1. ಸುದ್ದಿಗಳು

ಬದನೆಕಾಯಿ: ಕಾಯಿ ಕೊರಕ ರೋಗಕ್ಕೆ ಕಾರಣ ಮತ್ತು ಪರಿಹಾರ ಏನು..?

KJ Staff
KJ Staff
ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಜನ ಬದನೆ ಬೆಳೆಯುವುದನ್ನು ತುಂಬಾ ಕಡಿಮೆ ಮಾಡಿದ್ದಾರೆ ಕಾರಣ ಈ ಕೊಳೆಯುವ ರೋಗ. ಬದನೆಗೆ ಬರುವ ಕಾಯಿ ಕೊರಕ ಮತ್ತು ಕಾಯಿ ಕೊಳೆಯುವ ರೋಗ ಎಷ್ಟು ಔಷಧಿ ಹೊಡೆದರೂ ನಿವಾರಣೆಯಾಗುವುದಿಲ್ಲ. ಬೆಳೆ ಉತ್ಪತ್ತಿಗಿಂತ ಕೀಟ- ರೋಗ ನಾಶಕ ಔಷಧಿಗೇ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಬದನೆ ಬೆಳೆಸಲ್ಪಡುವ ಈ ಪ್ರದೇಶಗಳಲ್ಲಿ ಸುತ್ತಾಡಿ, ಬದನೆ ಬೆಳೆಯುವ ಹೊಲವನ್ನು ವೀಕ್ಷಿಸಿದರೆ ತಿಳಿಯುತ್ತದೆ, ಈ ರೈತರು ಬೆಳೆಯುವುದಕ್ಕಿಂತ ಹೆಚ್ಚು ಪ್ರಮಾಣವನ್ನು ರೋಗದಿಂದ ನಷ್ಟಮಾಡಿಕೊಳ್ಳುತ್ತಿದ್ದಾರೆ ಎಂಬ ಸತ್ಯ. ಬದನೆ ಗಿಡದಲ್ಲಿ ಕಾಯಿಗಳು ಬೆಳೆಯುತ್ತಿದ್ದಂತೇ ಕೊಳೆತು ಹೋಗುವುದು, ಕ್ರಮೇಣ ಗಿಡವೇ ಬಾಡಿ ಸಾಯುವುದನ್ನು ಕಾಣಬಹುದು.

Papaya! (ಪಪ್ಪಾಯಿ) Dengue ನಿಂದ ಮುಕ್ತಿ!

ಮಜ್ಜಿಗೆಗಿಂತ ಮತ್ತೊಂದು ಮದ್ದು ಬೇಕೆ..? ಬೆರಗುಗೊಳಿಸುತ್ತೆ ಇದರ ಪ್ರಯೋಜನಗಳು

ಕಾಯಿ ಕೊಳೆಯಲು ಕಾರಣ:
ಇದು ಯಾವ ಕಾರಣಕ್ಕೆ ಆಗುತ್ತದೆ, ಪರಿಹಾರ ಏನು ಎಂಬ ಬಗ್ಗೆ ಬಹುತೇಕ ರೈತರಿಗೆ ಮಾಹಿತಿ ಇಲ್ಲ. ಬೆಳೆಗಾರರು ಸ್ಥಳೀಯ ಕೀಟನಾಶಕ,ಗೊಬ್ಬರ ಮಾರಾಟಗಾರಿಂದ ಬೆಳೆ ಸಲಹೆ ಪಡೆಯುತ್ತಾರೆ. ಅವರು ಕೊಟ್ಟ ಔಷಧಿ ಕೆಲವೊಮ್ಮೆ ಪರಿಣಾಮಕಾರಿಯಾದರೆ ಮತ್ತೆ ಕೆಲವೊಮ್ಮೆ ಫಲ ನೀಡದೆಯೂ ಇರುತ್ತದೆ. ಇದು ಒಂದು ಬೈಟ್ ರೋಗ Phormnopsis blight ( ಬೈಟ್ = ಶಿಲೀಂದ್ರ ಜಾತಿಯ ಪರೋಪ ಜೀವಿಯಿಂದ ಉಂಟಾಗುತ್ತದೆ. ಕಪ್ಪಗಾಗುವ, ಒಣಗುವ, ಕೊಳೆಯುವ ರೋಗ) ಇದು ಎಲೆಗಳಿಗೆ, ಕಾಂಡಕ್ಕೆ, ಕಾಯಿಗಳಿಗೂ ಬರುತ್ತದೆ.

ಇದು ಬೆಂದಂತೆ ಕಂಡು ಬರುತ್ತದೆ. ಕಾಯಿಯ ಯಾವುದೇ ಭಾಗಕ್ಕೂ ಇದು ಬಾಧಿಸಬಹುದು. ಮೊದಲು ಸಣ್ಣ ಚುಕ್ಕೆಯಿಂದ ಪ್ರಾರಂಭವಾಗಿ ಒಂದೆರಡು ದಿನದಲ್ಲಿ ಹೆಚ್ಚು ಜಾಗಕ್ಕೆ ವಿಸ್ತಾರವಾಗುತ್ತದೆ. ಬದನೆಯಲ್ಲಿ ಇದು ಸ್ವಲ್ಪ ದೊಡ್ಡ ರೋಗವೆಂದೇ ಹೇಳಬಹುದು.ಬದನೆ ಬೆಳೆಯ ಕಾಂಡ ಕೊರಕ ಹಾಗೂ ಕಾಯಿ ಕೊರಕ ರೋಗಕ್ಕೆ ಜೈವಿಕ ತಂತ್ರಜ್ಞಾನದ ಮೂಲಕ ಪರಿಹಾರವೊಂದನ್ನು ಕಂಡುಹಿಡಿಯಲಾಗಿದೆ. ಹೌದು. ಬದನೆ ಬೆಳೆಯ ಕಾಂಡ ಕೊರಕ ಹಾಗೂ ಕಾಯಿ ಕೊರಕ ಹುಳುವಿನ ನಿಯಂತ್ರಣ ಸಾಧ್ಯ.

