ಕೇಂದ್ರ ಸರ್ಕಾರವು ಈ ಬಾರಿಯ 2023-2024ನೇ ಸಾಲಿನ ಬಜೆಟ್‌ನಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ವಿಶೇಷ ಬಜೆಟ್‌ವೊಂದನ್ನು ಪರಿಚಯಿಸಿದೆ.
ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದೇನು,ಬಜೆಟ್ ಹೈಲೆಟ್ಸ್ ಇಲ್ಲಿದೆ!
ಮಹಿಳೆಯರು ಮತ್ತು ಮಕ್ಕಳಿಗಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ ದೊಡ್ಡ ಕೊಡುಗೆ ನೀಡಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪ್ರಾರಂಭಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇದರಲ್ಲಿ ಮಹಿಳೆಯರು 2 ಲಕ್ಷ ಉಳಿತಾಯ ಖಾತೆ ತೆರೆದು ಶೇ 7.5 ಬಡ್ಡಿ ಪಡೆಯಬಹುದು. ಈ ಘೋಷಣೆಗೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಹಿಳೆಯರಿಗೆ ಬಜೆಟ್ 2023: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಿದರು.
ಕೇಂದ್ರ ಬಜೆಟ್ 2023 ಮಹಿಳೆಯರಿಗೆ ಕಹಿಸುದ್ದಿ: ಚಿನ್ನ, ಬೆಳ್ಳಿ ದರ ತುಟ್ಟಿ! ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ ಇಲ್ಲಿದೆ ವಿವರ
ಈ ಬಾರಿಯ ಬಜೆಟ್‌ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಆರಂಭಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದು, ಮಹಿಳೆಯರಿಗೆ ಇದೊಂದು ದೊಡ್ಡ ಕೊಡುಗೆಯಾಗಿದೆ.
ಮಹಿಳೆಯರ 2 ಲಕ್ಷ ಉಳಿತಾಯಕ್ಕೆ ಶೇ.7.5 ಬಡ್ಡಿ ಸಿಗಲಿದೆ. ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ (ಮಹಿಳಾ ಸಮ್ಮಾನ್ ಬಚತ್ ಭದ್ರ ಯೋಜನೆ)
ದೇಶದ ಅನೇಕ ಮಹಿಳೆಯರು ಈಗ ಮಹಿಳಾ ಸಮ್ಮಾನ್ ಯೋಜನೆ ಮೂಲಕ ಗಣನೀಯ ಉಳಿತಾಯ ಮಾಡಬಹುದು.
ಮಹಿಳೆಯರಿಗಾಗಿ ಇರುವ ಈ ವಿಶೇಷ ಯೋಜನೆಯಡಿ ಮಹಿಳೆಯರು ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ 2 ಲಕ್ಷ ರೂಪಾಯಿಯ ವರೆಗೆ ಹೂಡಿಕೆ ಮಾಡಬಹುದು. ಬಡ್ಡಿಯನ್ನು
7.5% ಕ್ಕೆ ಪಾವತಿಸಲಾಗುವುದು ಮತ್ತು ಯೋಜನೆಯು ಮಾರ್ಚ್ 2025 ರವರೆಗೆ ಅನ್ವಯಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ಈ ಯೋಜನೆಯ ಮೂಲಕ, ನೀವು ಎರಡು ವರ್ಷಗಳವರೆಗೆ ಉಳಿತಾಯ ಖಾತೆಯಲ್ಲಿ 2 ಲಕ್ಷದ ವರೆಗೆ ಠೇವಣಿ ಇರಿಸಬಹುದು ಮತ್ತು ಶೇಕಡಾ 7.5 ಬಡ್ಡಿಯನ್ನು ಪಡೆಯಬಹುದು.
ಜಯಲಲಿತಾಗೆ ಸೇರಿದ್ದ 11,000 ಸಾವಿರ ರೇಷ್ಮೆ ಉಡುಪು ಹರಾಜಿಗೆ!
ಅಲ್ಲದೆ, ಈ ಯೋಜನೆಯನ್ನು ಎರಡು ವರ್ಷಗಳಲ್ಲಿ ಯಾವಾಗ ಬೇಕಾದರೂ ಹಿಂಪಡೆಯುವ ಸೌಲಭ್ಯವಿದೆ.
ಮಹಿಳೆಯರು ಮತ್ತು ಮಕ್ಕಳಿಗಾಗಿ ಹಣಕಾಸು ಸಚಿವರು ಯಾವ ಘೋಷಣೆಗಳನ್ನು ಮಾಡಿದ್ದಾರೆ?
ಮಹಿಳೆಯರ ಆರ್ಥಿಕತೆ ಸುಧಾರಿಸಲಿದೆ.
ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು. ಮಕ್ಕಳು ಮತ್ತು ಯುವಕರಿಗಾಗಿ ಡಿಜಿಟಲ್ ಲೈಬ್ರರಿಗಳನ್ನು ಸಿದ್ಧಪಡಿಸಲಾಗುವುದು.
ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ 81 ಲಕ್ಷ ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಗುಂಪುಗಳಿಗೆ ಜೋಡಿಸಲಾಗಿದೆ.
ಸ್ವಸಹಾಯ ಗುಂಪನ್ನು ಆರ್ಥಿಕ ಅಭಿವೃದ್ಧಿಯ ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೃಹತ್ ಉತ್ಪಾದನಾ ಉದ್ಯಮಗಳನ್ನು ರಚಿಸಲಾಗುವುದು ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದಾರೆ.
Share your comments