1. ಸುದ್ದಿಗಳು

ಶಬರಿಮಲೆ ಪ್ರಸಾದ ಮಾರಾಟಕ್ಕೆ ಕೇರಳ ಹೈಕೋರ್ಟ್‌ ತಡೆ ಕಾರಣವೇನು?

Hitesh
Hitesh
What is the reason for the Kerala High Court ban on the sale of Sabarimala Prasa?

ಕೇರಳದ ಪ್ರಖ್ಯಾತ ಶಬರಿಮಲೆ ದೇವಸ್ಥಾನದ ಪ್ರಸಾದ ಮಾರಾಟ ಹಾಗೂ ತಯಾರಿಕೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ.

ಬೆಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ಬಿಟ್ಟು ಹಾರಿದ ವಿಮಾನ!

ಪ್ರಸಾದದಲ್ಲಿ ಬಳಸಲಾಗುತ್ತಿರುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಪ್ರಮಾಣ ಕಂಡು ಬಂದ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯವು, ಪ್ರಸಾದ ಮಾರಾಟವನ್ನು ತಡೆಹಿಡಿಯುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಅಲ್ಲಿನ ಹೈಕೋರ್ಟ್ ಸೂಚನೆ ನಿರ್ದೇಶನ ನೀಡಿದೆ.

ದೇವಸ್ಥಾನದ ಪ್ರಸಾದ ವಿತರಣೆ ಮಾಡಲು ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್‌ ಪ್ರಸಾದವನ್ನು ಪರೀಕ್ಷೆ ಮಾಡುವಂತೆ ಸೂಚನೆ ನೀಡಿತ್ತು. ಕೇರಳ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಪರೀಕ್ಷೆಗಳನ್ನು ಕಳೆದ ವಾರ ನಡೆಸಲಾಗಿತ್ತು. ಇದರಂತೆ ತಿರುವನಂತಪುರದ ರಾಜ್ಯ ಆಹಾರ ಸುರಕ್ಷಾ ಪ್ರಾಧಿಕಾರದ ಲ್ಯಾಬ್‌ ಮತ್ತು ಕೊಚ್ಚಿಯಲ್ಲಿರುವ ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಲ್ಯಾಬ್‌ಗಳಲ್ಲಿ ಅರವಣ ಪಾಯಸಂ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಮಿತಿ ಮೀರಿದ ಕೀಟನಾಶಕದ ಅಂಶ ಇರುವುದು ಸಾಬೀತಾಗಿದೆ.

18 ವರ್ಷದವರೂ ಇನ್ಮುಂದೆ ಮದ್ಯ ಖರೀದಿಸಬಹುದು: ಹೊಸ ಮದ್ಯದಂಗಡಿಗೂ ಅಸ್ತು!

ಲ್ಯಾಬ್‌ಗಳ ಪರೀಕ್ಷಾ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ವರದಿ ಪರಿಶೀಲಿಸಿದ ನ್ಯಾಯಾಲಯವು ಪರೀಕ್ಷೆಗೆ ಒಳಪಡಿಸಿದ ಬ್ಯಾಚ್‌ನ ಪ್ರಸಾದ ವಿತರಣೆ ಮಾಡಬಾರದು ಎಂದು ಕೋರ್ಟ್‌ ದೇವಸ್ವಂ ಬೋರ್ಡ್‌ಗೆ ಸೂಚನೆ ನೀಡಿದೆ.

ಇದೀಗ ಈ ಬಗ್ಗೆ ನಿರ್ಧಾರ ಕೈಗೊಂಡಿರುವ ದೇವಸ್ವಂ ಮಂಡಳಿ, ಸದ್ಯಕ್ಕೆ ಎಲ್ಲಾ ಯಂತ್ರಗಳನ್ನು ಸ್ವಚ್ಛಗೊಳಿಸಿ ಏಲಕ್ಕಿ ಇಲ್ಲದೆ ಪಾಯಸ ತಯಾರಿಸುತ್ತೇವೆ. ಗುರುವಾರದಿಂದ ನಾವು ಏಲಕ್ಕಿ ರಹಿತ ಪಾಯಸ ವಿತರಿಸುತ್ತೇವೆ ಮತ್ತು ಸಾವಯವ ಏಲಕ್ಕಿಯನ್ನು ಸಂಗ್ರಹಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.  

ತಿರುಪತಿಯ ಲಡ್ಡು, ಪಳನಿಯ ಪಂಚಾಮೃತ ಮಾದರಿಯಲ್ಲೇ ಶಬರಿಮಲೆ ಕ್ಷೇತ್ರದ ಪ್ರಸಾದ ಅರಾವಣಂ ಸಹ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಕ್ಕಿ, ಬೆಲ್ಲ, ತುಪ್ಪ ಹಾಗೂ ಏಲಕ್ಕಿ ಬಳಸಿ ಮಾಡುವ ಈ ಅರವಣಂ ಪ್ರಸಾದ ಪ್ರಸಿದ್ಧಿ ಗಳಿಸಿದೆ.  

Weather Updates| ಉತ್ತರ ಭಾರತದಲ್ಲಿ ತೀವ್ರ ಚಳಿ: ಕಾನ್ಪುರದಲ್ಲಿ 98 ಜನ ಸಾವು !  

ಅಂಚೆಯ ಮೂಲಕವೂ ಸಿಗುತ್ತೆ ಪ್ರಸಾದ!

ಶಬರಿಮಲೆಯ ಬಹು ಬೇಡಿಕೆಯ ಹಾಗೂ ಹೆಚ್ಚು ರುಚಿಕರವಾದ ಅರವಣ (ಪಾಯಸ) ಪ್ರಸಾದ ಮನೆ ಬಾಗಿಲಿಗೇ ಬರಲಿದೆ.

