1. ಸುದ್ದಿಗಳು

ಬೆಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ಬಿಟ್ಟು ಹಾರಿದ ವಿಮಾನ!

Hitesh
Hitesh
Bangalore Airport: The plane left passengers behind

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನವೊಂದು ಶಟಲ್ ಬಸ್‌ನಲ್ಲಿ ಕಾಯುತ್ತಿದ್ದ  50ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ದೆಹಲಿಗೆ ಹಾರಿದ ಘಟನೆ ನಡೆದಿದೆ.

18 ವರ್ಷದವರೂ ಇನ್ಮುಂದೆ ಮದ್ಯ ಖರೀದಿಸಬಹುದು: ಹೊಸ ಮದ್ಯದಂಗಡಿಗೂ ಅಸ್ತು!

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು,  ಪ್ರಯಾಣಿಕರ ಕುರಿತು ಅಜಾಗರೂಕತೆ ಪ್ರದರ್ಶಿಸಿರುವ ಗೋ ಫಸ್ಟ್‌ ವಿಮಾನಯಾನ ಸಂಸ್ಥೆಗೆ ಘಟನೆ ಕುರಿತು ವರದಿ ನೀಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಕಾರಣ ಕೇಳಿದೆ.  

ಒಟ್ಟು 55 ಪ್ರಯಾಣಿಕರು ಜನವರಿ 9ರಂದು ದೆಹಲಿಗೆ ಹೊರಟ ಗೋ ಫಸ್ಟ್‌ ವಿಮಾನ ಏರಲು ಶಟಲ್‌ ಬಸ್‌ನಲ್ಲಿ ಕಾಯುತ್ತಿದ್ದರು. ಆದರೆ, ಅಜಾಗರೂಕತೆಯಿಂದ ವಿಮಾನಯಾನ ಸಂಸ್ಥೆ ಈ ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹಾರಿದೆ. ಬಳಿಕ 53 ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಯಿತು. ಇಬ್ಬರು ಪ್ರಯಾಣಿಕರು ಇದಕ್ಕೆ ನಿರಾಕರಿಸಿದ್ದು, ತಮ್ಮ ಟಿಕೆಟ್‌ ಹಣ ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ ಎಂದು ವರದಿ ಆಗಿದೆ.   

ವಿಮಾನ G8 116 (BLR-DEL) ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು  ಹೋಗಿದೆ. ಬಸ್‌ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.  ಕೇವಲ ಒಂದು ಬಸ್‌ನ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಿದೆ.

Weather Updates| ಉತ್ತರ ಭಾರತದಲ್ಲಿ ತೀವ್ರ ಚಳಿ: ಕಾನ್ಪುರದಲ್ಲಿ 98 ಜನ ಸಾವು !  

ರಾಜ್ಯದ 25 ತಾಲ್ಲೂಕುಗಳಲ್ಲಿ ಮಿನಿಟೆಕ್ಸ್‌ ಪಾರ್ಕ್‌: ಸಿ.ಎಂ ಬಸವರಾಜ ಬೊಮ್ಮಾಯಿ

ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ರಾಜ್ಯದ 25 ತಾಲ್ಲೂಕುಗಳಲ್ಲಿ ಮಿನಿ ಟೆಕ್ಸ್‌ಟೈಲ್‌ ಪಾರ್ಕ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.  

ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರ್ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. 

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ದರ ? 

ಹತ್ತಿಯ ಸಂಸ್ಕರಣೆಯಿಂದ ವಸ್ತ್ರ, ಸಿದ್ಧ ಉಡುಪು ತಯಾರಿಕೆ ಮತ್ತಿತರ ಹಂತಗಳನ್ನು ಒಳಗೊಂಡ ಟೆಕ್ಸ್‌ಟೈಲ್‌ ಪಾರ್ಕ್ ಸ್ಥಾಪಿಸುವ ಮೂಲಕ ನೇಕಾರರಿಗೆ ಅನುಕೂಲ ಮಾಡಿಕೊಡಬೇಕು ಎಂದಿದ್ದಾರೆ.

ಅಲ್ಲದೇ ಡಿಜಿಟಲ್ ವೇದಿಕೆಯ ಮೂಲಕ ಮಾರುಕಟ್ಟೆ ವಿಸ್ತರಿಸಬೇಕು. ಉತ್ಪನ್ನಗಳ ಗುಣಮಟ್ಟ ವೃದ್ಧಿಯಾದರೆ ರಫ್ತಿಗೂ ಅನುಕೂಲವಾಗುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತಿತರ ಆನ್‌ಲೈನ್‌ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದೆ ಎಂದು ತಿಳಿಸಿದರು.  

ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷ ಗೌಡ, ಕಾವೇರಿ ಹ್ಯಾಂಡ್‌ಲೂಮ್ಸ್‌ ಅಧ್ಯಕ್ಷ ಬಿ.ಜೆ. ಗಣೇಶ್‌  ಇದ್ದರು.

Aadhaar Card| ಆಧಾರ್ ಕಾರ್ಡ್ ನವೀಕರಣ: UIDAI ಟೋಲ್ ಫ್ರೀ ಸಂಖ್ಯೆ ಪರಿಚಯ  

Published On: 12 January 2023, 12:48 PM English Summary: Bangalore Airport: The plane left passengers behind

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.