1. ಸುದ್ದಿಗಳು

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ದರ ?

Hitesh
Hitesh
The rise in the price of gold again, what is the price of gold today

ಚಿನ್ನದ ದರವು ಕಳೆದು ಮೂರು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಚಿನ್ನ ಖರೀದಿಗೆ ಮುಂದಾಗಿರುವವರಿಗೆ ನಿರಾಸಕ್ತಿ ಮೂಡಿದೆ. ಚಿನ್ನದ ದರ ಹೆಚ್ಚಳವಾಗುತ್ತಿರುವುದು ಕಹಿಸುದ್ದಿಯಾಗಿದೆ. 

Aadhaar Card| ಆಧಾರ್ ಕಾರ್ಡ್ ನವೀಕರಣ: UIDAI ಟೋಲ್ ಫ್ರೀ ಸಂಖ್ಯೆ ಪರಿಚಯ

ಚಿನ್ನದ ದರ ಹೊಸ ವರ್ಷದ ಪ್ರಾರಂಭದಿಂದ ಹೆಚ್ಚಳವಾಗುತ್ತಲೇ ಇದೆ. ಪ್ರಸಕ್ತ ಬೆಂಗಳೂರು ಸೇರಿದಂತೆ ದೇಶದ ಪ್ರಮುಖನಗರಗಳಲ್ಲಿ ಇಂದಿನ ಚಿನ್ನದ ಬೆಲೆಯಲ್ಲಿ ಬದಲಾವಣೆ ಆಗಿರುವುದು ವರದಿ ಆಗಿದೆ. 

ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 51,350 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ 52,210 ಸಾವಿರ ರೂಪಾಯಿ, 51,300 ಸಾವಿರ ರೂಪಾಯಿ, 51,300 ಸಾವಿರ ರೂಪಾಯಿ  ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಭಾನುವಾರ ಚಿನ್ನದ ಬೆಲೆ 51,450 ರೂಪಾಯಿಗೆ ಹೆಚ್ಚಳವಾಗಿದೆ.

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಮದ್ಯ ಪೂರೈಕೆ ತಡೆಗೆ ಚಿಂತನೆ!

ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ -  5,130 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) -  5,596 ಆಗಿದೆ. ಇದೇ ರೀತಿ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ -  41,758 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 44,600 ರೂಪಾಯಿ ಮುಟ್ಟಿದೆ.

ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ -  51,300 ರೂಪಾಯಿ ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 55,960 ರೂಪಾಯಿ ಆಗಿದೆ.  ಅಲ್ಲದೇ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆಯೂ 5,13,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 5,59,600 ರೂಪಾಯಿ ತಲುಪಿದೆ.

ದೆಹಲಿಯ ಪೆರೇಡ್‌: ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ!  

The rise in the price of gold again, what is the price of gold today?

ಶನಿವಾರದ ದರಕ್ಕೆ ಹೋಲಿಸಿದರೆ ಭಾನುವಾರದ ಬೆಳ್ಳಿಯ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಸಾಮಾನ್ಯವಾಗಿ ಚಿನ್ನದಂತೆ ಬೆಳ್ಳಿ ಬೆಲೆಗಳಲ್ಲೂ ಬದಲಾವಣೆ ಆಗುವುದು ಸಾಮಾನ್ಯವಾಗಿ ವರದಿ ಆಗುತ್ತದೆ. ಕಳೆದ ಎರಡು ದಿನಗಳಲ್ಲಿ ಎರುಗತಿಯನ್ನು ಪ್ರದರ್ಶಿಸಿದ್ದ ಬೆಳ್ಳಿ ಇಂದು ನಿನ್ನೆಯ ಬೆಲೆಯಲ್ಲೇ ಮುಂದುವರೆದಿದ್ದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ರೂ. 71,800 ಆಗಿದೆ.

ಇನ್ನು ಡಿಸೆಂಬರ್‌ನಲ್ಲಿ ಬೆಳ್ಳಿ ತನ್ನ ಗರಿಷ್ಠ ಬೆಲೆ ರೂ. 72,300 ತಲುಪಿತ್ತು ಹಾಗೂ ಕನಿಷ್ಠ ಬೆಲೆ ರೂ. 63,600ಕ್ಕೆ ಕುಸಿದಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಬೆಳ್ಳಿ ಹಾಗೂ ಚಿನ್ನದ ದರದ ಏರಿಳಿತ ಯಾವ ರೀತಿಯಲ್ಲಿ ಇರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಬೆಂಗಳೂರಿನಲ್ಲಿ  ಭಾನುವಾರ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 744, ರೂ. 7,440 ಹಾಗೂ ರೂ. 74,400 ಗಳಾಗಿವೆ.

ಚಿನ್ನದ ಶುದ್ಧತೆಯನ್ನು ನೋಡುವುದು ಹೇಗೆ

ಚಿನ್ನದ ಪರಿಶುದ್ಧತೆಯನ್ನು ಕ್ಯಾರಟ್ ಮೂಲಕ ಗುರುತಿಸಲಾಗುತ್ತದೆ. ಈ ಕೆಳಗಿನಂತೆ ಚಿನ್ನದ ಶುದ್ಧತೆಯನ್ನು ಆಭರಣಗಳಲ್ಲಿ ನಮೂದಿಸಲಾಗುತ್ತದೆ.

  1. 24ಕ್ಯಾರಟ್‌: ಶೇ.99.9 ಶುದ್ಧತೆ
  2. 22 ಕ್ಯಾರಟ್‌: ಶೇ91.6 ಶುದ್ಧತೆ
  3. 20 ಕ್ಯಾರಟ್‌: ಶೇ.83.3 ಶುದ್ಧತೆ
  4. 18 ಕ್ಯಾರಟ್‌: ಶೇ.75 ಶುದ್ಧತೆ
  5. 14 ಕ್ಯಾರಟ್: ಶೇ.58.5 ಶುದ್ಧತೆ
  6. 10 ಕ್ಯಾರಟ್‌: ಶೇ.41.7 ಶುದ್ಧತೆ

ಹಾಲ್‌ಮಾರ್ಕ್‌ ಆಭರಣ ಖರೀದಿಸುವಾಗ ಈ ಅಂಶ ಗಮನದಲ್ಲಿರಲಿ

  1. ಬಿಐಎಸ್‌ (BIS) ಚಿಹ್ನೆ
  2. ಚಿನ್ನದ ಶುದ್ಧತೆ (ಉದಾಹರಣೆಗೆ 22 ಕ್ಯಾರಟ್‌ ಚಿನ್ನಕ್ಕೆ 916)
  3. ಹಾಲ್‌ಮಾರ್ಕ್ ಸೆಂಟರ್‌ ಮಾರ್ಕ್‌
  4. ಆಭರಣಕಾರರ ಗುರುತು  

    Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ 

Published On: 08 January 2023, 04:34 PM English Summary: The rise in the price of gold again, what is the price of gold today?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.