ದಾಸವಾಳದ ಹೂವಿನಲ್ಲಿದೆ ಅದ್ಬುತ ರಹಸ್ಯ! ನೀವು ಇದನ್ನೂ ತಿಳಿಯಲೆಬೇಕು!

ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಪರೋಪ ಜೀವಿಯಾದ ಟ್ರೈಕೋಗ್ರಾಮ ಕಿಲ್ಲೋನಿಸ್ ಹಾಗೂ ಬ್ರಾಸಿಲಸ್ ಟುರೆನ್ ಜೆನಿಸ್ ಎಂಬ ದ್ರಾವಣವನ್ನು ಸಿಂಪಡಿಸುವುದರಿಂದ ಕೊರಕ ಹುಳುವಿನ ಮೊಟ್ಟೆ ಹಾಗೂ ತೆವಳುವ ಹುಳುವನ್ನು ನಿಯಂತ್ರಿಸಬಹುದು. ಗಿಡ ನಾಟಿ ಮಾಡಿದ 1ತಿಂಗಳ ನಂತರ ಟ್ರೈಕೋಗ್ರಾಮ ಕಿಲ್ಲೋನಿಸ್ ಎಂಬ ಪರೋಪಜೀವಿಯನ್ನು ಹಾಕಬೇಕು.

Butter milk ‍& Curd: ಮಜ್ಜಿಗೆ ಮತ್ತು ಮೊಸರು ಯಾವುದು ಬೆಸ್ಟ್‌..?

ಹೆಚ್ಚು ಉಪ್ಪು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಬದನೆ ಹೂವಿನ ಪ್ರಮಾಣ ಹೆಚ್ಚಾಗಿದ್ದಾಗ ಬ್ರಾಸಿಲಸ್ ಟುರೆನ್ ಜೆನಿಸ್ ದ್ರಾವಣವನ್ನು 10ದಿನಗಳ ಅಂತರದಲ್ಲಿ ಪ್ರತಿ ಲೀಟರ್ ನೀರಿಗೆ ಒಂದು ಎಂ.ಎಲ್ ನಂತೆ 2 ಬಾರಿ ಸಿಂಪಡಿಸಬೇಕು. ಈ ವಿಧಾನದಿಂದ ಕಾಯಿಕೊರಕ ಹುಳುವಿನ ಸಂಖ್ಯೆಯು ಶೇ. 75ರಿಂದ 95ರವರೆಗೆ ಕಡಿಮೆಯಾಗಿ ಫಸಲು ಚನ್ನಾಗಿ ಬರುತ್ತದೆ. ಈ ವಿಧಾನವನ್ನು ಎಲ್ಲ ಜಾತಿಯ ಬದನೆ ಬೆಳೆಯಲ್ಲಿ ಕಾಂಡ ಮತ್ತು ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ ಬಳಸಬಹುದು ಎಂದು ಅವರು ತಿಳಿಸುತ್ತಾರೆ.ಗಳೂರು ಹಾಗೂ ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿನ ಬದನೆ ತೋಟಗಳಲ್ಲಿ ಈಗಾಗಲೇ ಈ ವಿಧಾನಗಳನ್ನು ಅಳವಡಿಸಲಾಗಿದ್ದು, ಕಾಯಿಕೊರಕ ಹುಳುಗಳನ್ನು ನಿಯಂತ್ರಿಸಲಾಗಿದೆ.ಬ್ರಾಸಿಲಸ್ ಟುರೆನ್ ಜೆನಿಸ್ ಬ್ರಾಸಿಲಸ್ ಟುರೆನ್ ಜೆನಿಸ್ ಉಪಯೋಗಕ್ಕಾಗಿ ಪ್ರತಿ ವಾರ ಸುಮಾರು 1000-1500 ರೂ ಖರ್ಚಾಗುತ್ತದೆ. ಆದರೆ ಜೈವಿಕ ತಂತ್ರಜ್ನಾನ ವಿಧಾನದಿಂದ 150-200 ರೂ ಮಾತ್ರ ಖರ್ಚಾಗಲಿದೆಯಂತೆ.

7th Pay Commission: ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಿಗಲಿದೆಯಾ ಈ ಸಂತಸದ ಸುದ್ದಿ? ಇಲ್ಲಿದೆ ಪೂರ್ತಿ ಲೆಕ್ಕಾಚಾರ..

pearl farming: ಭಾರೀ ಲಾಭದಾಯಕ ಮುತ್ತು ಕೃಷಿಗೆ ಶೇ.50ರಷ್ಟು ಸಹಾಯಧನ..ಹೇಗೆ ಗೊತ್ತಾ..?

Published On: 19 April 2022, 03:08 PM English Summary: brinjal desease solution

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2023 Krishi Jagran Media Group. All Rights Reserved.