1. ಸುದ್ದಿಗಳು

ಕೂದಲು ಉದುರುವಿಕೆಗೆ ಬೇಸತ್ತು ಯುವಕ ಆತ್ಮಹತ್ಯೆ!

Maltesh
Maltesh
Tired of hair loss, young man commits Death

ಮನುಷ್ಯ ಅಂದ್ಮೇಲೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಸಹಜವಾಗಿರುತ್ತವೆ. ಅದೇ ರೀತಿ ಇತ್ತೀಚಿನ ಒತ್ತಡದ ಕಾಲಮಾನದಲ್ಲಿ ಹೆಚ್ಚಿನ ಜನರು ಕೂದಲು ಉದುರುವಿಕೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆದರೆ ವಿಚಿತ್ರ ಎಂಬಂತೆ ಇಲ್ಲೊಬ್ಬ ಯುವಕ ಕೂದಲು ಉದುರುವಿಕೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೇರಳದ ಕೋಝಿಕೋಡ್‌ನ ಪ್ರಭಾಕರನ್ ಅವರ ಪುತ್ರ ಪ್ರಶಾಂತ್ (26) ಅಕ್ಟೋಬರ್ 1 ರಂದು ಉಳ್ಳಿಯೇರಿ ಬಳಿಯ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂದಲು ಉದುರುವಿಕೆಯಿಂದ ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿ ಒಂದು ತಿಂಗಳಾದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆತನ ಸಂಬಂಧಿಕರು ದೂರಿದ್ದಾರೆ.

ಇದನ್ನೂ ಓದಿರಿ: ಕುರಿಗಾಹಿಗಳಿಗೆ ಭರ್ಜರಿ ಸುದ್ದಿ: ಸರ್ಕಾರದಿಂದ ತಲಾ 20 ಕುರಿ 1 ಮೇಕೆ ಉಚಿತ, ಸಿಎಂ ಬೊಮ್ಮಾಯಿ ಘೋಷಣೆ!

ಔಷಧಿ ಸೇವಿಸಿದರೂ ಕೂದಲು ಉದುರುವ ಸಮಸ್ಯೆ ವಾಸಿಯಾಗದ ಹಿನ್ನೆಲೆಯಲ್ಲಿ  ಬೇಸತ್ತ ಯುವಕ ಈ ನಿರ್ಧಾರಕ್ಕೆ ಬಂದಿದ್ದಾನೆ ಎನ್ನಲಾಗಿದೆ. ತನ್ನ ಸಾವಿಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಎಂದು ಪ್ರಶಾಂತ್ ಆತ್ಮಹತ್ಯೆ ಪತ್ರದಲ್ಲಿ ಬರೆದಿಟ್ಟಿದ್ದಾರೆ. 2014 ರಿಂದ ಸುಮಾರು ಆರು ವರ್ಷಗಳಿಂದ, ಪ್ರಶಾಂತ್ ಕೂದಲು ಉದುರುವಿಕೆಗಾಗಿ ಕೋಝಿಕ್ಕೋಡ್‌ನ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ವೈದ್ಯರು ಸೂಚಿಸಿದ ಔಷಧಿಯನ್ನು ಸೇವಿಸಿದ ನಂತರ ಅವರ ಹುಬ್ಬು ಹಾಗೂ ದೇಹದ ಮೇಲಿನ ಎಲ್ಲ ಕೂದಲುಗಳು ಸಹ ಉದುರಲು ಪ್ರಾರಂಭವಾಯಿತು ಎಂದು ವೈದ್ಯರ ವಿರುದ್ಧ ಆರೋಪಿಸಲಾಗಿದೆ. ಇನ್ನು  ಇದು ಅವರ ಮದುವೆಯ ಪ್ರಸ್ತಾಪಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದರಿಂದ, ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದುಕೊಂಡಿದ್ದರು ಎನ್ನಲಾಗಿದೆ. ಇನ್ನು ಈ ಸಂಬಂಧ ಮೃತ ಯುವಕನ ಕುಟುಂಬಸ್ಥರು ಅಥೋಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆ ಅವಶೇಷ ಸುಡುವ ರೈತರಿಗೆ ಪಿಎಂ ಕಿಸಾನ್‌ ಸಬ್ಸಿಡಿ ರದ್ದು, ₹5000 ದಂಡ!

Published On: 10 November 2022, 12:15 PM English Summary: Tired of hair loss, young man commits Death

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.