಿದೆ.
ಆಧಾರ್ ಕಾರ್ಡ್ ಹೊಸ ಅಪ್‌ಡೇಟ್: ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆಧಾರ್‌ನಲ್ಲಿ ವಿಳಾಸ ಬದಲಾವಣೆಗೆ ಅವಕಾಶ
"ಈ ಹಿಂದೆ ಗೋಧಿ ಕೆಜಿಗೆ 1.6 ರೂಪಾಯಿ ಇತ್ತು. ನನ್ನ ಅಜ್ಜ 1987 ರಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾರಾಟ ಮಾಡಿದ ಗೋಧಿ ಬೆಳೆ ಬಿಲ್ ಇದು." ನನ್ನ ಅಜ್ಜ ಎಲ್ಲಾ ದಾಖಲೆಗಳನ್ನು ಜಾಣತನದಿಂದ ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿದ್ದರು ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಪಾಸ್ವಾನ್, "ಅಜ್ಜನಿಗೆ ಎಲ್ಲಾ ದಾಖಲೆಗಳನ್ನು ಹಾಗೆಯೇ ಇಡುವ ಅಭ್ಯಾಸವಿತ್ತು. ಈ ದಾಖಲೆಯನ್ನು ಜೆ ಫಾರಂ ಎಂದು ಕರೆಯಲಾಗುತ್ತದೆ. ಅವರ ಸಂಗ್ರಹದಲ್ಲಿ ಕಳೆದ 40 ವರ್ಷಗಳಲ್ಲಿ ಮಾರಾಟವಾದ ಬೆಳೆಗಳ ಎಲ್ಲಾ ದಾಖಲೆಗಳಿವೆ ಎಂದಿದ್ದಾರೆ. ಪೋಸ್ಟ್ ಪ್ರಕಟವಾದಾಗಿನಿಂದ 60k ವೀಕ್ಷಣೆಗಳೊಂದಿಗೆ ತ್ವರಿತವಾಗಿ ವೈರಲ್ ಆಗಿದೆ.
"ಜೆ ಫಾರ್ಮ್" ಎನ್ನುವುದು ಕಮಿಷನ್ ದಲ್ಲಾಳಿಗಳು ತಮ್ಮ ಬೆಳೆಗಳನ್ನು ಮಾರಾಟ ಮಾಡುವ ರೈತರಿಗೆ ತಮ್ಮ ಆದಾಯದ ದೃಢೀಕರಣವಾಗಿ ನೀಡುವ ದಾಖಲೆಯಾಗಿದೆ. ಜೆ ಫಾರ್ಮ್ ಡಿಜಿಟಲೀಕರಣಗೊಳ್ಳುವ ಮೊದಲು, ಏಜೆಂಟರು ಈ ದಾಖಲೆಗಳನ್ನು ರೈತರಿಗೆ ನೀಡುತ್ತಿದ್ದರು.
Share your comments