1. ತೋಟಗಾರಿಕೆ

ಹಣ್ಣು ತೋಟಗಳ ನಿರ್ಮಾಣ ಮತ್ತು ನಿರ್ವಹಣೆ ತರಬೇತಿ ಜೂನ್ 19ರಂದು

ಬೀದರ್ ನಗರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜೂನ್ 19ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ‘ಹಣ್ಣು ತೋಟಗಳ ನಿರ್ಮಾಣ ಮತ್ತು ನಿರ್ವಹಣೆ’ ವಿಷಯ ಕುರಿತಂತೆ ಆನ್‌ಲೈನ್ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.

ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಬೆಳೆಗಳನ್ನು ಬೆಳೆಯುವ ರೈತರಿಗೆ ತಮ್ಮ ಹಣ್ಣಿನ ತೋಟಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು ಹೇಗೆ ಎಂಬ ಕುರಿತು ಸಲಹೆ, ಸೂಚನೆಗಳನ್ನು ನೀಡುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ, ದುಡಿಯುವ ಉದ್ದೇಶದಿಂದ ಹಳ್ಳಿಗಳನ್ನು ತೊರೆದು ಬೆಂಗಳೂರು ಮತ್ತಿತರ ನಗರಗಳಿಗೆ ವಲಸೆ ಹೋಗಿದ್ದ ಹೆಚ್ಚಿನ ಸಂಖ್ಯೆಯ ಯುವಕರು ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಈಗ ಸ್ವಗ್ರಾಮಗಳಿಗೆ ಮರಳಿದ್ದಾರೆ. ಹೀಗೆ ಮರಳಿದವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವರು ಹಣ್ಣಿನ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುತ್ತಿರುವುದು ಕಂಡುಬAದಿದೆ. ಇಂತಹ ಆಸಕ್ತ ಯುವ ಕೃಷಿಕರಿಗೆ ಹಣ್ಣಿನ ತೋಟಗಳನ್ನು ನಿರ್ಮಿಸುವುದು ಅಥವಾ ಬೆಳೆಸುವುದು ಹೇಗೆ ಮತ್ತು ಅವುಗಳ ನಿರ್ವಹಣೆ ಮಾಡುವುದು ಹೇಗೆ ಎಂಬ ಕುರಿತು ಅಗತ್ಯವಿರುವ ಮಾಹಿತಿಯನ್ನು ತರಬೇತಿ ಕಾರ್ಯಾಗಾರದಲ್ಲಿ ನೀಡಲಾಗುತ್ತದೆ.

ತೋಟಗಳ ವಿನ್ಯಾಸ, ಪ್ರಮುಖ ಹಣ್ಣು ಬೆಳಗಳ ಕಸಿ/ಸಸಿಗಳ ಆಯ್ಕೆ, ನಾಟಿ ವಿಧಾನ, ತೋಟಗಳ ನಿರ್ಮಾಣ ಮತ್ತು ನಿರ್ವಹಣೆಯ ತಾಂತ್ರಿಕತೆಗಳ ಕುರಿತು ಬೀದರ್‌ನ ಐಸಿಎಂಆರ್ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳಾದ ಡಾ. ನಿಂಗದಳ್ಳಿ ಮಲ್ಲಿಕಾರ್ಜುನ ಅವರು ಮಾಹಿತಿ ನೀಡಲಿದ್ದಾರೆ. ನಂತರ ರೈತರ ಪ್ರಶ್ನೆಗಳಿಗೆ ಉತ್ತರಿಸಿ, ಅವರೊಂದಿಗೆ ಚರ್ಚಿಸಿ ಅನುಮಾನಗಳನ್ನು ದೂರಮಾಡಲಿದ್ದಾರೆ.

ಬೀದರ ಜಿಲ್ಲೆಯ ಮಣ್ಣು ಮತ್ತು ಹವಾಗುಣ ತೋಟಗಾರಿಕೆಗೆ ಹೇಳಿ ಮಾಡಿಸಿಂತಿದೆ. ಜಿಲ್ಲೆಯಲ್ಲಿ ಹಣ್ಣು, ತರಕಾರಿ, ತೋಟಪಟ್ಟಿ ಹಾಗೂ ಸಾಂಬಾರು ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಮುಂಗಾರು ಅವಧಿಯು ಯಾವುದೇ ಬೆಳೆ ಬೆಳೆಯುವದಕ್ಕೆ, ಅದರಲ್ಲಿಯೂ ಹಣ್ಣು ಮತ್ತು ತೋಟಪಟ್ಟಿ ಗಿಡಗಳನ್ನು ನೆಡಲು ಸಕಾಲವಾಗಿದ್ದು, ಈ ನಿಟ್ಟಿನಲ್ಲಿ ರೈತರಿಗೆ ಗಿಡಗಳನ್ನು ನೆಡಲು ಹೊಸ ತೋಟಗಳನ್ನು ನಿರ್ಮಾಣ ಮಾಡಲು ಬೇಕಾಗಿರುವ ತಾಂತ್ರಿಕ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಜವಾಬ್ದಾರಿ ವಿಶ್ವವಿದ್ಯಾಲಯ ಮತ್ತು ಇಲಾಖೆಗಳ ಮೇಲಿದೆ. ಇದಕ್ಕೆ ಪೂರಕವಾಗಿ ಈ ಕೋವಿಡ್ 19 ಸಮಯದಲ್ಲಿ ರೈತರಿಗೆ ಬೇಕಾದ ತಾಂತ್ರಿಕತೆಗಳನ್ನು ಅವರು ಇರುವಲ್ಲಿಯೇ ಪಡೆದುಕೊಳ್ಳುವಂತಾಗಲು ಬೀದರ್ ನಗರದ ಐಸಿಎಂಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ಕೆವಿಕೆ- ಕೃಷಿ ಪಾಠ ಶಾಲೆ’ ಸರಣೀ ಆನ್ ಲೈನ್ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತೀ ಶನಿವಾರದಂದು ರೈತರಿಗಾಗಿ ಉಪಯುಕ್ತವಾಗಿರುವ ಈ ರೀತಿಯ ತರಗತಿಗಳನ್ನು ನಡೆಂಸಲಾಗುತ್ತಿದೆ. ಅದರಂತೆ ‘ಹಣ್ಣು ತೋಟಗಳ ನಿರ್ಮಾಣ ಮತ್ತು ನಿರ್ವಹಣೆ’ ಎಂಬುದು ಈ ವಾರದ ಪಠ್ಯ ವಿಷಯವಾಗಿದೆ.

ಇದೇ ಶನಿವಾರ ಅಂದರೆ, ಜೂನ್ 19ರಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಗೂಗಲ್ ಮೀಟ್ ವೇದಿಕೆಯಲ್ಲಿ ತರಬೇತಿ ಕಾರ್ಯಕ್ರಮ ಆರಂಭವಾಗಲಿದ್ದು, ಆಸಕ್ತ ರೈತಬಾಂಧವರು meet.google.com/sry-cvbi-bhf ಈ ಲಿಂಕ್ ಬಳಸಿಕೊಂಡು ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಬೀದರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ.ಸುನೀಲಕುಮಾರ ಎನ್.ಎಂ ಅವರು ಮನವಿ ಮಾಡಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.

Published On: 18 June 2021, 04:19 PM English Summary: training on construction and maintenance of fruit plantations

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.