1. ಸುದ್ದಿಗಳು

ಯಾವ ಪ್ಯಾಲೇಸ್‌ಗೂ ಕಮ್ಮಿ ಇಲ್ಲ ಬೆಂಗಳೂರು ಏರ್‌ಪೋರ್ಟ್‌ನ 2ನೇ ಟರ್ಮಿನಲ್‌!: PHOTOS

Maltesh
Maltesh
Bengaluru Kempegowda International Airport Terminal 2 Photos

ಸುಮಾರು 5000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ  `ಟರ್ಮಿನಲ್ 2’ ಅನ್ನು ನವೆಂಬರ್ 11 ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

Bengaluru Kempegowda International Airport Terminal 2 Photos
Bengaluru Kempegowda International Airport Terminal 2 Photos

ಟರ್ಮಿನಲ್‌ 2’ ಉದ್ಘಾಟನೆಯೊಂದಿಗೆ, ವಿಮಾಣ ನಿಲ್ದಾಣದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ, ಚೆಕ್-ಇನ್ ಮತ್ತು ವಲಸೆ ಕೇಂದ್ರದ ಕೌಂಟರ್‌ಗಳು ದ್ವಿಗುಣಗೊಳ್ಳಲಿದ್ದು, ಇರಿಂದ ಜನರಿಗೆ ಅಪಾರವಾಗಿ ಸಹಾಯಕವಾಗಲಿದೆ. ಇದರಿಂದ ವಾರ್ಷಿಕ ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗಲಿದೆ. ಪ್ರಸ್ತುತ ವಾರ್ಷಿಕ 2.5 ಕೋಟಿ  ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ನಿಲ್ದಾಣ ಹೊಂದಿದೆ.

ಇದನ್ನೂ ಓದಿರಿ: ಕುರಿಗಾಹಿಗಳಿಗೆ ಭರ್ಜರಿ ಸುದ್ದಿ: ಸರ್ಕಾರದಿಂದ ತಲಾ 20 ಕುರಿ 1 ಮೇಕೆ ಉಚಿತ, ಸಿಎಂ ಬೊಮ್ಮಾಯಿ ಘೋಷಣೆ!

Bengaluru Kempegowda International Airport Terminal 2 Photos
Bengaluru Kempegowda International Airport Terminal 2 Photos

ಪ್ರಯಾಣಿಕರಿಗೆ "ಉದ್ಯಾನದಲ್ಲಿ ನಡಿಗೆ"ಯ ಅನುಭವವಾಗಲಿದೆ. ಪ್ರಯಾಣಿಕರು 10,000ಕ್ಕೂ ಹೆಚ್ಚು ಚದರ ಮೀಟರ್ ಹಸಿರು ಗೋಡೆಗಳು, ತೂಗು ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಹಾದು ಹೋಗುತ್ತಾರೆ ಮತ್ತು ಈ ಉದ್ಯಾನಗಳನ್ನು ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲೇ ನಿರ್ಮಿಸಲಾಗಿದೆ.

Bengaluru Kempegowda International Airport Terminal 2 Photos
Bengaluru Kempegowda International Airport Terminal 2 Photos

ಕ್ಯಾಂಪಸ್‌ನಾದ್ಯಂತ ನವೀಕರಿಸಬಹುದಾದ ಇಂಧನದ 100% ಬಳಕೆಯೊಂದಿಗೆ ಈ ವಿಮಾನ ನಿಲ್ದಾಣವು ಈಗಾಗಲೇ ಸುಸ್ಥಿರತೆಯಲ್ಲಿ ಒಂದು ಮೈಲುಗಲ್ಲನ್ನು ಸ್ಥಾಪಿಸಿದೆ. ಟರ್ಮಿನಲ್ 2 ಅನ್ನು ಸುಸ್ಥಿರತೆ ತತ್ವಗಳೊಂದಿಗೆ ಸಂಯೋಜಿಸಿದ ವಿನ್ಯಾಸದೊಂಧಿಗೆ ನಿರ್ಮಿಸಲಾಗಿದೆ.

Bengaluru Kempegowda International Airport Terminal 2 Photos
Published On: 10 November 2022, 10:41 AM English Summary: Bengaluru Kempegowda International Airport Terminal 2 Photos

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.