ಈ ಸಂಬಂಧ ಭಾರತೀಯ ಅಂಚೆ ಇಲಾಖೆಯು ತಿರುವಾಂಕೂರು ದೇವಸ್ಥಾನ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸ್ಪೀಡ್‌ ಪೋಸ್ಟ್‌ ಮೂಲಕ ರಾಜ್ಯಾದ್ಯಂತ ಮನೆ ಬಾಗಿಲಿಗೆ ಅಯ್ಯಪ್ಪಸ್ವಾಮಿ ಪ್ರಸಾದ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ.

ಭಕ್ತರು ಅಂಚೆ ಕಚೇರಿಗೆ ತೆರಳಿ ಪ್ರತಿ ಪ್ಯಾಕೇಟ್‌ ಪ್ರಸಾದಕ್ಕೆ 450 ರೂಪಾಯಿ ಪಾವತಿ ಮಾಡಿ,  ಇ-ಪಾವತಿ ಮೂಲಕ ಕೌಂಟರ್‌ನಲ್ಲಿ ಹಣ ಪಾವತಿಸಬಹುದು. ಒಂದು ರಸೀದಿ ಅಡಿ ಹತ್ತು ಪ್ಯಾಕೆಟ್‌ ಪ್ರಸಾದವನ್ನು ಬುಕ್‌ ಮಾಡಬಹುದಾಗಿದೆ. ಭಕ್ತರು ಮಾಡುವ ಪ್ರಸಾದ ಬುಕ್ಕಿಂಗ್‌ಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಅಂದರೆ ಭಕ್ತರು ಬೇರೆ ಬೇರೆ ರಸೀದಿಗಳನ್ನು ಪಡೆದು ಎಷ್ಟು ಬೇಕಾದರೂ ಪ್ಯಾಕೆಟ್‌ಗಳನ್ನು ಬುಕ್‌ ಮಾಡಬಹುದು ಎಂದು ಬೆಂಗಳೂರಿನ ಜಿಪಿಒ ಚೀಫ್‌ ಪೋಸ್ಟ್‌ ಮಾಸ್ಟರ್‌ ಕೆ. ರಾಧಾಕೃಷ್ಣ ತಿಳಿಸಿದರು. ಈ ಯೋಜನೆಯಡಿ ನಿತ್ಯ ನೂರಾರು ಭಕ್ತರು ಪ್ರಸಾದವನ್ನು ಬುಕ್‌ ಮಾಡುತ್ತಿದ್ದಾರೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ದರ ? 

What is the reason for the Kerala High Court ban on the sale of Sabarimala Prasa?

ಭಕ್ತರು ಅಂಚೆ ಕಚೇರಿಗೆ ತೆರಳಿ ಪ್ರತಿ ಪ್ಯಾಕೇಟ್‌ ಪ್ರಸಾದಕ್ಕೆ 450 ರೂಪಾಯಿ ಪಾವತಿ ಮಾಡಿ,  ಇ-ಪಾವತಿ ಮೂಲಕ ಕೌಂಟರ್‌ನಲ್ಲಿ ಹಣ ಪಾವತಿಸಬಹುದು. ಒಂದು ರಸೀದಿ ಅಡಿ ಹತ್ತು ಪ್ಯಾಕೆಟ್‌ ಪ್ರಸಾದವನ್ನು ಬುಕ್‌ ಮಾಡಬಹುದಾಗಿದೆ. ಭಕ್ತರು ಮಾಡುವ ಪ್ರಸಾದ ಬುಕ್ಕಿಂಗ್‌ಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಅಂದರೆ ಭಕ್ತರು ಬೇರೆ ಬೇರೆ ರಸೀದಿಗಳನ್ನು ಪಡೆದು ಎಷ್ಟು ಬೇಕಾದರೂ ಪ್ಯಾಕೆಟ್‌ಗಳನ್ನು ಬುಕ್‌ ಮಾಡಬಹುದು ಎಂದು ಬೆಂಗಳೂರಿನ ಜಿಪಿಒ ಚೀಫ್‌ ಪೋಸ್ಟ್‌ ಮಾಸ್ಟರ್‌ ಕೆ. ರಾಧಾಕೃಷ್ಣ ತಿಳಿಸಿದರು. ಈ ಯೋಜನೆಯಡಿ ನಿತ್ಯ ನೂರಾರು ಭಕ್ತರು ಪ್ರಸಾದವನ್ನು ಬುಕ್‌ ಮಾಡುತ್ತಿದ್ದಾರೆ.

Aadhaar Card| ಆಧಾರ್ ಕಾರ್ಡ್ ನವೀಕರಣ: UIDAI ಟೋಲ್ ಫ್ರೀ ಸಂಖ್ಯೆ ಪರಿಚಯ  

What is the reason for the Kerala High Court ban on the sale of Sabarimala Prasa?

ಯಾವ್ಯಾವ ಪ್ರಸಾದ ಪಾರ್ಸೆಲ್‌ ಬರುತ್ತದೆ

ಅರವಣ, ತುಪ್ಪ, ಅರಿಶಿನ-ಕುಂಕುಮ, ವಿಭೂತಿ ಮತ್ತು ಅರ್ಚನೆಯ ಪ್ರಸಾದವನ್ನು ಒಳಗೊಂಡ ಕಿಟ್‌ ಇದಾಗಿದೆ.

ರಾಯಚೂರಿನಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ವಸ್ತು ಪ್ರದರ್ಶನ

Published On: 12 January 2023, 02:39 PM English Summary: What is the reason for the Kerala High Court ban on the sale of Sabarimala Prasa?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.